ದಸರಾ ಏರ್ ಶೋ ರಿಹರ್ಸಲ್- ವಿಡಿಯೋ

By ETV Bharat Karnataka Team

Published : Oct 22, 2023, 9:30 PM IST

thumbnail

ಮೈಸೂರು: ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಅಕ್ಟೋಬರ್ 23 ರಂದು ನಡೆಯಲಿರುವ ಏರ್ ಶೋ ರಿಹರ್ಸಲ್ ಭಾನುವಾರ ಸಂಜೆ ನಗರದ ಪಂಜಿನ ಕವಾಯತು ಮೈದಾನದಲ್ಲಿ ನಡೆಯಿತು. ನಗರದ ಪಂಜಿನ ಕವಾಯತು ಮೈದಾನದಲ್ಲಿ ವಾಯುಪಡೆಯ ಸೂರ್ಯ ಕಿರಣ್ ಯುದ್ಧ ವಿಮಾನದ ನೇತೃತ್ವದಲ್ಲಿ ಕಸರತ್ತು ನಡೆಯಿತು. ರಿಹರ್ಸಲ್ ನೋಡಲು ಬಂದಿದ್ದ ಜನರು ಸಂತಸ ವ್ಯಕ್ತಪಡಿಸಿದರು.

ಇದನ್ನೂ ಓದಿ: ಅ.24ರಂದು ಸಂಜೆ 4.40ಕ್ಕೆ ಚಿನ್ನದ ಅಂಬಾರಿಗೆ ಪುಷ್ಪಾರ್ಚನೆ.. ಆ ದಿನದ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ!

ಈ ಯುದ್ದ ವಿಮಾನಗಳ ಜುಗಲ್‌ಬಂಧಿ, ಕ್ರಾಸಿಂಗ್ ಲೆವೆಲ್ ಆಕರ್ಷಣೀಯವಾಗಿತ್ತು. ಲೋಹದ ಹಕ್ಕಿಗಳು ಆಕಾಶದಲ್ಲಿ ಚಮತ್ಕಾರ ತೋರಿಸುತ್ತಿದ್ದಂತೆ ನೆರೆದಿದ್ದ ಜನರು ಆಗಸದತ್ತ ನೋಡಿ ಪುಳಕಗೊಂಡರು. ರಿಹರ್ಸಲ್ ಕುರಿತು ವಿಂಗ್ ಕಮಾಂಡರ್ ಅರ್ಜುನ್  ಮಾಹಿತಿ ನೀಡಿದರು.

ಬೆಂಗಳೂರಿನಲ್ಲಿ ನಡೆಯುವ ಏರ್‌ ಶೋಗೆ ಇಡೀ ದೇಶಾದ್ಯಂತ ಜನರು ಆಗಮಿಸುತ್ತಾರೆ. ದೇಶ, ವಿದೇಶಗಳ ಲೋಹದ ಹಕ್ಕಿಗಳ ಘರ್ಜನೆ ಜನರಲ್ಲಿ ರೋಮಾಂಚನ ಉಂಟು ಮಾಡುತ್ತದೆ. 

ಇದನ್ನೂ ಓದಿ: ಅರಮನೆಯ ಶರನ್ನವರಾತ್ರಿಯ ಸಾಂಪ್ರದಾಯಿಕ ಪೂಜೆಗಳ ಬಗ್ಗೆ ರಾಜವಂಶಸ್ಥ ಯಧುವೀರ್ ಒಡೆಯರ್ ಹೇಳಿದ್ದೇನು?.. ಅವರ ಮಾತಲ್ಲೇ ಕೇಳಿ!

ABOUT THE AUTHOR

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.