PM Modi in Egypt: ವಿಶ್ವದ ಏಳು ಅದ್ಭುತಗಳಲ್ಲಿ ಒಂದಾದ ಪಿರಮಿಡ್‌ ವೀಕ್ಷಿಸಿದ ಪ್ರಧಾನಿ ಮೋದಿ - ವಿಡಿಯೋ

By

Published : Jun 25, 2023, 6:56 PM IST

thumbnail

ಕೈರೋ (ಈಜಿಪ್ಟ್): ಈಜಿಪ್ಟ್​ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಭಾನುವಾರ ವಿಶ್ವದ ಏಳು ಅದ್ಭುತಗಳಲ್ಲಿ ಒಂದಾದ ಪಿರಮಿಡ್​ಗಳಿಗೆ ಭೇಟಿ ನೀಡಿದರು. ಈಜಿಪ್ಟ್ ರಾಜಧಾನಿ ಕೈರೋ ಹೊರವಲಯದಲ್ಲಿರುವ ಗಿಜಾದ ಶ್ರೇಷ್ಠ ಪಿರಮಿಡ್‌ಗಳನ್ನು ಮೋದಿ ವೀಕ್ಷಿಸಿದರು.

ತಮ್ಮ ಪ್ರವಾಸದ ಎರಡನೇ ಇಂದು ಪ್ರಧಾನಿ ಮೋದಿ ಉತ್ತರ ಈಜಿಪ್ಟ್‌ನ ಅಲ್-ಜಿಜಾ (ಗಿಜಾ) ಬಳಿ ನೈಲ್ ನದಿಯ ಪಶ್ಚಿಮ ದಂಡೆಯಲ್ಲಿ ಕಲ್ಲಿನ ಪ್ರಸ್ಥಭೂಮಿಯ ಮೇಲೆ ನಿರ್ಮಿಸಲಾದ 4ನೇ ರಾಜವಂಶದ ಮೂರು ಪಿರಮಿಡ್‌ಗಳಿಗೆ ಭೇಟಿ ಕೊಟ್ಟರು. ಪ್ರಧಾನಿ ಮೋದಿ ಅವರಿಗೆ ಈಜಿಪ್ಟ್ ಪ್ರಧಾನಿ ಮೊಸ್ತಫಾ ಮಡ್ಬೌಲಿ ಸಾಥ್​ ನೀಡಿದರು.

ಗಿಜಾದ ಗ್ರೇಟ್ ಪಿರಮಿಡ್ ಬಗ್ಗೆ ಮೋದಿ ಅವರಿಗೆ ಅಧಿಕಾರಿಗಳು ಮಾಹಿತಿ ನೀಡಿದರು. ಇದು ಅತಿದೊಡ್ಡ ಈಜಿಪ್ಟಿನ ಪಿರಮಿಡ್ ಆಗಿದ್ದು, ಹಳೆಯ ಸಾಮ್ರಾಜ್ಯದ 4ನೇ ರಾಜವಂಶದ ಅಡಿಯಲ್ಲಿ ಆಳ್ವಿಕೆ ನಡೆದ ಫೇರೋ ಖುಫುನ ಸಮಾಧಿಯಾಗಿದೆ. ಕ್ರಿ. ಪೂ. 26ನೇ ಶತಮಾನದ ಆರಂಭದಲ್ಲಿ ಸುಮಾರು 27 ವರ್ಷಗಳ ಅವಧಿಯಲ್ಲಿ ಇವುಗಳನ್ನು ನಿರ್ಮಿಸಲಾಗಿದೆ. ಪ್ರಪಂಚದ ಏಳು ಅದ್ಭುತಗಳಲ್ಲಿ ಪಿರಮಿಡ್ ಅತ್ಯಂತ ಹಳೆಯದು ಮತ್ತು ಬಹುಮಟ್ಟಿಗೆ ಹಾಗೇ ಉಳಿದಿರುವ ಏಕೈಕ ಅದ್ಭುತ ತಾಣವಾಗಿದೆ.

ಇದನ್ನೂ ಓದಿ: PM Modi in Egypt: ಈಜಿಪ್ಟ್‌ನ ಐತಿಹಾಸಿಕ ಅಲ್ - ಹಕೀಮ್ ಮಸೀದಿಗೆ ಪ್ರಧಾನಿ ಮೋದಿ ಭೇಟಿ

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.