ಅಬ್ಬಬ್ಬಾ! ಬಾತ್​ರೂಮ್​ನಲ್ಲಿ 35 ಹಾವಿನ ಮರಿಗಳು ಪ್ರತ್ಯಕ್ಷ- ವಿಡಿಯೋ ನೋಡಿ - Snakes Crawl Out Of Bathroom

By ETV Bharat Karnataka Team

Published : May 28, 2024, 10:52 AM IST

thumbnail
ಹಾವಿನ ಮರಿಗಳ ರಕ್ಷಣೆ (ETV Bharat)

ಅಸ್ಸಾಂ: ಇಲ್ಲಿನ ನಾಗಾಂವ್​ ಜಿಲ್ಲೆಯ ಕಾಲಿಯಾಬರ್‌ನ ಕುನ್ವರಿಟೋಲ್ ಚರಿಯಾಲಿ ಎಂಬಲ್ಲಿನ ಮನೆಯೊಂದರಲ್ಲಿ ಸುಮಾರು 35 ಹಾವಿನ ಮರಿಗಳು ಪತ್ತೆಯಾಗಿವೆ. ಮನೆಯ ಸ್ನಾನದ ಕೊಠಡಿಯಲ್ಲಿ ಹಾವು ಇಷ್ಟೊಂದು ಮರಿಗಳಿಗೆ ಮೊಟ್ಟೆ ಇಟ್ಟಿತ್ತು. ಈ ಮೊಟ್ಟೆಗಳಿಂದ ಮರಿಗಳು ಒಂದೊಂದಾಗಿ ಹೊರಬಂದಿದ್ದು ಮನೆಮಂದಿ ಅಚ್ಚರಿಗೊಳಗಾದರು. 

ಈ ಮಾಹಿತಿ ಪಡೆದು ಸ್ಥಳಕ್ಕಾಗಮಿಸಿದ ಉರಗ ತಜ್ಞ ಸಂಜಿಬ್ ದೇಕಾ, ಬಾತ್​ರೂಂನ ಮಣ್ಣಿನ ರಂಧ್ರಗಳಿಂದ ಒಂದೊಂದೇ ಮರಿಗಳನ್ನು ಹೊರತೆಗೆದು ಬಕೆಟ್ ಹಾಕಿದರು. ಈ ವೇಳೆ ಒಟ್ಟು 35 ಮರಿಗಳು ದೊರೆತಿವೆ. 

ವಿಷಯ ತಿಳಿದು ಅಕ್ಕಪಕ್ಕದ ಮನೆಯವರೆಲ್ಲ ಸ್ಥಳದಲ್ಲಿ ಜಮಾಯಿಸಿದ್ದರು. ಒಂದೇ ಬಾರಿ ಇಷ್ಟೊಂದು ಹಾವುಗಳ ರಾಶಿ ನೋಡಿ ಚಕಿತಗೊಂಡರು. ಹಾವಿನ ಮರಿಗಳು ಹುಟ್ಟಿರುವುದು ಮೊದಲೇ ಗೊತ್ತಾಗಿದ್ದರಿಂದ ಸಂಭಾವ್ಯ ಅಪಾಯ ತಪ್ಪಿತೆಂದು ನಿಟ್ಟುಸಿರುಬಿಟ್ಟರು. ರಕ್ಷಿಸಲ್ಪಟ್ಟ ಹಾವಿನ ಮರಿಗಳನ್ನು ಸುರಕ್ಷಿತ ಸ್ಥಳಕ್ಕೆ ಬಿಡಲಾಗಿದೆ.

ಇಷ್ಟೊಂದು ಹಾವುಗಳು ಒಂದೆಡೆ ಕಾಣಿಸಿಕೊಳ್ಳುವುದು ಮೊದಲೇನಲ್ಲ. ಮಳೆಗಾಲದ ಸಮಯದಲ್ಲಿ ಹಾವುಗಳು ಪ್ರತ್ಯಕ್ಷವಾಗುವುದು ಸಹಜ ಎಂದು ಉರಗ ತಜ್ಞರು ಹೇಳಿದರು.

ಇದನ್ನೂ ಓದಿ: ಮಂಡ್ಯ: ಹೊಳೆ ಆಂಜನೇಯ ಸ್ವಾಮಿ ದೇಗುಲದ ಬಳಿ ಕಾಡಾನೆ ಹಿಂಡು ಪ್ರತ್ಯಕ್ಷ - WILD ELEPHANTS

ABOUT THE AUTHOR

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.