ಹರಪನಹಳ್ಳಿಯಲ್ಲಿ ಜೆಪಿ ನಡ್ಡಾ ಮತಬೇಟೆ, ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ

By

Published : May 7, 2023, 5:52 PM IST

thumbnail

ದಾವಣಗೆರೆ: ಹರಪನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಇಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಅವರು ಭರ್ಜರಿ ರೋಡ್​ ಶೋ ನಡೆಸಿ ಬಿಜೆಪಿ ಅಭ್ಯರ್ಥಿ ಕರುಣಾಕರ ರೆಡ್ಡಿ ಪರ ಮತಯಾಚಿಸಿದರು. ದಾವಣಗೆರೆ ಲೋಕಸಭಾ ವ್ಯಾಪ್ತಿಯಲ್ಲಿ ಬರುವ ಹರಪನಹಳ್ಳಿಯಲ್ಲಿರುವ ಹರಿಹರ ವೃತ್ತದಿಂದ ಆರಂಭವಾದ ರೋಡ್ ಶೋ ಐಬಿ ಸರ್ಕಲ್ ವರೆಗೆ ನಡೆಯಿತು. ರೋಡ್​ ಶೋನಲ್ಲಿ ಬಿಜೆಪಿ ಪಕ್ಷದ ಕಾರ್ಯಕರ್ತರು ಭಾಗಿಯಾಗಿ ಪಕ್ಷದ ಬಾವುಟ ಹಿಡಿದು ಮೋದಿ ಮೋದಿ ಎಂದು ಘೋಷಣೆ ಕೂಗಿದರು. 

ಇದೇ ವೇಳೆ ರೋಡ್​ ಶೋ ನಲ್ಲಿ ಭಾಷಣ ಮಾಡಿದ ಜೆ ಪಿ ನಡ್ಡಾ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಕೇಂದ್ರದ ಯೋಜನೆಗಳನ್ನು ನಿಲ್ಲಿಸುತ್ತಾರೆ. ಅದಕ್ಕಾಗಿ ಈ ಬಾರಿ ಬಿಜೆಪಿ ಗೆಲ್ಲಿಸಿ ಎಂದು ಕಾಂಗ್ರೆಸ್​​ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು. ಕರುಣಾಕರ ರೆಡ್ಡಿ ಅವರಿಗೆ ಮತ ನೀಡಿ, ಬಿಜೆಪಿ ಗೆಲ್ಲಿಸಿ ಎಂದು ಮನವಿ ಮಾಡಿಕೊಂಡರು. ಲಿಂಗಾಯತರು, ಒಕ್ಕಲಿಗರು ಮತ್ತು ಎಸ್​ಸಿ ಎಸ್​ಟಿ ಸಮುದಾಯಗಳಿಗೆ ನಮ್ಮ ಸರ್ಕಾರ ಮೀಸಲಾತಿ ಹೆಚ್ಚಿಸಿದೆ. ಕಾಂಗ್ರೆಸ್​ನವನ್ನು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ನಡ್ಡಾ ಆರೋಪಿಸಿದರು. 

ಇದನ್ನೂ ಓದಿ : ಬೆಳಗಾವಿ ದಕ್ಷಿಣದಲ್ಲಿ ಅಮಿತ್ ಶಾ ಮತಬೇಟೆ: ಅಭಯ ಪಾಟೀಲ ಪರ ಭರ್ಜರಿ ರೋಡ್ ಶೋ

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.