ETV Bharat / bharat

ಶಾಲಾ ರಜೆ ವೇಳೆ ಮಕ್ಕಳಿಗೆ ಸಂಸ್ಕೃತ, ವೇದಾಧ್ಯಯನ ಪಾಠ, ಮಂತ್ರ- ಶ್ಲೋಕ ಪಠನ ಅಭ್ಯಾಸ - Sanatan School

author img

By ETV Bharat Karnataka Team

Published : May 30, 2024, 4:20 PM IST

ರಾಜಸ್ಥಾನದಲ್ಲಿ ಶ್ರೀಮಲಿ ಬ್ರಾಹ್ಮಣ ಸಮುದಾಯವು ಮಕ್ಕಳಿಗೆ ಶಾಲಾ ಬಿಡುವಿನ ವೇಳೆ ಸಂಸ್ಕೃತ, ವೇದಗಳ ಅಧ್ಯಯನ ಮಾಡಿಸುತ್ತಿದೆ.

ರಾಜಸ್ಥಾನದಲ್ಲಿ ಮಕ್ಕಳಿಗೆ ವೇದಾಧ್ಯಯನ ಪಾಠ
ರಾಜಸ್ಥಾನದಲ್ಲಿ ಮಕ್ಕಳಿಗೆ ವೇದಾಧ್ಯಯನ ಪಾಠ (ETV Bharat)

ಜೋಧಪುರ (ರಾಜಸ್ಥಾನ): ಶಾಲಾ ರಜೆಗಳಲ್ಲಿ ಮಕ್ಕಳು ಹಳ್ಳಿಯಲ್ಲಿನ ಅಜ್ಜ- ಅಜ್ಜಿ ಮನೆ, ಪ್ರವಾಸಗಳಲ್ಲಿ ಕಾಲ ಕಳೆಯುತ್ತಾರೆ. ಈ ಖಾಲಿ ಸಮಯವನ್ನೇ ಬಳಸಿಕೊಂಡು ಇಲ್ಲಿ ಸನಾತನ ಸಂಸ್ಥೆಯೊಂದು ಮಕ್ಕಳಿಗೆ ವೇದಾಧ್ಯಯನ ಪಾಠ ಹೇಳಿಕೊಡುತ್ತಿದೆ. ಈ ಮೂಲಕ ಶಾಲಾ ಅವಧಿಯಲ್ಲದ ವೇಳೆಯನ್ನೂ ಮಕ್ಕಳು ಸದುಪಯೋಗ ಮಾಡಿಕೊಳ್ಳಲು ನೆರವಾಗುತ್ತಿದೆ.

ರಾಜಸ್ಥಾನದ ಜೋಧ್​ಪುರದಲ್ಲಿ ಶ್ರೀಮಲಿ ಬ್ರಾಹ್ಮಣ ಸಮುದಾಯ ಈ ಕೆಲಸ ಮಾಡುತ್ತಿದೆ. ಪ್ರಾಚೀನ ಸಂಸ್ಕೃತಿಯನ್ನು ಉಳಿಸಲು ಶಿಬಿರಗಳನ್ನು ಆಯೋಜಿಸುತ್ತಿದೆ. ಇಲ್ಲಿ ಮಕ್ಕಳಿಗೆ ಸಂಸ್ಕೃತ, ವೇದಾಧ್ಯಯನ, ಪೂಜಾ ವಿಧಾನಗಳನ್ನು ಹೇಳಿಕೊಡುವ ಮೂಲಕ ಮಕ್ಕಳನ್ನು ಸುಸಂಸ್ಕೃತರನ್ನಾಗಿ ಮಾಡುತ್ತಿದೆ.

ಇದು 7 ವರ್ಷಗಳಿಂದ ನಡೆದುಕೊಂಡು ಬಂದಿದೆ. ಕೊರೊನಾ ವೇಳೆ ಆನ್‌ಲೈನ್ ತರಬೇತಿ ನಡೆಸಲಾಯಿತು. ಜೋಧ್‌ಪುರ ಮಾತ್ರವಲ್ಲದೇ, ಭಿಲ್ವಾರಾ ಮತ್ತು ಉದಯಪುರ ಸೇರಿದಂತೆ ಇತರ ನಗರಗಳಲ್ಲಿಯೂ ಶಾಖೆಗಳನ್ನು ಆರಂಭಿಸಿದ್ದು, ಅಲ್ಲಿನ ಮಕ್ಕಳಿಗೂ ವೈದಿಕ ಸಂಸ್ಕೃತಿಯನ್ನು ಕಲಿಸುತ್ತಿದೆ.

