thumbnail

ಶಿವಮೊಗ್ಗ: ಐತಿಹಾಸಿಕ ಚಂದ್ರಗುತ್ತಿ ರೇಣುಕಾಂಬ ದೇವಾಲಯದಲ್ಲಿ ₹43 ಲಕ್ಷ ಕಾಣಿಕೆ ಸಂಗ್ರಹ - Chandragutti Renukamba Temple

By ETV Bharat Karnataka Team

Published : Jun 14, 2024, 11:42 AM IST

ಶಿವಮೊಗ್ಗ: ಚಂದ್ರಗುತ್ತಿಯ ಐತಿಹಾಸಿಕ ಹಾಗೂ ಪುರಾಣ ಪ್ರಸಿದ್ಧ ಶ್ರೀ ರೇಣುಕಾಂಬ ದೇವಸ್ಥಾನದ ಕಾಣಿಕೆ ಹುಂಡಿ ಎಣಿಕೆ ಕಾರ್ಯ ದೇವಸ್ಥಾನದ ಆಡಳಿತ ಮಂಡಳಿ ಕಚೇರಿಯಲ್ಲಿ ನಡೆಯಿತು. ಸೊರಬ ತಾಲೂಕು ದಂಡಾಧಿಕಾರಿ  ಹುಸೇನ್ ಸರಕಾವಸ್ ಅವರ ಸಮ್ಮುಖದಲ್ಲಿ ಜಾತ್ರೆ ಮತ್ತು ಹುಣ್ಣಿಮೆ ನಂತರದಲ್ಲಿ ಭಕ್ತರ ಮೂಲಕ ಬಂದಂತಹ ಕಾಣಿಕೆ ಹಣ ಎಣಿಕೆ ಕಾರ್ಯ ನಡೆಸಲಾಯಿತು.

ಕಳೆದ ಬಾರಿ 22,53,700 ರೂ. ಕಾಣಿಕೆ ಸಂಗ್ರಹವಾಗಿತ್ತು. ಈ ಬಾರಿ ದೇವಸ್ಥಾನದ ಕಾಣಿಕೆ ಹುಂಡಿಯಲ್ಲಿ 43,61,080, ರೂ. ಸಂಗ್ರಹವಾಗಿದೆ.  ಎಣಿಕೆ ಕಾರ್ಯ ನಡೆಯುವ ಕೊಠಡಿ ಸುತ್ತ ಸಿಸಿ ಕ್ಯಾಮರಾ ಆಳವಡಿಸಲಾಗಿತ್ತು. ಕಾಣಿಕೆ ಎಣಿಕೆ ಕಾರ್ಯದಲ್ಲಿ ನಾಡಕಚೇರಿ ಉಪ ತಹಶೀಲ್ದಾರ್ ಲಲಿತ ,  ಶಿರಸ್ತೇದಾರ್ ಎಸ್. ನಿರ್ಮಲಾ ಪ್ರಭಾಕರ್, ರಾಜಸ್ವ ನಿರೀಕ್ಷಕ ವಿ.ಎಲ್ ಶಿವಪ್ರಸಾದ್, ದೇವಸ್ಥಾನದ ಕಾರ್ಯ ನಿರ್ವಹಣಾಧಿಕಾರಿ ಪ್ರಮೀಳಾ ಕುಮಾರಿ, ಮುಜರಾಯಿ ಇಲಾಖೆ ವಿಷಯ ನಿರ್ವಾಹಕಿ ಎಂ‌.ಶೃತಿ ಹಾಗೂ ಕೆನರಾ ಬ್ಯಾಂಕ್  ಶಾಖೆಯ ಸಹಾಯಕ ವ್ಯವಸ್ಥಾಪಕರು, ಕಂದಾಯ ಇಲಾಖೆ ಗ್ರಾಮ ಲೆಕ್ಕಿಗರು, ಗ್ರಾಮ ಸಹಾಯಕರು, ದೇವಸ್ಥಾನದ ಸಿಬ್ಬಂದಿ ಪಾಲ್ಗೊಂಡಿದ್ದರು.

ಇದನ್ನೂ ಓದಿ: ಬಾಗಲಕೋಟೆ: ಮಹಿಳಾ ವುಶು ಕ್ರೀಡಾಕೂಟಕ್ಕೆ ತೆರೆ; ಸಮಗ್ರ ಪ್ರಶಸ್ತಿ ಗೆದ್ದ ತಮಿಳುನಾಡು - Wushu Games End

ABOUT THE AUTHOR

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.