10 ಅಡಿ ಉದ್ದದ ಬೃಹತ್ ಮೊಸಳೆಯನ್ನು ಹೆಗಲ ಮೇಲೆ ಹೊತ್ತು ತಂದರು!- ವಿಡಿಯೋ ನೋಡಿ - Crocodile Rescued

By ETV Bharat Karnataka Team

Published : May 30, 2024, 9:31 AM IST

Updated : May 30, 2024, 9:45 AM IST

thumbnail
ಮೊಸಳೆ ರಕ್ಷಣೆ (ANI)

ಬುಲಂದ್‌ಶಹರ್(ಉತ್ತರ ಪ್ರದೇಶ): ಸುಮಾರು 10 ಅಡಿ ಉದ್ದದ ಬೃಹತ್ ಗಾತ್ರದ ಮೊಸಳೆಯೊಂದು ಇಲ್ಲಿನ ನರೋರಾ ಗಂಗಾ ಘಾಟ್‌ನಲ್ಲಿ ಕಾಲುವೆಯಿಂದ ಹೊರಬಂದಿದ್ದು, ರಕ್ಷಿಸಲಾಗಿದೆ. ಮೊಸಳೆ ಕಾಲುವೆ ಬಿಟ್ಟು ಹೊರ ಬಂದಿರುವುದನ್ನು ಕಂಡು ಆಘಾತಗೊಂಡ ಸ್ಥಳೀಯ ಜನರು ಕೂಡಲೇ ಅರಣ್ಯ ಇಲಾಖೆಗೆ ಮಾಹಿತಿ ಮುಟ್ಟಿಸಿದ್ದರು. 

ವಿಷಯ ತಿಳಿದು ಸ್ಥಳಕ್ಕೆ ಬಂದ ಇಲಾಖೆ ಸಿಬ್ಬಂದಿ ಮೊಸಳೆಯನ್ನು ಸುರಕ್ಷಿತವಾಗಿ ಹಿಡಿದರು. ಬಳಿಕ ಸಿಬ್ಬಂದಿಯ ಜೊತೆಗೆ ಸ್ಥಳೀಯರೂ ಸೇರಿ ಮೊಸಳೆಯನ್ನು ಹೊತ್ತುಕೊಂಡು ಬಂದರು. ಈ ವಿಡಿಯೋ ಇದೀಗ ಎಲ್ಲೆಡೆ ಹರಿದಾಡುತ್ತಿದ್ದು, ಅಚ್ಚರಿ ಮೂಡಿಸುವಂತಿದೆ.

ಮೊಸಳೆ ರಕ್ಷಣೆ ಬಳಿಕ ಮಾತನಾಡಿದ ಅರಣ್ಯ ಇಲಾಖೆ ಅಧಿಕಾರಿಯೊಬ್ಬರು, "ನರೋರಾ ಗಂಗಾ ಘಾಟ್‌ನ ಕಾಲುವೆಯಿಂದ ಹೊರಬಂದ ಮೊಸಳೆ ನೀರಿನೊಳಗೆ ಹೋಗಲಾಗದೇ ಸಿಲುಕಿಕೊಂಡಿತ್ತು. ಸ್ಥಳೀಯರು ವಿಷಯ ತಿಳಿಸಿದ ಕೂಡಲೇ ಸ್ಥಳಕ್ಕೆ ಆಗಮಿಸಿದ ನಮ್ಮ ಸಿಬ್ಬಂದಿ ಸ್ಥಳೀಯರ ಸಹಾಯದಿಂದ ಅದನ್ನು ರಕ್ಷಿಸಿ ಬೇರೊಂದು ಪ್ರದೇಶದಲ್ಲಿ ಬಿಟ್ಟರು" ಎಂದು ತಿಳಿಸಿದರು.      

ಇದನ್ನೂ ಓದಿ: ಅಬ್ಬಬ್ಬಾ! ಬಾತ್​ರೂಮ್​ನಲ್ಲಿ 35 ಹಾವಿನ ಮರಿಗಳು ಪ್ರತ್ಯಕ್ಷ- ವಿಡಿಯೋ ನೋಡಿ - Snakes Crawl Out Of Bathroom

Last Updated : May 30, 2024, 9:45 AM IST

ABOUT THE AUTHOR

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.