ETV Bharat / sukhibhava

ಬೇಸಿಗೆ ಟಿಪ್ಸ್​: ಹುಳಿ ಬಂದ ಮೊಸರೆಂದು ಬಿಸಾಡದಿರಿ, ಹಲವು ಪ್ರಯೋಜನಗಳುಂಟು!

author img

By

Published : Mar 29, 2023, 12:53 PM IST

ಬೇಸಿಗೆಯಲ್ಲಿ ಮೊಸರು ಬಲು ಬೇಗ ಹುಳಿಯಾಗುತ್ತದೆ. ಇಂತಹ ಹುಳಿ ಮೊಸರು ಅನೇಕ ಪ್ರಯೋಜನಗಳನ್ನು ಹೊಂದಿದೆ.

summer-tips-use-curd-that-has-turned-sour-like-this
summer-tips-use-curd-that-has-turned-sour-like-this

ಬೇಸಿಗೆ ಬಂತೆಂದರೆ ಸಾಕು ಬಿಸಿಲಿನ ಬೇಗೆಗೆ ದೇಹ ಬಲುಬೇಗ ದಣಿಯುತ್ತದೆ. ಈ ಬೇಗೆ ಕೇವಲ ಪ್ರಾಣಿ ಸಂಕುಲಕ್ಕೆ ಮಾತ್ರವಲ್ಲ, ಆಹಾರ ಪದಾರ್ಥಗಳ ಮೇಲೂ ಪರಿಣಾಮ ಬೀರುತ್ತದೆ. ಬೇಸಿಗೆಯಲ್ಲಿ ಹಾಲು, ಬೇಗ ಹಾಳಾಗುವುದನ್ನು ಕಾಣಬಹುದು. ಹಾಲನ್ನು ಕಾಲಕಾಲಕ್ಕೆ ಕಾಯಿಸದೇ ಹೋದರೆ ಅದು ಒಡೆದು ಹುಳಿಯಾಗುತ್ತದೆ. ಇದನ್ನು ತಪ್ಪಿಸಲು ಫ್ರಿಡ್ಜ್​ನಲ್ಲಿಟ್ಟರೂ ರುಚಿ ಬದಲಾಗಿ, ಬಳಸಲು ಯೋಗ್ಯವಾಗುವುದಿಲ್ಲ. ಈ ರೀತಿ ಹುಳಿ ಬಂದ ಮೊಸರಿನಲ್ಲಿ ಕೆಲವು ಸ್ವಾದಿಷ್ಟ ಆಹಾರಗಳನ್ನು ತಯಾರಿಸುವ ಮೂಲಕ ಅದು ವ್ಯರ್ಥವಾಗುವುದನ್ನು ತಪ್ಪಿಸಬಹುದು.

