thumbnail

ತುಮಕೂರು: ಮುಂಗಾರು ಬಿತ್ತನೆಗೆ ಸಚಿವ ಪರಮೇಶ್ವರ್ ವಿನೂತನ ಚಾಲನೆ - Monsoon Sowing

By ETV Bharat Karnataka Team

Published : Jun 14, 2024, 4:32 PM IST

ತುಮಕೂರು: ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್​ ಇಂದು ಕೊರಟಗೆರೆ ತಾಲೂಕಿನ ಮಲ್ಲೇಶ್ವರ ಗ್ರಾಮದಲ್ಲಿ ಮುಂಗಾರು ಬಿತ್ತನೆಗೆ ಚಾಲನೆ ನೀಡಿದರು. 

ಹಂಚಿಹಳ್ಳಿ ಗ್ರಾಮ ಪಂಚಾಯತಿಯ ಗೊಲ್ಲದೇವನಹಳ್ಳಿಯಲ್ಲಿ ಮಲ್ಲೇಶ್ವರ ರೈತ ಚನ್ನಪ್ಪ ಅವರ ಜಮೀನಿನಲ್ಲಿ ತೊಗರಿ, ಬಿಆರ್‌ಜಿ 05 ಸೊರಗು ನಿರೋಧಕ ಬೀಜ ಬಿತ್ತನೆ ಮಾಡಿದರು. 

ಅಲ್ಲದೇ ಟ್ರ್ಯಾಕ್ಟರ್ ಚಲಾಯಿಸುವ ಮೂಲಕವೂ ಪರಮೇಶ್ವರ್ ಗಮನ ಸೆಳೆದರು. ಈ ವೇಳೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಲ್ಲಾ ಪಂಚಾಯತ್ ಸಿಇಒ ಪ್ರಭು, ತಹಶೀಲ್ದಾರ್ ಮಂಜುನಾಥ್ ಇದ್ದರು.

ಬೆಳಗಾವಿಯಲ್ಲಿ ಬಿತ್ತನೆ ಚುರುಕು: ಈ ಬಾರಿ ಜಿಲ್ಲೆಯಲ್ಲಿ ಮುಂಗಾರು ಮಳೆ ಉತ್ತಮ ಆರಂಭ ಪಡೆದಿದ್ದರಿಂದ ರೈತರು ಸಂತಸಗೊಂಡಿದ್ದಾರೆ. ಬಿತ್ತನೆ ಚುರುಕೊಂಡಿದೆ. ಕೃಷಿ ಚಟುವಟಿಕೆಯಲ್ಲಿ ರೈತರು ನಿರತರಾಗಿದ್ದಾರೆ.

ಜಿಲ್ಲೆಯಾದ್ಯಂತ ಭತ್ತ, ಗೋವಿನ ಜೋಳ, ಸೋಯಾಬಿನ್, ಹತ್ತಿ, ತೊಗರಿ, ಹೆಸರು, ಶೇಂಗಾ ಸೇರಿದಂತೆ ಮತ್ತಿತರ ಬೆಳೆಗಳ ಬಿತ್ತನೆ ಜೋರಾಗಿದೆ. ರೈತರು ಕುಟುಂಬಸಮೇತರಾಗಿ ಮತ್ತು ಕೂಲಿ ಕಾರ್ಮಿಕರೊಂದಿಗೆ ಬಂದು ಬಿತ್ತನೆಯಲ್ಲಿ ತೊಡಗಿರುವುದು ಕಂಡುಬಂತು.

ಇದನ್ನೂ ಓದಿ: ಮುಂಗಾರು ಮಳೆ ಉತ್ತಮ ಆರಂಭ: ಅನ್ನದಾತರಿಗೆ ಸಂತಸ, ಚುರುಕುಗೊಂಡ ಬಿತ್ತನೆ - FAMERS SEEDS SOWING

ABOUT THE AUTHOR

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.