ETV Bharat / education-and-career

NEET UG 2024ರ ಪರೀಕ್ಷಾ ಕೀ ಆನ್ಸರ್​ ಬಿಡುಗಡೆ ಮಾಡಿದ NTA: ಆಕ್ಷೇಪಣೆ ಸಲ್ಲಿಸಲು ಮೇ 31 ಕೊನೆ ದಿನ - NEET UG answer key

author img

By ETV Bharat Karnataka Team

Published : May 30, 2024, 3:33 PM IST

ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ NEET UG-2024ರ ಪರೀಕ್ಷೆಯ ಕೀ ಉತ್ತರಗಳನ್ನು ಬಿಡುಗಡೆ ಮಾಡಿದೆ. ಮೇ 31 ರಂದು ರಾತ್ರಿ 11:50 ರವರೆಗೆ ಅಭ್ಯರ್ಥಿಗಳಿಗೆ ಆಕ್ಷೇಪಣೆಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಆನ್​​​ಲೈನ್​ ಮೂಲಕವೇ ಉತ್ತರ ಕೀಗಳು ತಪ್ಪಿದ್ದಲ್ಲಿ ಆಕ್ಷೇಪಣೆ ಸಲ್ಲಿಕೆ ಮಾಡಬಹುದು. ಇದಕ್ಕೆ ಶುಲ್ಕವನ್ನು ಆನ್​​ಲೈನ್​​ನಲ್ಲೇ ಪಾವತಿ ಮಾಡಬಹುದು.

NEET UG 2024: Objection has to be expressed on the answer key and recorded response released by NTA, see the complete process here
NEET UG 2024ರ ಪರೀಕ್ಷಾ ಕೀ ಆನ್ಸರ್​ ಬಿಡುಗಡೆ ಮಾಡಿದ NTA: ಆಕ್ಷೇಪಣೆ ಸಲ್ಲಿಸಲು ಮೇ 31 ಕೊನೆ ದಿನat (ETV Bharat)

ಕೋಟಾ, ರಾಜಸ್ಥಾನ: ದೇಶದ ಅತಿದೊಡ್ಡ ವೈದ್ಯಕೀಯ ಪ್ರವೇಶ ಪರೀಕ್ಷೆ NEET UG 202 ರ ಅಂತಿಮ ಕೀ ಆನ್ಸರ್​ಗಳನ್ನು ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ ಬಿಡುಗಡೆ ಮಾಡಿದೆ. ತಪ್ಪು ಕೀ ಉತ್ತರಗಳೇನಾದರೂ ಇದ್ದರೆ ಅವುಗಳಿಗೆ ಆಕ್ಷೇಪಣೆ ಸಲ್ಲಿಕೆ ಮಾಡಲು ಎರಡು ದಿನಗಳ ಕಾಲಾವಕಾಶ ಕೂಡಾ ನೀಡಲಾಗಿದೆ. ಅಭ್ಯರ್ಥಿಗಳು ಮೇ 31ರಂದು ರಾತ್ರಿ 11:50 ರವರೆಗೆ ತಮ್ಮ ಆಕ್ಷೇಪಣೆಗಳನ್ನು ಸಲ್ಲಿಸಬಹುದಾಗಿದೆ ಎಂದು ಶಿಕ್ಷಣ ತಜ್ಞ ದೇವ್ ಶರ್ಮಾ ತಿಳಿಸಿದ್ದಾರೆ. ಕೀ ಆನ್ಸರ್​ ಬಗ್ಗೆ ತಪ್ಪುಗಳೇನಾದರೂ ಇದ್ದರೆ ಅದಕ್ಕೆ ಆಕ್ಷೇಪಣೆ ಸಲ್ಲಿಸಲು ಪ್ರತಿ ಪ್ರಶ್ನೆಗೆ ಅಭ್ಯರ್ಥಿಗಳು 200 ರೂಪಾಯಿ ಪಾವತಿಸಬೇಕಾಗುತ್ತದೆ. ಇನ್ನು OMR ಶೀಟ್‌ನ ದಾಖಲಾದ ಪ್ರತಿಕ್ರಿಯೆ ಪ್ರಶ್ನಿಸಲು ಪ್ರತಿ ಪ್ರಶ್ನೆಗೆ ಒಂದೇ ಶುಲ್ಕ ಪಾವತಿಸಬೇಕಾಗುತ್ತದೆ.