  • ಹುಳಿ ಬಂದ ಮೊಸರನ್ನು ಕೆಲವು ಅಡುಗೆಗೆ ಬಳಕೆ ಮಾಡುವುದರಿಂದ ಅದು ಆಹಾರದ ರುಚಿ ಮತ್ತು ಮೃದುತ್ವ ಹೆಚ್ಚಿಸುತ್ತದೆ.
  • ಸಾಮಾನ್ಯವಾಗಿ ಇಡ್ಲಿ ಮತ್ತು ದೋಸೆಯ ಹಿಟ್ಟು ರಾತ್ರಿ ವೇಳೆ ಹುದುಗುವಿಕೆಗೆ ಒಳಗಾಗುತ್ತದೆ. ಇದರಿಂದ ರುಚಿ ಹೆಚ್ಚುತ್ತದೆ. ಒಂದು ವೇಳೆ ರಾತ್ರಿಯೆಲ್ಲಾ ಈ ಪ್ರಕ್ರಿಯೆಗೆ ಬಿಡಲು ಸಮಯವಿಲ್ಲ. ತಕ್ಷಣಕ್ಕೆ ಇಡ್ಲಿ, ದೋಸೆ ಬೇಕೆಂದರೆ ಆ ಹಿಟ್ಟಿಗೆ ಮೊಸರು ಮತ್ತು ನೀರು ಸೇರಿಸಿ. ಇದರಿಂದ ಆಹಾರದ ಮೃದುತ್ವ ಜೊತೆಗೆ ಸ್ವಾದಿಷ್ಟವೂ ಹೆಚ್ಚುತ್ತದೆ.
  • ಡೊಕ್ಲಾದಂತಹ ಆಹಾರ ತಯಾರಿಸಲಯ ಸಾಮಾನ್ಯ ಮೊಸರಿನ ಬದಲು ಹುಳಿ ಮೊಸರನ್ನು ಸೇರಿಸುವುದರಿಂದ ಮತ್ತಷ್ಟ ಸಾಫ್ಟ್​ ಮಾಡಬಹುದು. ಅಲ್ಲದೇ, ಇದರಿಂದ ನಿಮ್ಮ ಆಹಾರ ಹೆಚ್ಚು ರುಚಿಕರವಾಗುತ್ತದೆ.
  • ಅನೇಕರು ಬೇಳೆಗಳ ಹಿಟ್ಟು, ರಾಗಿ ಹಿಟ್ಟು ಮತ್ತು ರವೆಯಿಂದ ದಿಢೀರ್​ ದೋಸೆ ಮಾಡುವುದು ಕಾಣಬಹುದು. ಈ ಹಿಟ್ಟಿಗೆ ನೀರಿನ ಜೊತೆಗೆ ಮೊಸರು ಹಾಕಿ ಕಲಸುವುದರಿಂದ ದೋಸೆ ತತ್​ಕ್ಷಣಕ್ಕೆ ಮೃದುವಾಗಿಯೂ, ಟೇಸ್ಟಿಯಾಗಿಯೂ ಇರುತ್ತದೆ.
  • ಚೋಲೆ ಬಟೂರಾ, ಬದನೆಕಾಯಿ, ದಹಿ ಆಲೂ ರೀತಿಯ ಪಲ್ಯಗಳಿಗೆ ಕಡಲೆಬೀಜ, ಎಳ್ಳು, ಕೊಬ್ಬರಿಯನ್ನು ಸಾಮಾನ್ಯವಾಗಿ ಬಳಕೆ ಮಾಡುತ್ತೇವೆ. ಅದಕ್ಕೆ ಕೊಂಚ ಮೊಸರು ಸೇರಿಸುವುದರಿಂದ ಈ ಪಲ್ಯಗಳು ಗಟ್ಟಿಯಾಗಿ ಸ್ವಾದಿಷ್ಟವಾಗಲು ಸಾಧ್ಯವಿದೆ.
  • ಸಾಮಾನ್ಯ ಮೊಸರಿನ ಬದಲಾಗಿ ಹುಳಿ ಮೊಸರಿನಿಂದಲೂ ಯೋಗರ್ಟ್​ ತಯಾರಿಸಬಹುದು. ಈ ಹುಳಿ ನಿಮ್ಮ ಬಾಯಿ ರುಚಿ ಕೆಡಿಸುತ್ತದೆ ಎಂದರೆ ಅದಕ್ಕೆ ಜೀರಿಗೆ, ಕಡಲೆಬೀಜ, ಈರುಳ್ಳಿ ಮತ್ತು ಕೆಂಪು ಮೆಣಸಿನಕಾಯಿ ಜೊತೆಗೆ ಬೆಳ್ಳುಳ್ಳಿ ಎಸಳುಗಳನ್ನು ಎಣ್ಣೆಯಲ್ಲಿ ಚೆನ್ನಾಗಿ ಹುರಿದು, ಯೋಗರ್ಟ್​​ಗೆ ಬೆರೆಸಿ.
  • ಬ್ರೆಡ್​ ಮತ್ತು ಇತರೆ ಬೇಕಿಂಗ್​ ಆಹಾರಗಳ ಹಿಟ್ಟಿಗೂ ಕೂಡ ಯೀಸ್ಟ್​ ಬದಲಾಗಿ ಹುಳಿ ಮೊಸರನ್ನು ಬಳಕೆ ಮಾಡಬಹುದು. ಇದರಲ್ಲಿನ ಪ್ರೊಬಯೊಟೆಕ್​ ಅಂಶಗಳು ಹೊಟ್ಟೆಯ ಆರೋಗ್ಯಕ್ಕೆ ಸಹಾಯ ಮಾಡಿ, ಜೀರ್ಣಕ್ರಿಯೆ ವ್ಯವಸ್ಥೆ ಮೇಲೆ ಉತ್ತಮ ಪರಿಣಾಮ ಬೀರುತ್ತದೆ.
