ಚಿಕ್ಕಮಗಳೂರು : ಎರಡು ಸರ್ಕಾರಿ ಬಸ್​ಗಳ ಮುಖಾಮುಖಿ ಡಿಕ್ಕಿ, 20 ಜನರಿಗೆ ಗಾಯ

By ETV Bharat Karnataka Team

Published : Dec 10, 2023, 8:25 PM IST

thumbnail

ಚಿಕ್ಕಮಗಳೂರು : ಎರಡು ಸರ್ಕಾರಿ ಬಸ್​ಗಳ ಮಧ್ಯೆ ಮುಖಾಮುಖಿ ಡಿಕ್ಕಿಯಾಗಿ 20ಕ್ಕೂ ಹೆಚ್ಚು ಜನರಿಗೆ ಗಾಯವಾಗಿರುವ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಮಾಕೋನಹಳ್ಳಿ ಗ್ರಾಮದ ಬಳಿ ನಡೆದಿದೆ. ಸರ್ಕಾರಿ ಬಸ್​ಗಳ ಅಪಘಾತಕ್ಕೆ ಎರಡೂ ಬಸ್​ನ ಚಾಲಕರ ಬೇಜವಾಬ್ದಾರಿ ಹಾಗೂ ಅತಿ ವೇಗವಾಗಿ ಬಸ್​​ ಅನ್ನು ಚಲಾಯಿಸಿದ್ದೇ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಬಸ್​ಗಳು ಮುಖಾಮುಖಿ ಡಿಕ್ಕಿ ಆದ ಸಂದರ್ಭದಲ್ಲಿ ಎರಡು ಬಸ್​ನ ಡ್ರೈವರ್ ಸೀಟಿನ ಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಹಾಗಾಗಿ, ಎರಡು ಬಸ್ಸಿನ ಚಾಲಕರಿಗೂ ಗಾಯವಾಗಿದೆ. ಬಸ್​ನಲ್ಲಿದ್ದ 20ಕ್ಕೂ ಹೆಚ್ಚು ಜನರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, 5 ಆಂಬ್ಯುಲೆನ್ಸ್​ಗಳಲ್ಲಿ ಅವರನ್ನು ಮೂಡಿಗೆರೆ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೂಡಿಗೆರೆ ತಾಲೂಕು ಬಹುತೇಕ ಮಲೆನಾಡು ಭಾಗದಿಂದ ಕೂಡಿದೆ. ಇಲ್ಲಿ ರಸ್ತೆಗಳಲ್ಲಿ ತಿರುವು ಹೆಚ್ಚು. ಹಾಗಾಗಿ, ವಾಹನಗಳ ಚಾಲಕರು ಅತ್ಯಂತ ಜಾಗರೂಕರಾಗಿ ವಾಹನ ಚಲಾಯಿಸಬೇಕು. ಇಲ್ಲವಾದರೆ ಅಪಘಾತ ಕಟ್ಟಿಟ್ಟ ಬುತ್ತಿ. ಹೀಗಾಗಿ ಮೂಡಿಗೆರೆ ತಾಲೂಕಿನ ಅಲ್ಲಲ್ಲೇ ಸಾಕಷ್ಟು ಅಪಘಾತಗಳು ಕೂಡ ಸಂಭವಿಸುತ್ತಿವೆ. ಆದರೆ, ತರಬೇತಿ ಪಡೆದ ಸರ್ಕಾರಿ ಬಸ್​ನ ಚಾಲಕರು ವೇಗವಾಗಿ ಹಾಗೂ ಅಜಾಗರೂಕತೆಯಿಂದ ವಾಹನ ಚಲಾಯಿಸುತ್ತಿರುವುದಕ್ಕೆ ಸ್ಥಳೀಯರು ಅಸಮಾಧಾನ ಹೊರ ಹಾಕಿದ್ದಾರೆ. ಮೂಡಿಗೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

ಇದನ್ನೂ ಓದಿ: ಹಿರಿಯೂರು ಬಳಿ ಲಾರಿ-ಬಸ್ ಭೀಕರ ಅಪಘಾತ: ಐವರು ದುರ್ಮರಣ

ABOUT THE AUTHOR

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.