ಧಾರವಾಡದಲ್ಲಿ ಯೋಗ ದಿನಾಚರಣೆ: ಆಸಕ್ತಿ ತೋರದ ಜನಪ್ರತಿನಿಧಿಗಳು

By

Published : Jun 21, 2023, 1:22 PM IST

thumbnail

ಧಾರವಾಡ: ವಿಶ್ವ ಯೋಗ ದಿನಾಚರಣೆ ಹಿನ್ನೆಲೆ ಧಾರವಾಡದಲ್ಲಿ ಗಣ್ಯರಿಗಾಗಿ ಅಧಿಕಾರಿಗಳು ಕಾಯುತ್ತ ನಿಂತ ದೃಶ್ಯಗಳು ಕಂಡು ಬಂದವು. ಜಿಲ್ಲಾಡಳಿತ ಮತ್ತು ಆಯುಷ್ಯ ಇಲಾಖೆ ಆರ್ ಎನ್ ಶೆಟ್ಟಿ ಮೈದಾನದಲ್ಲಿ ಹಮ್ಮಿಕೊಂಡಿದ್ದ ಯೋಗ ದಿನಾಚರಣೆ ಕಾರ್ಯಕ್ರಮ ತಡವಾಗಿ ಆರಂಭಗೊಂಡಿತು. ಬೆಳಗ್ಗೆಯಿಂದ ಮಕ್ಕಳು ಕಾಯುತ್ತ ಕುಳಿತಿದ್ದರೂ ಸಹ ಜನ ಪ್ರತಿನಿಧಿಗಳು ಕಾರ್ಯಕ್ರಮಕ್ಕೆ ಆಗಮಿಸಿರಲಿಲ್ಲ. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗಾಗಿ ಕಾಯ್ದಿಟ್ಟ ಜಾಗ ಖಾಲಿ ಖಾಲಿಯಿದ್ದವು. ಅವರಿಗಾಗಿ ಕಾಯ್ದಿಟ್ಟ ಜಾಗದಲ್ಲಿ ಕೊನೆಗೆ ಮಕ್ಕಳಿಗೆ ಅವಕಾಶ ನೀಡಲಾಯಿತು. ನಾಮಕಾವಾಸ್ತೆ ಕಾರ್ಯಕ್ರಮ ಆಯೋಜನೆ ಮಾಡಿದ್ದಾರೆ ಎಂಬ ಅನುಮಾನ ಮೂಡಿತು. 

ಬಳಿಕ‌ ಹೆಚ್ಚುವರಿ ಡಿಸಿ ಶಿವಾನಂದ ಭಜಂತ್ರಿ ಕಾರ್ಯಕ್ರಮ ಉದ್ಘಾಟಿಸಿದರು. ಧಾರವಾಡದ ವಿವಿಧ ಶಾಲೆಗಳ ಮಕ್ಕಳು ಯೋಗ ದಿನದಲ್ಲಿ ಭಾಗಿಯಾಗಿದ್ದರು. ಜಿಲ್ಲಾಮಟ್ಟದ ಕಾರ್ಯಕ್ರಮಕ್ಕೆ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು. ಯೋಗ ಪ್ರದರ್ಶನದ ಮಧ್ಯೆಯೇ ಟೀ ಶರ್ಟ್ ಹಂಚಿಕೆ ಮಾಡಲಾಯಿತು. ಬಳಿಕ ಕಾರ್ಯಕ್ರಮಕ್ಕೆ ನವಲಗುಂದ ಶಾಸಕ ಎನ್.ಎಚ್. ಕೋನರೆಡ್ಡಿ ತಡವಾಗಿ ಬಂದರು. ಜನಪ್ರತಿನಿಧಿಗಳಿಗಾಗಿ ಕಾದು ಕಾರ್ಯಕ್ರಮ ಆರಂಭಿಸಿದ್ದ ಆಯೋಜಕರು ಕಾರ್ಯಕ್ರಮ ನಡೆಯುತ್ತಿದ್ದಾಗ ಶಾಸಕರು ಆಗಮಿಸಿದರು.

ಇದನ್ನೂ ಓದಿ: World Yoga Day special: ಗುರುವಿಲ್ಲದೇ ಯೋಗ ಕಲಿತ ಆಧುನಿಕ ಏಕಲವ್ಯ 'ಬುಡನ್ ಮಲ್ಲಿಕ್ ಹೊಸಮನಿ'

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.