ETV Bharat / health

ನಿಮ್ಮಲ್ಲೂ ಅಭಿವೃದ್ಧಿ ಆಗುತ್ತಿದ್ಯಾ ಪಾಪ್​ ಕಾರ್ನ್​ ಬ್ರೈನ್​; ಏನಿದು ಸಮಸ್ಯೆ, ಯಾರಿಗೆಲ್ಲಾ ಕಾಡುತ್ತೆ? - popcorn brain problem

author img

By ETV Bharat Karnataka Team

Published : May 29, 2024, 5:50 PM IST

Updated : May 29, 2024, 6:16 PM IST

ಇತ್ತೀಚಿನ ದಿನದಲ್ಲಿ ಹೆಚ್ಚುತ್ತಿರುವ ಈ ಪಾಪ್​ಕಾರ್ನ್​ ಬ್ರೈನ್​ ಎಂಬುದು ವ್ಯಕ್ತಿಯ ಅರಿವಿನ ಪರಿಸ್ಥಿತಿಯ ಕುರಿತು ತಿಳಿಸುತ್ತದೆ.

popcorn-brain-a-mental-health-problem-arising-in-youths
ಪಾಪ್​ ಕಾರ್ನ್​ ಬ್ರೈನ್ (ಸಾಂದರ್ಭಿಕ ಚಿತ್ರ)

ಹೈದರಾಬಾದ್​: ಇನ್ಸಟಾದಲ್ಲಿ ಮುಳುಗಿದ್ದಾಗ ತಾಯಿ ಒಂದು ಸಣ್ಣ ಕೆಲಸ ಹೇಳಿದರೆ, ಸಿಡಿಮಿಡಿ ಉಂಟಾಗುತ್ತದೆ. ಅಲ್ಲದೇ, ಇಷ್ಟು ಕೆಲಸ ಮಾಡಲು ನನ್ನ ಕರೆಯಬೇಕಾ ಎಂಬ ಅಸಮಾಧಾನ ಮೂಡುತ್ತದೆ. ಅದೇ ರೀತಿ ಸಾಕಷ್ಟು ಕೆಲಸ ಮಾಡಲು ಇದ್ದಾಗ ಇದನ್ನೂ ಆರಾಮವಾಗಿ ಮುಗಿಸಬಹುದು ಎಂದುಕೊಳ್ಳುತ್ತೇವೆ. ಈ ವೇಳೆ ಮೆದುಳು ಒಂದು ಸಣ್ಣ ಬ್ರೇಕ್​ ಕೇಳುತ್ತದೆ. ತಕ್ಷಣಕ್ಕೆ ಫೋನ್​ ಇಡಿದು, ಸ್ಕ್ರಾಲ್​ ಮಾಡಲು ಮುಂದಾಗುತ್ತೀರಾ. ಹೀಗೆ ಮಾಡುತ್ತಾ ಸಮಯ ಕಳೆದು ಹೋಗುವುದು ತಿಳಿಯದು. ಈ ವೇಳೆ ಕೆಲಸ ದೊಡ್ಡ ಶಿಖರದಂತೆ ಕಾಣುತ್ತದೆ. ಈ ವೇಳೆ ಅನಗತ್ಯವಾಗಿ ಫೋನ್​ನಲ್ಲಿ ಕಾಲ ಕಳೆದೆ ಎಂದು ಹಲುಬುವಂತೆ ಆಗುತ್ತದೆ.

ಇದು ಮಾತ್ರವಲ್ಲ, ಒಂದು ನೋಟಿಫಿಕೇಷನ್​ ಬಂದರೂ, ಅಥವಾ ಪದೇ ಪದೇ ಸ್ಕ್ರೀನ್​ ಅನ್ನು ಓಪನ್​ ಮಾಡುವುದು. ಆ್ಯಪ್ಸ್​ ತೆಗೆದು ನೋಡುವ ಲಕ್ಷಣವೇ ಪಾಪ್​ ಕಾರ್ನ್​ ಬ್ರೈನ್​ ಅಭಿವೃದ್ಧಿಗೆ ಕಾರಣವಾಗುತ್ತದೆ.

