ಮರದ ದಿಮ್ಮಿಗಳಿಂದ ಅಸೋಗಾ ಸೇತುವೆ ಬ್ಲಾಕ್.. ರೈತರ ಜಮೀನುಗಳಿಗೆ ನುಗ್ಗಿದ ನೀರು

By

Published : Jul 22, 2023, 2:30 PM IST

thumbnail

ಬೆಳಗಾವಿ : ಪಶ್ಚಿಮಘಟ್ಟ ಪ್ರದೇಶದಲ್ಲಿ ಬಿಟ್ಟು ಬಿಡದೆ ಸುರಿಯುತ್ತಿರುವ ಮಳೆ ಖಾನಾಪುರ ತಾಲೂಕಿನ‌ಲ್ಲಿ ದೊಡ್ಡ ಅವಾಂತರವನ್ನೇ ಸೃಷ್ಟಿಸಿದೆ. ನದಿ, ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿದ್ದು, ಹೆಚ್ಚುವರಿ ನೀರು ರೈತರ ಜಮೀನುಗಳಿಗೆ ನುಗ್ಗುತ್ತಿದೆ. ಖಾನಾಪುರ ತಾಲೂಕಿನ ಮಲಪ್ರಭಾ, ಪಾಂಡರಿ ಮತ್ತು ಮಹದಾಯಿ ನದಿಗಳು, ಕಳಸಾ, ಭಂಡೂರಿ, ಕೋಟ್ನಿ, ಮಂಗೇತ್ರಿ, ಪಣಸೂರಿ, ತಟ್ಟಿ, ಕುಂಭಾರ, ಬೈಲ್ ಮತ್ತಿತರೆ ಹಳ್ಳಕೊಳ್ಳಗಳಲ್ಲಿ ನೀರಿನ ಹರಿವು ಹೆಚ್ಚಾಗಿದೆ. ಇನ್ನೊಂದೆಡೆ, ನೀರಿನ ರಭಸಕ್ಕೆ ಕೊಚ್ಚಿಕೊಂಡು ಬಂದ ಅರಣ್ಯದಲ್ಲಿನ ಮರದ ದಿಮ್ಮಿಗಳಿಂದಾಗಿ ಅಸೋಗಾ ಸೇತುವೆ ಬ್ಲಾಕ್ ಆಗಿದೆ.‌ ಪರಿಣಾಮ ಮಳೆ ನೀರು ಕೃಷಿ ಜಮೀನುಗಳಿಗೆ ನುಗ್ಗಿದ್ದು, ರೈತರು ಬೆಳೆ‌ ಹಾನಿ ಭೀತಿ ಎದುರಿಸುತ್ತಿದ್ದಾರೆ. ಕೂಡಲೇ ಸಣ್ಣ ನೀರಾವರಿ ಇಲಾಖೆ ಇಂಜಿನಿಯರ್​ಗಳು ಜೆಸಿಬಿ ಬಳಸಿ ಮರದ ದಿಮ್ಮಿಗಳನ್ನು ತೆರವುಗಳಿಸಿ, ನೀರು ಸರಾಗವಾಗಿ ಮುಂದೆ ಹರಿಯುವಂತೆ ಮಾಡಬೇಕೆಂದು ಅಸೋಗಾ, ಭೋಸಗಾಳಿ, ಕುಟ್ಟಿನೋ ನಗರದ ರೈತರು ಒತ್ತಾಯಿಸಿದ್ದಾರೆ.

ಬೆಳಗಾವಿ ಜಲಾಶಯಗಳ ನೀರಿನ ಮಟ್ಟ ಇಂತಿದೆ: 

ಮಲಪ್ರಭಾ ಜಲಾಶಯ ಗರಿಷ್ಠ ಮಟ್ಟ : 2079.50 ಅಡಿ, ಇಂದಿನ ನೀರಿನ ಮಟ್ಟ : 2047.60 ಅಡಿ, ಒಳ ಹರಿವು : 11930 ಕ್ಯೂಸೆಕ್, ಹೊರ ಹರಿವು : 194 ಕ್ಯೂಸೆಕ್ ಇದೆ.  

ಘಟಪ್ರಭಾ ಜಲಾಶಯದ ಗರಿಷ್ಠ ಮಟ್ಟ : 2175 ಅಡಿ,  ಇಂದಿನ ನೀರಿನ ಮಟ್ಟ: 2109.86 ಅಡಿ,  ಒಳ ಹರಿವು: 25765 ಕ್ಯೂಸೆಕ್, ಹೊರ ಹರಿವು : 94 ಕ್ಯೂಸೆಕ್ ಇದೆ.  

ಇದನ್ನೂ ಓದಿ : ಕಲಬುರಗಿಯಲ್ಲಿ ವರುಣಾರ್ಭಟ: ರಸ್ತೆ ಸಂಚಾರ ಕಡಿತಗೊಂಡು ಜನಜೀವನ ಅಸ್ತವ್ಯಸ್ತ

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.