ನದಿಯಲ್ಲಿ ಮುಳುಗುತ್ತಿದ್ದ ಮೂವರನ್ನು ರಕ್ಷಿಸಿದ್ದ ಧೀರನಿಗೆ ರಾಷ್ಟ್ರೀಯ ಶೌರ್ಯ ಪ್ರಶಸ್ತಿ ಪುರಸ್ಕಾರ

By

Published : Jan 26, 2023, 7:54 PM IST

Updated : Feb 3, 2023, 8:39 PM IST

thumbnail

ಹುಬ್ಬಳ್ಳಿ: ನದಿಯಲ್ಲಿ ಮುಳುಗುತ್ತಿದ್ದ ಮೂವರನ್ನು ರಕ್ಷಿಸಿ ಸಾಹಸ ಮೆರೆದಿದ್ದ ಹುಬ್ಬಳ್ಳಿಯ ನವನಗರದ ಕಾನೂನು ವಿಶ್ವವಿದ್ಯಾಲಯದ ವಿದ್ಯಾರ್ಥಿ ಆದಿತ್ಯ ಎಂ. ಶಿವಳ್ಳಿ ಅವರು, ಭಾರತೀಯ ಮಕ್ಕಳ ಕಲ್ಯಾಣ ಪರಿಷತ್ತು ಗಣರಾಜ್ಯೋತ್ಸವದ ನಿಮಿತ್ತ  ನೀಡುವ 2022-23ನೇ ಸಾಲಿನ ರಾಷ್ಟ್ರೀಯ ಶೌರ್ಯ ಪ್ರಶಸ್ತಿ ಸ್ವೀಕರಿಸಿ ದೆಹಲಿಯಿಂದ ಹುಬ್ಬಳ್ಳಿಗೆ ಮರಳಿದ್ದಾರೆ.

2020ರ ಜನವರಿಯಲ್ಲಿ 14ರಂದು ಕುಟುಂಬದೊಂದಿಗೆ ಶಿರಸಿ ಬಳಿಯ ಮೋರೆಗಾರ ಜಲಪಾತಕ್ಕೆ ಪ್ರವಾಸ ಹೋಗಿದ್ದ ಸಂದರ್ಭದಲ್ಲಿ ನೀರಿನಲ್ಲಿ ಮುಳಗಿತ್ತಿದ್ದ ಮೂವರನ್ನು ರಕ್ಷಿಸಿದ್ದರು. ಅದಕ್ಕಾಗಿ ಆದಿತ್ಯ ಅವರಿಗೆ ಜ.26ರಂದು ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವ ಸಮಾರಂಭದಲ್ಲಿ ಪ್ರಶಸ್ತಿಯನ್ನು ನೀಡಲಾಯಿತು.

ಮಗನಿಗೆ ಪ್ರಶಸ್ತಿ ಸಿಕ್ಕಿದ್ದಕ್ಕೆ ಹರ್ಷ ವ್ಯಕ್ತಪಡಿಸಿದ ತಂದೆ ಮಲ್ಲಿಕಾರ್ಜುನ ತಾಯಿ ಸುಜಾತಾ ಮಾಧ್ಯಮಗಳೊಂದಿಗೆ ಮಾತನಾಡಿ, ಮಗನಿಗೆ ನೀರು ಅಂದರೆ ಭಯವಿತ್ತು, ಹಾಗಾಗಿ ಅವನಿಗೆ ಈಜು ಕಲಿಯಲು ಹಾಕಿದ್ದೆವು. ಇದೀಗ ಮಗ ಅದೇ ನೀರಿನಲ್ಲಿ ಮುಳುಗುತ್ತಿದ್ದವರನ್ನ ರಕ್ಷಣೆ ಮಾಡಿ ಜೀವ ಉಳಿಸಿದ್ದಾನೆ, ಪ್ರಶಸ್ತಿ ಸಿಕ್ಕಿದ್ದಕ್ಕಿಂತ ಮೂರು ಜನರ ಜೀವ ರಕ್ಷಣೆ ಮಾಡಿದ್ದು ದೊಡ್ಡ ಪ್ರಶಸ್ತಿಯಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಇದನ್ನೂ ಓದಿ: ಅಪಘಾತದಲ್ಲಿ ಗಾಯಗೊಂಡ ರಿಷಭ್​ ಪಂತ್​ ರಕ್ಷಿಸಿದ್ದ ನಾಲ್ವರಿಗೆ ಸಿಎಂ ಸನ್ಮಾನ

Last Updated : Feb 3, 2023, 8:39 PM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.