ಇತ್ತೀಚಿನ ದಿನದಲ್ಲಿ ಹೆಚ್ಚುತ್ತಿರುವ ಈ ಪಾಪ್​ಕಾರ್ನ್​ ಬ್ರೈನ್​ ಎಂಬುದು ವ್ಯಕ್ತಿಯ ಅರಿವಿನ ಪರಿಸ್ಥಿತಿಯ ಕುರಿತು ತಿಳಿಸುತ್ತದೆ. ಅಂದರೆ ಪಾಪ್​ಕಾರ್ನ್​ ಹೇಗೆ ಒಂದು ಕ್ಷಣ ನಿಲ್ಲದೇ ಮೇಲಿಂದ ಮೇಲೆ ಹಾರುತ್ತದೆ. ಹಾಗೇ ಮನಸು ಕೂಡ ಬೇಗ ವಿಚಲಿತಗೊಳ್ಳುತ್ತದೆ. ಒಂದು ವಿಷಯದ ಕುರಿತು ವ್ಯಕ್ತಿ ಗಮನಹರಿಸಲು ಸಾಧ್ಯವಾಗದೇ, ಪದೇ ಪದೇ ಫೋನ್​ ಚಟಕ್ಕೆ ಅಂಟಿಕೊಳ್ಳುತ್ತೆ. ಮಾನಸಿಕ ಸ್ಥಿತಿಯನ್ನು ಇದು ತೋರಿಸುತ್ತದೆ.

ಅಧ್ಯಯನಗಳ ಪ್ರಕಾರ, ಈ ಪಾಪ್​ಕಾರ್ನ್ ಬ್ರೈನ್​ಗೆ ಅತಿ ಹೆಚ್ಚು ಒಳಗಾಗುವವರು ಮಕ್ಕಳು ಮತ್ತು ಯುವತಿಯರು. ಇವರಲ್ಲಿ ಆತಂಕ ಹೆಚ್ಚಿದ್ದು, ಯಾರನ್ನು ಭೇಟಿಯಾಗುವ ಮತ್ತು ಮಾತನಾಡುವ ಇಚ್ಛೆ ಇರುವುದಿಲ್ಲ. ಜೊತೆಗೆ ಕ್ಷುಲ್ಲಕ ಕೆಲಸ ಹೇಳಿದರೂ ಇವರಲ್ಲಿ ಸಿಟ್ಟು, ಕಿರಿಕಿರಿ ಅನುಭವ ಉಂಟಾಗುತ್ತದೆ. ವಯಸ್ಕರಲ್ಲಿ ಈ ಸಮಸ್ಯೆ ಹೊಂದಿರುವರಲ್ಲಿ ಗಮನ ಹರಿಸುವಿಕೆ ಕೊರತೆ, ಮಕ್ಕಳ ಮೇಲೆ ಸಿಟ್ಟು, ಸರಿಯಾದ ನಿದ್ರೆಯ ಕೊರತೆ ಕಾಣಬಹುದು.

ಮೆದುಳು ಯಾಕೆ ಹೀಗೆ: ಫೋನ್​ನಿಂದ ಹೊರ ಹೊಮ್ಮುವ ಶಬ್ಧ ಮತ್ತು ನೀಲಿ ಬೆಳಕಿಗೆ ಮೆದುಳು ಆಕರ್ಷಣೆಗೆ ಒಳಗಾಗುತ್ತದೆ. ಕೇವಲ ಶಬ್ಧಕ್ಕೆ ಮಾತ್ರವಲ್ಲ. ಇದಾದ ಮೇಲೆ ಮುಗಿಸುವ ಎಂದುಕೊಳ್ಳುತ್ತಾ ಸ್ಕ್ರಾಲ್​ ಮಾಡುವಾಗ ಮತ್ತಷ್ಟು ಉತ್ಸಾಹ ತರುವಂತೆ ಮಾಡುತ್ತದೆ. ಇದಕ್ಕಿಂತ ಹೆಚ್ಚಾಗಿ ಇದು ಉತ್ತಡ ನಿವಾರಿಸಿ, ಖುಷಿಯಾಗಿರಲು ಸಹಾಯ ಮಾಡುತ್ತದೆ. ಇದೇ ಕಾರಣಕ್ಕೆ ನಾವು ಭ್ರಮೆಯ ಮೂಲಕವೇ ಕಾಯಿಲೆಗಳಿಗೆ ಆಹ್ವಾನ ನೀಡುತ್ತ ನೆಮ್ಮದಿ ಕಾಣುತ್ತೇವೆ.

