ಆ್ಯಕ್ಷನ್ ಪ್ರಿನ್ಸ್ ಕೆಡಿ ಚಿತ್ರದ ಅಖಾಡದಲ್ಲಿ ಬಾಲಿವುಡ್ ಖಳನಾಯಕ

By

Published : Jan 30, 2023, 8:39 PM IST

Updated : Feb 3, 2023, 8:39 PM IST

thumbnail

ನಿರ್ದೇಶಕ ಪ್ರೇಮ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಬಹು ನಿರೀಕ್ಷಿತ ಸಿನೆಮಾ ಕೆಡಿಯ ಟೈಟಲ್​ ಲಾಂಚ್​ ಕಾರ್ಯಕ್ರಮ ಅದ್ಧೂರಿಯಾಗಿ ನಡೆದಿದೆ. ಸಿನೆಮಾಗೆ ಆ್ಯಕ್ಷನ್​ ಪ್ರಿನ್ಸ್​ ಧ್ರುವ ಸರ್ಜಾ ಭರ್ಜರಿಯಾಗಿ ತಯಾರಾಗಿದ್ದಾರೆ. ಈ ಸಿನೆಮಾದಲ್ಲಿ ಧ್ರುವ ಸರ್ಜಾಗೆ ಠಕ್ಕರ್​ ಕೊಡಲು ಬಾಲಿವುಡ್​ ಖಳನಾಯಕ ಸಂಜಯ್​ ದತ್​ ಅವರು ಅಖಾಡಕ್ಕೆ ಆಗಮಿಸಿದ್ದಾರೆ.

ಕೆಡಿ ಪ್ಯಾನ್​ ಇಂಡಿಯಾ ಸಿನೆಮಾವಾಗಿದ್ದು, ಒಂದಲ್ಲ ಒಂದು ವಿಚಾರಕ್ಕೆ ಸದಾ ಸುದ್ದಿಯಲ್ಲಿದೆ. ಇದೀಗ ಕೆಜಿಎಫ್​ ಸಿನೆಮಾದಲ್ಲಿ ಅಬ್ಬರಿಸಿದ್ದ ಅಧೀರನನ್ನು ದುಬಾರಿ ಸಂಭಾವನೆ ಕೊಟ್ಟು ಸಿನೆಮಾ ಅಡ್ಡಕ್ಕೆ ಕರೆತಂದು ಮತ್ತೆ ಸುದ್ದಿಯಲ್ಲಿದೆ.​ ಕಳೆದ ವರ್ಷ ಡಿಸೆಂಬರ್​ನಲ್ಲಿ ಯಾರಿಗೂ ತಿಳಿಯದಂತೆ ಕ್ರೇಜಿಸ್ಟಾರ್ ರವಿಚಂದ್ರನ್ ಅವರನ್ನು ಕರೆ ತಂದು ಹೊಸ ವರ್ಷಕ್ಕೆ ಅಣ್ಣಯ್ಯಪ್ಪನ‌ ಪಾತ್ರ ರಿವೀಲ್ ಮಾಡಿದ್ದರು. ಈಗ ಅದೇ ರೀತಿ ಎರಡನೇ ಹಂತದ ಚಿತ್ರೀಕರಣ ನಡೆಸುತ್ತಿರುವ ಪ್ರೇಮ್ ಸಂಜಯ್ ದತ್ ಅವರ ಶೂಟಿಂಗ್ ಪ್ರಾರಂಭಿಸಿದ್ದಾರೆ.

ಇದನ್ನೂ ಓದಿ : ಮಗಳ ಮೆಹೆಂದಿ ಸಮಾರಂಭದಲ್ಲಿ ಸುನೀಲ್​ ಶೆಟ್ಟಿ ಭರ್ಜರಿ ಡ್ಯಾನ್ಸ್: ಫೋಟೋ ವೈರಲ್​

Last Updated : Feb 3, 2023, 8:39 PM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.