ETV Bharat / international

ಬ್ರಿಟನ್‌ಗೆ ಓದಲು ಹೋಗುವ ವಿದ್ಯಾರ್ಥಿಗಳಿಗೆ ಗುಡ್​ ನ್ಯೂಸ್: ಮುಂದುವರೆಯಲಿದೆ ಈ ಆಫರ್!​​ - UK Graduate Route Visa

author img

By ETV Bharat Karnataka Team

Published : May 25, 2024, 8:34 PM IST

ಸ್ನಾತಕೋತ್ತರ ಪದವಿಗಾಗಿ ಬ್ರಿಟನ್​ಗೆ ಬರುವವರ ಅರ್ಜಿಗಳು ಕಡಿಮೆಯಾಗಿರುವ ಕಾರಣ ಯುಕೆ ಗ್ರಾಜ್ಯುವೆಟ್ ರೂಟ್​ ವೀಸಾ ಯೋಜನೆಯನ್ನು ಮುಂದುವರೆಸುತ್ತಿದೆ ಎಂದು ಹೇಳಿದೆ.

ಯುಕೆ ಗ್ರಾಜ್ಯುವೆಟ್ ರೂಟ್ ವೀಸಾ ಯೋಜನೆ
ಯುಕೆ ಗ್ರಾಜ್ಯುವೆಟ್ ರೂಟ್ ವೀಸಾ ಯೋಜನೆ (ETV Bharat)

UK Graduate Route Visa: ಬ್ರಿಟನ್‌ನಲ್ಲಿ ಸ್ನಾತಕೋತ್ತರ ಪದವಿಗಾಗಿ ಬರುವ ವಿದೇಶಿ ವಿದ್ಯಾರ್ಥಿಗಳ ಅರ್ಜಿಗಳು ಕಡಿಮೆಯಾಗಿದ್ದು, ಇದನ್ನು ಸರಿಪಡಿಸಲು ಯುಕೆ ಗ್ರಾಜ್ಯುವೆಟ್ ರೂಟ್​ ವೀಸಾ ಯೋಜನೆ ಮುಂದುವರಿಸುವುದಾಗಿ ಬ್ರಿಟನ್ ಘೋಷಿಸಿದೆ.

ಚುನಾವಣೆಯವರೆಗೂ ಈ ಯೋಜನೆ ಮುಂದುವರೆಯಲಿದೆ. ನಂತರ ಮುಂದಿನ ಸರ್ಕಾರ ಈ ಯೋಜನೆ ಮುಂದುವರೆಸುವ ಬಗ್ಗೆ ನಿರ್ಧರಿಸಲಿದೆ ಎಂದು ಹೇಳಿದೆ. ಸರ್ಕಾರದ ಈ ನಿರ್ಧಾರದಿಂದ ಭಾರತೀಯರು ಸೇರಿದಂತೆ ಇತರ ದೇಶಗಳ ವಿದ್ಯಾರ್ಥಿಗಳು ಸಂತಸ ವ್ಯಕ್ತಪಡಿಸಿದ್ದಾರೆ.

ಕಡಿಮೆಯಾದ ಪದವಿ ಅರ್ಜಿಗಳು: ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಬ್ರಿಟನ್​ನಲ್ಲಿ ವಿದೇಶಿಗರ ಸ್ನಾತಕೋತ್ತರ ಪದವಿ ಅರ್ಜಿಗಳ ಪ್ರಮಾಣ ಕಡಿಮೆಯಾಗಿದೆ. ಅದರಲ್ಲೂ ಭಾರತದ 21,800ರಷ್ಟು ಅರ್ಜಿಗಳು ಕಡಿಮೆಯಾಗಿದೆ ಎಂದು ಬ್ರಿಟನ್‌ನ ರಾಷ್ಟ್ರೀಯ ಅಂ - ಕಿಅಂಶಗಳ ಕಚೇರಿ (ಒಎನ್‌ಎಸ್) ಗುರುವಾರ ತಿಳಿಸಿದೆ. ಸುಮಾರು 10 ಪ್ರತಿಶತದಷ್ಟು ಕಡಿಮೆಗೊಂಡಿದೆ ಎಂದು ತಿಳಿಸಿದೆ.