  • ಫ್ರೆಂಚ್​ ಫ್ರೈಸ್​, ಚಿಕನ್​ ವಿಂಗ್ಸ್​​ ಮತ್ತು ಸಲಾಡ್​, ಕ್ರೀಮ್​ ಚೀಸ್​ಗಳು ಬಹುತೇಕ ಮಂದಿಗೆ ಇಷ್ಟ. ಇವುಗಳ ತಯಾರಿಕೆಯಲ್ಲೂ ಕೂಡ ಹುಳಿ ಮೊಸರನ್ನು ಬಳಕೆ ಮಾಡುವುದರಿಂದ ರುಚಿ ಸಖತ್​ ಹೆಚ್ಚುತ್ತದೆ.
  • ಬೇಸಿಗೆಯಲ್ಲಿ ದಾಹ ತಣಿಸುವ ಮಜ್ಜಿಗೆ ಅನೇಕ ಮಂದಿಗೆ ಬಲು ಇಷ್ಟ. ಇದಕ್ಕೆ ಕೂಡ ಸಾಮಾನ್ಯ ಬದಲು ಹುಳಿ ಮೊಸರು ಬೆರೆಸಬಹುದು.
  • ಹುಳಿ ಮೊಸರನ್ನು ಕೇವಲ ಆಹಾರ ಪದಾರ್ಥಗಳಿಗೆ ಮಾತ್ರ ಬಳಕೆ ಮಾಡದೇ ಅದನ್ನು ಗಿಡಗಳ ಬೆಳವಣಿಗೆಯಲ್ಲೂ ಬಳಸಬಹುದು ಎನ್ನುತ್ತಾರೆ ತಜ್ಞರು. ಐದು ಲೀಟರ್​ ನೀರಿಗೆ ಒಂದು ಕಪ್​ ಮೊಸರು ಬಳಸಿ ಅದನ್ನು ಗಿಡಗಳಿಗೆ ಸಿಂಪಡಿಸುವುದರಿಂದ ಗಿಡಗಳಿಗೆ ಉತ್ತಮ ಪೋಷಕಾಂಶ ಲಭ್ಯವಾಗುತ್ತದೆ. ಆರೋಗ್ಯಕರವಾಗಿ ಬೆಳೆಯುತ್ತದೆ.
  • ಈ ಹುಳಿ ಮೊಸರನ್ನು ಸೌಂದರ್ಯ ಚಿಕಿತ್ಸೆಗಳನ್ನು ಬಳಸಬಹುದು. ಫೇಸ್​ ಪ್ಯಾಕ್​ ಮತ್ತು ಹೇರ್​ ಪ್ಯಾಕ್​ನಲ್ಲಿ ಬಳಕೆ ಮಾಡುವುದರಿಂದ ಚರ್ಮ ಮತ್ತು ಕೂದಲಿಗೆ ಕಾಂತಿ ನೀಡುತ್ತದೆ. ಇದರಲ್ಲಿನ ಲ್ಯಾಕ್ಟಿಕ್​ ಆಮ್ಲ ತ್ವಚೆಯ ಆರೋಗ್ಯ ಕಾಪಾಡುವಂತೆ ಮಾಡುತ್ತದೆ.
  • ಅನೇಕರಿಗೆ ಕೂದಲು ಉದುರುವ ಸಮಸ್ಯೆ ಸಾಮಾನ್ಯ. ಆಗ ಕೂದಲಿನ ಬುಡಕ್ಕೆ ಹುಳಿ ಮೊಸರನ್ನು ಹಚ್ಚುವುದರಿಂದ ಸಮಸ್ಯೆ ಕಡಿಮೆಯಾಗುತ್ತದೆ. ಬಿ5 ಮತ್ತು ಡಿ ವಿಟಮಿನ್​ ಇದರಲ್ಲಿದ್ದು, ಜಿಂಕ್​, ಪೊಟಾಶಿಯಂ, ಮೆಗ್ನಿಶಿಯಂ ಮತ್ತು ಅಮಿನೊ ಆಮ್ಲಗಳು ಇದರಲ್ಲಿದ್ದು, ಕೂದಲಿನ ಬುಡವನ್ನು ಆರೋಗ್ಯವಾಗಿಡುತ್ತದೆ. ಜೊತೆಗೆ, ಫಂಗಲ್​ನಂತಹ ಸೋಂಕಿನಿಂದ ಪಾರು ಮಾಡುತ್ತದೆ.
  • ಪೊಟಾಶಿಯಂ ಮತ್ತು ಮೆಗ್ನಿಶಿಯಂ ಹುಳಿ ಮೊಸರಿನಲ್ಲಿ ಇರುವುದರಿಂದ ಬಿಪಿ ನಿಯಂತ್ರಣವಾಗುತ್ತದೆ. ಜೊತೆಗೆ ಇದು ಹೃದಯದ ಆರೋಗ್ಯಕ್ಕೆ ಉತ್ತಮ.

ಇದನ್ನೂ ಓದಿ: ಚಿಯಾ ಬೀಜಗಳಿಂದ ಆರೋಗ್ಯಕ್ಕೇನು ಪ್ರಯೋಜನ? ನಿಮ್ಮ ಡಯಟ್​ನಲ್ಲಿ ಹೀಗೆ ಸೇರಿಸಿ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.