ಶ್ರೀಮಲಿ ಬ್ರಾಹ್ಮಣ ಸಮಾಜದ ಅಧ್ಯಕ್ಷ ಮಹೇಂದ್ರ ಬೋರಣಿ ಈ ಬಗ್ಗೆ ಮಾಹಿತಿ ನೀಡಿದ್ದು, ಶಿಬಿರಗಳಲ್ಲಿ ಚಿಕ್ಕ ಮಕ್ಕಳಿಗೆ ಪೀತಾಂಬರ (ಧೋತಿ) ಕಟ್ಟುವುದು, ಪೇಟ ಹಾಕುವುದನ್ನು ಕಲಿಸಲಾಗುತ್ತದೆ. ಯಾವುದೇ ವಿಧಿ - ಆರಾಧನೆಯಲ್ಲಿ ಇದು ಅತ್ಯವಶ್ಯಕ. ಬಾಲಕ ಮತ್ತು ಬಾಲಕಿಯರಿಬ್ಬರೂ ಇಲ್ಲಿ ಭಾಗವಹಿಸುತ್ತಾರೆ ಎಂದರು.

ಮಂತ್ರ, ಶ್ಲೋಕ ಪಠಣ: ವೇದಗಳ ಅಧ್ಯಯನದ ಜೊತೆಗೆ, ವಿದ್ಯಾರ್ಥಿಗಳಿಗೆ ಸೂಕ್ಷ್ಮ ಹವನ ಪ್ರಕ್ರಿಯೆಯನ್ನು ಸಹ ಕಲಿಸಲಾಗುತ್ತದೆ. ಪ್ರತಿದಿನ ಹವನ ಮಾಡುವುದನ್ನು ಹೇಳಿಕೊಡಲಾಗುತ್ತದೆ. ಈ ವೇಳೆ ಮಂತ್ರಗಳ ಪಠಣ, ಶ್ಲೋಕವನ್ನು ಯಾವ ರೀತಿ ಹೇಳಬೇಕು. ಎಲ್ಲಿ ನಿಲ್ಲಿಸಬೇಕು ಮತ್ತು ಎಲ್ಲಿ ಸ್ವರವನ್ನು ಕಡಿಮೆ ಮಾಡಬೇಕು ಎಂಬುದನ್ನೂ ತಿಳಿಸಲಾಗುತ್ತದೆ. ಮಂತ್ರವನ್ನು ಪಠಿಸುವಾಗ ಕೈ ಸನ್ನೆ ಮಾಡುವುದು ಮತ್ತು ಅವುಗಳ ಮಹತ್ವವನ್ನು ವಿವರಿಸಲಾಗುತ್ತದೆ ಎಂದು ತಿಳಿಸಿದರು.

ರುದ್ರಾಷ್ಟಾಧ್ಯಾಯರ ನೇತೃತ್ವದಲ್ಲಿ ರುದ್ರಿಪಥ ಪಠನದ ಜತೆಗೆ ಪುರುಷಸೂಕ್ತ, ರುದ್ರಮುಕ್ತ, ಶ್ರೀಸೂಕ್ತ, ನವಗ್ರಹ ಮಂತ್ರ, ಶಾಂತಿ ಪಥ, ಭದ್ರಸೂಕ್ತ, ಗಣಪತಿ ನಾಮಸ್ಮರಣೆ ಜತೆಗೆ ಗಣಪತಿ ಧ್ಯಾನದ ಮಂತ್ರಗಳ ಕುರಿತು ತರಬೇತಿ ನೀಡಲಾಗುತ್ತಿದೆ. ಮಕ್ಕಳಿಗೆ ಅದರ ಪ್ರಯೋಜನಗಳನ್ನು ಸಹ ವಿವರಿಸಲಾಗುತ್ತದೆ ಎಂದರು.

ಮೂರು ಭಾಗಗಳಲ್ಲಿ ಶಿಬಿರ: ವೈದಿಕ ಸಂಸ್ಕಾರ ಶಿಬಿರವನ್ನು ಮೂರು ಭಾಗಗಳಲ್ಲಿ ನಡೆಸಲಾಗುತ್ತಿದೆ. ಬೆಳಗ್ಗೆ 6ಕ್ಕೆ ಮಕ್ಕಳಿಗೆ ಯಜ್ಞೋಪವೀತ ಧರಿಸಿ ತರಬೇತಿ ನೀಡಲಾಗುತ್ತದೆ. ಇದರಲ್ಲಿ ಚಿಕ್ಕ ಮಕ್ಕಳಿಗೂ ಅವಕಾಶ ನೀಡಲಾಗುತ್ತದೆ. ಸಂಜೆ 40 ವರ್ಷ ಮೇಲ್ಪಟ್ಟವರಿಗೆ ತರಬೇತಿ ನೀಡಲಾಗುತ್ತದೆ. ಸುಮಾರು 1500 ಮಕ್ಕಳು ಶಿಬಿರಗಳಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ: '10ನೇ' ಕ್ಲಾಸ್​​ ಪಾಸ್​ ಆದವರಿಗೆ ಗುಡ್ ನ್ಯೂಸ್: ಶಿಷ್ಯವೇತನಕ್ಕೆ ಈಗಲೇ ಅರ್ಜಿ ಹಾಕಿ - Vidyadhan Scholarship Apply Process

ETV Bharat Logo

Copyright © 2024 Ushodaya Enterprises Pvt. Ltd., All Rights Reserved.