ಬೆಳಗಾವಿಯಲ್ಲಿ ಟಿಸಿ ಏರಿ ಆತಂಕ ಮೂಡಿಸಿದ ಯುವಕ; ಯುವಕನ ಹುಚ್ಚಾಟಕ್ಕೆ ಬೆಚ್ಚಿಬಿದ್ದ ಜನ - young man sitting on TC

By ETV Bharat Karnataka Team

Published : May 25, 2024, 10:07 AM IST

thumbnail
ಬೆಳಗಾವಿಯಲ್ಲಿ ಟಿಸಿ ಏರಿ ಹಾಡು ಹಾಡಿ, ಯುವಕನ ಹುಚ್ಚಾಟ..! (ETV Bharat)

ಬೆಳಗಾವಿ: ವಿದ್ಯುತ್ ಟ್ರಾನ್ಸಫರ್ಮರ್(ಟಿಸಿ) ಮೇಲೆ ಹಾಡು ಹಾಡುತ್ತ ಕುಳಿತು ಅಪರಿಚಿತ ಯುವಕನೋರ್ವ ಹೈಡ್ರಾಮಾ ಸೃಷ್ಟಿಸಿದ ಘಟನೆ ಬೆಳಗಾವಿ ಟಿಳಕ ಚೌಕ್​ನಲ್ಲಿ ನಿನ್ನೆ (ಶುಕ್ರವಾರ) ಸಂಜೆ ನಡೆದಿದೆ.

ಯುವಕನ ಹುಚ್ಚಾಟದಿಂದ ಸ್ಥಳೀಯರು ಬೆಚ್ಚಿ‌ ಬಿದ್ದಿದ್ದಾರೆ. ಅಲ್ಲದೇ ಎಷ್ಟೇ ಕೇಳಿಕೊಂಡರೂ ಆತ ಕೆಳಗೆ ಇಳಿಯಲೇ ಇಲ್ಲ. ಆತ ಹಾಡು ಹಾಡುತ್ತ ಕುಳಿತುಕೊಂಡಿದ್ದ. ಈ ದೃಶ್ಯ ಕಂಡ ಕೆಳಗಿದ್ದ ಜನರು ಗಾಬರಿಗೊಂಡಿದ್ದಾರೆ.

ಸ್ಥಳೀಯರು ಹೆಸ್ಕಾಂ ಕಚೇರಿಗೆ ಮಾಹಿತಿ ನೀಡುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಸಿಬ್ಬಂದಿ ವಿದ್ಯುತ್ ಸಂಪರ್ಕ ಕಡಿತಗೊಳಿಸಿದರು. ಕೊನೆಗೆ ಟಿಸಿ ಏರಿದ ಹೆಸ್ಕಾಂ ಸಿಬ್ಬಂದಿಯು ಆ ಯುವಕನನ್ನು ಹೊಡೆದು, ಬಡಿದು ಹರಸಾಹಸ ಪಟ್ಟು ಕೆಳಗಿಸುವಲ್ಲಿ ಯಶಸ್ವಿಯಾದರು. ಈ ಯುವಕ ಯಾರು? ಯಾಕೆ ಕುಳಿತಿದ್ದ ಎಂಬ ಕುರಿತು ಮಾಹಿತಿ ಲಭ್ಯವಾಗಿಲ್ಲ. ಖಡೇಬಜಾರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ: ಕರ್ಕಶ ಶಬ್ದ ಮಾಡುತ್ತಿದ್ದ ಬೈಕ್​ಗಳ ಸೈಲೆನ್ಸರ್ ನಾಶ ಮಾಡಿದ ಪೊಲೀಸರು: ವಿಡಿಯೋ - Noisy bike silencer destroyed

ಅಪರೂಪದ ಚಿಪ್ಪು ಹಂದಿ ರಕ್ಷಿಸಿದ ಅಗ್ನಿಶಾಮಕ ಇಲಾಖೆ ಸಿಬ್ಬಂದಿ: ವಿಡಿಯೋ - Pangolin Rescued

ABOUT THE AUTHOR

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.