ಧಾರವಾಡ: ಜುಬ್ಲಿ ಸರ್ಕಲ್​ನ​ಲ್ಲೇ ಬೈಕ್​ ಸೈಲೆನ್ಸರ್​ಗಳ ಮೇಲೆ ರೋಲರ್ ಹತ್ತಿಸಿದ ಪೊಲೀಸರು! - Bike Silencers Destroy

By ETV Bharat Karnataka Team

Published : May 30, 2024, 5:27 PM IST

Updated : May 30, 2024, 6:01 PM IST

thumbnail
ಸೈಲೆನ್ಸರ್​ಗಳ ಮೇಲೆ ರೋಲರ್ ಹತ್ತಿಸಿದ ಪೊಲೀಸರು (ETV Bharat)

ಧಾರವಾಡ: ಕರ್ಕಶವಾದ ಶಬ್ಧ ಮಾಡುವ ದೋಷಪೂರಿತ ಸೈಲೆನ್ಸರ್ ಅಳವಡಿಸಿಕೊಂಡಿದ್ದ ಬೈಕ್ ಸವಾರರಿಗೆ ಧಾರವಾಡ ಸಂಚಾರಿ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ. ನಗರದಲ್ಲಿ 240 ಸೈಲೆನ್ಸರ್​​ಗಳನ್ನು ಜೆಸಿಬಿ ಮೂಲಕ ನಾಶ ಮಾಡುವ ಮೂಲಕ ಕರ್ಕಶ ಶಬ್ಧವನ್ನುಂಟು ಮಾಡುತ್ತ ಸಂಚಾರಿ ನಿಯಮ ಉಲ್ಲಂಘಿಸುವವರ ವಿರುದ್ಧ ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ. 

ಧಾರವಾಡದ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನೂರಾರು ಅನಧಿಕೃತ ದೋಷಪೂರಿತ ಕರ್ಕಶ ಶಬ್ಧವನ್ನುಂಟು ಮಾಡುವ ದ್ವಿಚಕ್ರ ವಾಹನಗಳ ಸೈಲೆನ್ಸ್‌ರಗಳನ್ನು ವಶಪಡಿಸಿಕೊಂಡು ನಗರದ ಜುಬ್ಲಿ ವೃತ್ತದಲ್ಲಿ ರೋಡ್ ರೋಲರ್ ಹತ್ತಿಸುವ ಮೂಲಕ ಯುವಕರಲ್ಲಿ ಜಾಗೃತಿ ಮೂಡಿಸಿದ್ದಾರೆ. ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ ಸಮ್ಮುಖದಲ್ಲಿ 12 ಲಕ್ಷ ಮೌಲ್ಯದ ಒಟ್ಟು 240 ಸೈಲೆನ್ಸರ್​​ಗಳ ಮೇಲೆ ರೋಲರ್ ಹತ್ತಿಸಲಾಯಿತು.

ಇನ್ನು, ಈ ಸೈಲೆನ್ಸ್‌ರ್​​ಗಳನ್ನು ಅಳವಡಿಸಿಕೊಂಡಿದ್ದ ವಾಹನ ಸವಾರರಿಗೆ ತಲಾ 500 ರೂ. ದಂಡ ವಿಧಿಸಿ ವಾಹನಗಳನ್ನು ಬಿಡುಗಡೆ ಮಾಡಲಾಗಿದೆ. ಅದರೊಂದಿಗೆ ಇದೇ ವೇಳೆ ಜುಬ್ಲಿ ಸರ್ಕಲ್​​ನಲ್ಲಿ ಜನರಿಗೆ ಸಂಚಾರಿ ನಿಯಮಗಳ ಕುರಿತು ಜಾಗೃತಿ ಮೂಡಿಸಲಾಯಿತು.

ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ಹೆಡ್ ಕಾನ್​ಸ್ಟೆಬಲ್‌ ಆತ್ಮಹತ್ಯೆ - HEAD CONSTABLE SUICIDE

Last Updated : May 30, 2024, 6:01 PM IST

ABOUT THE AUTHOR

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.