ಈ ಶುಲ್ಕವನ್ನು ಯಾವುದೇ ಕಾರಣಕ್ಕೂ ಮರುಪಾವತಿಸಲಾಗುವುದಿಲ್ಲ. ಇವೆಲ್ಲ ಪ್ರಕ್ರಿಯೆಗಳನ್ನು ಆನ್​​ಲೈನ್​​ನಲ್ಲೇ ಮಾಡಬೇಕಾಗುತ್ತದೆ. ಅಂತಿಮ ಕೀ ಆನ್ಸರ್​​ ಅನ್ನು ನೇರವಾಗಿ ಬಿಡುಗಡೆ ಮಾಡಲಾಗುತ್ತದೆ. ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯು ಈ ಆಕ್ಷೇಪಣೆಗಳನ್ನು ವಿಷಯ ತಜ್ಞರ ಮೂಲಕ ಕೂಲಂಕಷ ಪರಿಶೀಲನೆ ಮಾಡಿ ಅಂತಿಮ ನಿರ್ಧಾರ ಕೈಗೊಳ್ಳುತ್ತದೆ. ತಜ್ಞರ ಸಮಿತಿಯ ಅಭಿಪ್ರಾಯವನ್ನು ಮಾತ್ರ ಸಾರ್ವತ್ರಿಕವಾಗಿ ಅಂಗೀಕರಿಸಲಾಗಿದೆ ಎಂದು ಪರಿಗಣಿಸಲಾಗುತ್ತದೆ ಎಂದು ಎಜೆನ್ಸಿ ಹೇಳಿದೆ.

ಆಕ್ಷೇಪಣೆ ಸಲ್ಲಿಸಲು ಮಾಡಬೇಕಾದ ಹಂತಗಳು ಹೀಗಿವೆ - ' ಕೀ ಆನ್ಸರ್​’ ಸರಿ ಇಲ್ಲ ಎಂದು ಹೇಳುವುದು ಹೇಗೆ?

  • ಉತ್ತರ ಕೀ ಅಥವಾ OMR ನ ರೆಕಾರ್ಡ್ ಮಾಡಿದ ಪ್ರತಿಕ್ರಿಯೆಯನ್ನು ಪ್ರಶ್ನಿಸಲು ಅಭ್ಯರ್ಥಿಯು ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ.
  • ಬಳಿಕ ಅಲ್ಲಿ ಅಭ್ಯರ್ಥಿಯು ತಮ್ಮ ಅಪ್ಲಿಕೇಶನ್ ಸಂಖ್ಯೆ, ಜನ್ಮ ದಿನಾಂಕ ಮತ್ತು ಭದ್ರತಾ ಪಿನ್ ಅನ್ನು ನಮೂದಿಸುವ ಮೂಲಕ ಲಾಗಿನ್ ಆಗಬೇಕಾಗುತ್ತದೆ.
  • ಆ ನಂತರ ನೀವು ನಿಮ್ಮ ಪರೀಕ್ಷಾ ಪುಸ್ತಕದ ಕೋಡ್ ಅನ್ನು ನಮೂದಿಸಬೇಕಾಗುತ್ತದೆ. ಇದರ ನಂತರ, ಭೌತಶಾಸ್ತ್ರ, ರಾಸಾಯನಿಕ ಶಾಸ್ತ್ರ, ಜೀವಶಾಸ್ತ್ರ ಮತ್ತು ಪ್ರಾಣಿಶಾಸ್ತ್ರದಿಂದ ತಲಾ 50 ಪ್ರಶ್ನೆಗಳು ನಿಮ್ಮ ಫೋನ್​ ಅಥವಾ ಡೆಸ್ಕ್​ಟಾಪ್​ ಮೇಲೆ ಕಾಣಿಸಿಕೊಳ್ಳಲಿವೆ
  • ಅಭ್ಯರ್ಥಿಯು ಯಾವ ಪ್ರಶ್ನೆಗೆ ಆಕ್ಷೇಪಣೆ ಸಲ್ಲಿಸಬೇಕಿದೆಯೋ ಅದರ ಮೇಲೆ ಕ್ಲಿಕ್ ಮಾಡಬೇಕು. ಬಳಿಕ ಅಭ್ಯರ್ಥಿಯು ಆಕ್ಷೇಪಣೆಗೆ ಸಂಬಂಧಿಸಿದ ದಾಖಲೆಗಳನ್ನು ಅಪ್ಲೋಡ್ ಮಾಡಬೇಕಾಗುತ್ತದೆ. ತದ ನಂತರ ಅಭ್ಯರ್ಥಿಯು ಸರಿ ಎಂದು ಹೇಳುವ ಉತ್ತರ ಕ್ಲಿಕ್ ಮಾಡಬೇಕಾಗುತ್ತದೆ.
  • ಈ ಎಲ್ಲ ಪ್ರಕ್ರಿಯೆ ಮುಗಿಸಿದ ಬಳಿಕ ಡೆಬಿಟ್-ಕ್ರೆಡಿಟ್ ಕಾರ್ಡ್, ನೆಟ್ ಬ್ಯಾಂಕಿಂಗ್ ಅಥವಾ ಯುಪಿಐ ಮೂಲಕ ಆನ್‌ಲೈನ್‌ನಲ್ಲಿ ಆಕ್ಷೇಪಣೆ ಸಲ್ಲಿಸಲು ಶುಲ್ಕವನ್ನು ಪಾವತಿಸಲು ಸಾಧ್ಯವಾಗುತ್ತದೆ. ನಿಮ್ಮ ಶುಲ್ಕದ ಪ್ರಕ್ರಿಯೆಗಳನ್ನು ಮುಗಿಸಿದ ನಂತರ ಅಭ್ಯರ್ಥಿಯು ತನ್ನ ಆಕ್ಷೇಪಣೆಯ ಪ್ರಿಂಟ್‌ಔಟ್ ತೆಗೆದುಕೊಂಡು ತಮ್ಮ ಬಳಿ ಇಟ್ಟುಕೊಳ್ಳಬಹುದು.