ಏನು ಮಾಡಬಹುದು: ಬಳಕೆ ಮಾಡದ ಅನೇಕ ಆ್ಯಪ್​ಗಳನ್ನು ತೆಗೆದುಹಾಕಿ. ನೋಟಿಫಿಕೇಷನ್​​ ಆ್ಯಪ್​ಗಳ ಶಬ್ಧವನ್ನು ತೆಗೆಯಿರಿ. ಕೆಲವು ಶಾಪಿಂಗ್​ ಮತ್ತು ಸೇವೆಯ ನೋಟಿಫಿಕೇಷನ್​ ಯಾವುದೇ ರೀತಿ ಆಕರ್ಷಿಸಿಲ್ಲ ಎಂದರೆ ಅವುಗಳನ್ನು ಕಿತ್ತುಹಾಕಿ. ಇದರಿಂದ ಅನಗತ್ಯ ಖರ್ಚು ಕೂಡ ಕಡಿಮೆಯಾಗುತ್ತದೆ.

ಇಂದು ಮೊಬೈಲ್​ ಮೂಲಕವೇ ಎಲ್ಲಾ ಕೆಲಸಗಳು ಸಾಗುತ್ತವೆ. ಇದರಿಂದ ಮೊಬೈಲ್​ ಇಲ್ಲದೇ ಜೀವಿಸಲು ಸಾಧ್ಯವಿಲ್ಲ ಎನ್ನುವಂತಾಗಿದೆ. ಈ ಹಿನ್ನೆಲೆ ಇದಕ್ಕಾಗಿ ಕೊಂಚ ಸಮಯ ತೆಗೆದುಕೊಳ್ಳಿ. ಹಾಗೇ ಕೆಲಸವಾದ ಬಳಿಕ ಅನಗತ್ಯ ಕಾರ್ಯಕ್ಕೆ ಮೊಬೈಲ್​ ಬಳಕೆ ಮಾಡದಿರಲು ನಿಶ್ಚಯಿಸಿ. ಒಂದು ವೇಳೆ ಅನಗತ್ಯ ಮೊಬೈಲ್​ ನೋಡುತ್ತಿದ್ದೀರಾ ಎಂದರೆ ರಿಮೈಂಡರ್​ ಸೆಟ್​ ಮಾಡಿ ಬಳಕೆ ಮಾಡದಂತೆ ಎಚ್ಚರಗೊಳಿಸಿ.

ಹಾಸಿಗೆ ಮೇಲೆ ನೋ ಫೋನ್​​ ನಿಯಮ ತನ್ನಿ. ಊಟದ ಸಮಯದಲ್ಲಿ, ಯಾರ ಜೊತೆಯಾದರೂ ಮಾತನಾಡುವಾಗಲೂ ಮೊಬೈಲ್​ ಬಳಕೆ ಮಾಡದಂತೆ ನಿಶ್ಚಯಿಸಿ. ಮನೆಯಿಂದ ಹೊರ ಹೋಗುವಾಗ ಪುಸ್ತಕದೊಂದಿಗೆ ಒಯ್ಯಿರಿ. ಜೊತೆಗೆ ದಿನಕ್ಕೆ ನಾಲ್ಕು ಹೆಜ್ಜೆ ಗಾಳಿಯಲ್ಲಿ ನಡೆಯುವ ಆರೋಗ್ಯಕರ ಅಭ್ಯಾಸ ರೂಢಿಸಿಕೊಳ್ಳಿ.

ಅನೇಕ ಬಾರಿ ಮಕ್ಕಳಿಗೆ ಫೋನ್​ ನೀಡದಿದ್ದಾಗ ಅವರು ಗಲಾಟೆ ಮಾಡುತ್ತಾರೆ. ಜೊತೆಗೆ ಬೋರ್​ ಆಗುತ್ತಾರೆ. ಈ ಸಮಯದಲ್ಲಿ ಅವರಲ್ಲಿ ಹೊಸ ಹವ್ಯಾಸ ಬೆಳೆಸಿ. ಇದನ್ನು ನೀವು ರೂಢಿಸಿಕೊಂಡರೆ ಒಳಿತು. ಪೋಷಕರು ಕೂಡ ಫೋನ್​ ಪಕ್ಕದಲ್ಲಿಟ್ಟರೆ, ಅವರ ಗಮನವೂ ಅದರೆಡೆಗೆ ಸಾಗುವುದಿಲ್ಲ ಎಂಬುದನ್ನು ಮರೆಯಬೇಡಿ.

ಇದನ್ನೂ ಓದಿ: ನಿಮ್ಮ ಮಕ್ಕಳು ದೀರ್ಘಕಾಲ ಟಿವಿ, ಫೋನ್​ ನೋಡ್ತಿದ್ದಾರಾ?; ಭಾರತದ ಮೂವರಲ್ಲಿ ಒಬ್ಬ ಮಗುವಿಗೆ ಸಮೀಪ ದೃಷ್ಟಿ ದೋಷ

Last Updated : May 29, 2024, 6:16 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.