ಇದರಿಂದ ವಿದೇಶಿ ವಿದ್ಯಾರ್ಥಿಗಳು ಪಾವತಿಸುವ ಶುಲ್ಕವನ್ನು ಅವಲಂಬಿಸಿರುವ ಬ್ರಿಟಿಷ್ ವಿಶ್ವವಿದ್ಯಾಲಯಗಳಿಗೆ ಬಾರಿ ಹೊಡೆತ ಬಿದ್ದಿದೆ. ಬ್ರಿಟನ್‌ನಲ್ಲಿ ವ್ಯಾಸಂಗ ಮಾಡಲು ಬರುವ ಶೇ.81 ಭಾರತೀಯ ವಿದ್ಯಾರ್ಥಿಗಳು ಸ್ನಾತಕೋತ್ತರ ಪದವಿಗಾಗಿ ಬರುತ್ತಾರೆ. ಆದರೆ ಈ ವರ್ಷದಿಂದ ಉನ್ನತ ಶಿಕ್ಷಣಕ್ಕಾಗಿ ಇಲ್ಲಿಗೆ ಬರುವ ವಿದ್ಯಾಥಿಗಳು ತಮ್ಮ ಕುಟುಂಬಸ್ಥರನ್ನು ಕರೆತರಬಾರದು ಎಂಬ ನಿಬಂಧನೆಯನ್ನು ಹೇರಲಾಗಿತ್ತು. ಇದು ಭಾರತೀಯ ಸ್ನಾತಕೋತ್ತರ ಅರ್ಜಿದಾರರ ಸಂಖ್ಯೆ ಕಡಿಮೆ ಆಗಲು ಕಾರಣವಾಗಿತ್ತು.

2023ರ ಡಿಸೆಂಬರ್ ವೇಳೆಗೆ ಬ್ರಿಟನ್​ನ ದೀರ್ಘಾವಧಿಯ ವಲಸಿಗರ ಪಟ್ಟಿಯಲ್ಲಿ ಭಾರತೀಯರು (2,50,000) ಮೊದಲ ಸ್ಥಾನದಲ್ಲಿದ್ದಾರೆ. ನಂತರದ ಸ್ಥಾನಗಳಲ್ಲಿ ನೈಜೀರಿಯನ್ನರು (1,41,000), ಚೈನೀಸ್ (90,000) ಮತ್ತು ಪಾಕಿಸ್ತಾನಿಗಳು (84,000) ಇರುವುದಾಗಿ ಅಂಕಿ ಅಂಶಗಳು ತಿಳಿಸಿವೆ. ಕಳೆದ ವರ್ಷ ಬ್ರಿಟನ್‌ಗೆ 12.2 ಮಿಲಿಯನ್ ವಲಸಿಗ ವಿದ್ಯಾರ್ಥಿಗಳು ಬಂದಿದ್ದು ಅವರಲ್ಲಿ 5,32,000 ಜನರು ತಮ್ಮ ದೇಶಗಳಿಗೆ ಹಿಂತಿರುಗಿದ್ದಾರೆ ಎಂದು ಬ್ರಿಟನ್‌ನ ರಾಷ್ಟ್ರೀಯ ಅಂಕಿ- ಅಂಶಗಳ ಕಚೇರಿ ತಿಳಿಸಿದೆ.

ಇದನ್ನೂ ಓದಿ: ಉದ್ಯೋಗದ ಹೆಸರಲ್ಲಿ ಮಹಾ ವಂಚನೆ! ಕಾಂಬೋಡಿಯಾದಲ್ಲಿ 60 ಮಂದಿ ಭಾರತೀಯರ ರಕ್ಷಣೆ - Job Scam In Cambodia

ETV Bharat Logo

Copyright © 2024 Ushodaya Enterprises Pvt. Ltd., All Rights Reserved.