OMR ಶೀಟ್‌ನ ರೆಕಾರ್ಡ್ ಮಾಡಿದ ಪ್ರತಿಕ್ರಿಯೆಯ ಮೇಲೆ ಆಕ್ಷೇಪಣೆಯನ್ನು ಸಲ್ಲಿಕೆ ಮಾಡಲು ಅಭ್ಯರ್ಥಿಯು ಮೊದಲಿನಂತೆಯೇ ಲಾಗಿನ್ ಮಾಡಬೇಕಾಗುತ್ತದೆ. ನಂತರ ಅವರು OMR ಚಾಲೆಂಜ್ ಅನ್ನು ಕ್ಲಿಕ್ ಮಾಡಬೇಕಾಗುತ್ತದೆ. ಆ ಬಳಿಕ ಸಂಪೂರ್ಣ OMR ಪ್ರಕ್ರಿಯೆಗಳು ನಿಮ್ಮ ಮುಂದೆ ತೆರದುಕೊಳ್ಳುತ್ತದೆ. ಪೂರ್ಣ 200 ಪ್ರಶ್ನೆಗಳು ನಿಮ್ಮ ಮುಂದೆ ಪ್ರತಿಫಲನವಾಗುತ್ತವೆ. ಅಭ್ಯರ್ಥಿಯು ಯಾವ ಪ್ರಶ್ನೆ ಸಂಖ್ಯೆಗೆ ಆಕ್ಷೇಪಣೆ ಸಲ್ಲಿಸಬೇಕೋ ಅದರ ಮೇಲೆ ಕ್ಲಿಕ್ ಮಾಡುವ ಮೂಲಕ, ಸಂಬಂಧಪಟ್ಟ ದಾಖಲೆಗಳನ್ನು ಅಪ್‌ಲೋಡ್ ಮಾಡಬೇಕಾಗುತ್ತದೆ. ಇದರ ನಂತರ ಅವರು ಆಕ್ಷೇಪಣೆ ಸಲ್ಲಿಸಲು ಶುಲ್ಕವನ್ನು ಸಹ ಪಾವತಿಸಬೇಕಾಗುತ್ತದೆ.

ಇದನ್ನು ಓದಿ:ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ಹೇಗಿರಬೇಕು; ಓದಿದ್ದು ನೆನಪಿನಲ್ಲಿ ಉಳಿಯಬೇಕು ಎಂದರೆ ಏನು ಮಾಡಬೇಕು, ಇಲ್ಲಿವೆ ಟಿಪ್ಸ್​! - How to prepare Govt examination

10ನೇ' ಕ್ಲಾಸ್​​ ಪಾಸ್​ ಆದವರಿಗೆ ಗುಡ್ ನ್ಯೂಸ್: ಶಿಷ್ಯವೇತನಕ್ಕೆ ಈಗಲೇ ಅರ್ಜಿ ಹಾಕಿ - Vidyadhan Scholarship Apply Process

ETV Bharat Logo

Copyright © 2024 Ushodaya Enterprises Pvt. Ltd., All Rights Reserved.