ETV Bharat / sukhibhava

ಚಿಯಾ ಬೀಜಗಳಿಂದ ಆರೋಗ್ಯಕ್ಕೇನು ಪ್ರಯೋಜನ? ನಿಮ್ಮ ಡಯಟ್​ನಲ್ಲಿ ಹೀಗೆ ಸೇರಿಸಿ..

author img

By

Published : Mar 29, 2023, 9:17 AM IST

ಚಿಯಾ ಬೀಜಗಳನ್ನು ಸೇವಿಸುವುದರಿಂದ ಅನೇಕ ಆರೋಗ್ಯ ಸಮಸ್ಯೆ ನಿವಾರಣೆ ಸಾಧ್ಯವಿದೆ.

heres-how-to-include-chia-seeds-in-your-diet-with-healthy-benefits
heres-how-to-include-chia-seeds-in-your-diet-with-healthy-benefits

ಚಿಯಾ ಬೀಜಗಳು ಸಮೃದ್ಧ ಪೋಷಕಾಂಶಗಳಿಂದ ಕೂಡಿದ್ದು, ಅನೇಕ ಔಷಧೀಯ ಲಾಭಗಳನ್ನು ಹೊಂದಿವೆ. ಫೈಬರ್​ ಮತ್ತು ಒಮೆಗಾ-3 ಸಮೃದ್ಧವಾಗಿದ್ದು, ಹೃದಯ ಮತ್ತು ಜೀರ್ಣಕ್ರಿಯೆಗೆ ಹೆಚ್ಚು ಸಹಾಯಕ. ಇದರಲ್ಲಿ ಅಲ್ಪಾ ಲಿಪೊಇಕ್​, ಒಮೆಗಾ -3 ಫ್ಯಾಟಿ ಆಸಿಡ್​ ಇದೆ. ಇದು ಸ್ತನ ಮತ್ತು ಗರ್ಭಕಂಠ ಕ್ಯಾನ್ಸರ್​ ತಡೆಯುವಲ್ಲಿಯೂ ಪ್ರಮುಖವಾಗಿದೆ. ಆ್ಯಂಟಿ ಆಕ್ಸಿಡೆಂಟ್​ ಕೂಡ ಹೇರಳವಾಗಿದೆ.

ನಿಯಮಿತವಾಗಿ ಚಿಯಾ ಬೀಜಗಳನ್ನು ಸೇವಿಸುವುದರಿಂದ ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್​ ನಿರ್ವಹಣೆಯಾಗುತ್ತದೆ. ನಾರಿನಂಶ, ಪ್ರೋಟಿನ್, ಕ್ಯಾಲ್ಸಿಯಂ ಹಾಗೂ ಆರೋಗ್ಯಕರ ಇತರೆ ಕೊಬ್ಬುಗಳನ್ನು ಈ ಬೀಜಗಳು ಹೊಂದಿವೆ. ಹೀಗಾಗಿ ಡಯಟ್​ನಲ್ಲಿ ಅಳವಡಿಸಿಕೊಳ್ಳಬಹುದು. ತೂಕ ನಿರ್ವಹಣೆಗೂ ಕೂಡ ಚಿಯಾ ಬೀಜಗಳು ಉಪಯುಕ್ತ. ನಿಮಗೆ ಈ ಬೀಜಗಳನ್ನು ಯಾವ ರೀತಿ ಡಯಟ್​ನಲ್ಲಿ ಬಳಕೆ ಮಾಡಬೇಕು ಎಂಬುದು ತಿಳಿಯದಿದ್ದರೆ, ಈ ಆಹಾರಗಳೊಂದಿಗೆ ಅವುಗಳನ್ನು ಬೆರೆಸಿ ಸೇವಿಸಬಹುದು. ಇದರಿಂದ ಆಹಾರ ಕೂಡ ಸ್ವಾದಿಷ್ಟವಾಗುತ್ತದೆ.

ಚಿಯಾ ಬೀಜದ ಪುಡ್ಡಿಂಗ್
ಚಿಯಾ ಬೀಜದ ಪುಡ್ಡಿಂಗ್

ಚಿಯಾ ಬೀಜದ ಪುಡ್ಡಿಂಗ್​​: ಇದು ಪುಡ್ಡಿಂಗ್ ಅ​ನ್ನು ಮತ್ತಷ್ಟು ಗಟ್ಟಿಯಾಗಿ ಮಾಡುತ್ತದೆ. ನಿಮಗೆ ಚಿಯಾ ಬೀಜಗಳು ಬಾಯಿಗೆ ಸಿಗುತ್ತವೆ ಎಂದರೆ ಅದನ್ನು ಪುಡಿ ಮಾಡಿ ಕೂಡ ಬಳಕೆ ಮಾಡಬಹುದಾಗಿದೆ. ಇದರಿಂದ ಕ್ರೀಂ​ ರೀತಿಯ ಅನುಭವ ನೀಡುತ್ತದೆ.

ಚಿಯಾ ಬೀಜದ ಓಟ್​ ಮೀಲ್​
ಚಿಯಾ ಬೀಜದ ಓಟ್​ ಮೀಲ್​

ಚಿಯಾ ಬೀಜದ ಓಟ್​ ಮೀಲ್​: ಓಟ್ಸ್​ ಜೊತೆಗೆ ಚಿಯಾ ಬೀಜಗಳನ್ನು ಹಾಕಿ ಅದಕ್ಕೆ ಹಾಲು ಅಥವಾ ತೆಂಗಿನ ಹಾಲು ಬಳಕೆ ಮಾಡುವುದರಿಂದಲೂ ಪೋಷಕಾಂಶಗಳು ಲಭ್ಯವಾಗುತ್ತದೆ.

ಚಿಯಾ ಬೀಜಗಳು ಯೋಗರ್ಟ್
ಚಿಯಾ ಬೀಜಗಳು ಯೋಗರ್ಟ್

ಚಿಯಾ ಬೀಜಗಳು ಯೋಗರ್ಟ್​​: ಹಣ್ಣುಗಳ ಮಿಶ್ರಣದ ಯೋಗರ್ಟ್​​ ಮೇಲೆ ಚಿಯಾ ಬೀಜಗಳನ್ನು ಹಾಕುವುದರಿಂದ ರುಚಿ ಜೊತೆಗೆ ತಿನ್ನಲು ಪ್ರೇರೇಪಣೆ ನೀಡುತ್ತದೆ. ಇದಕ್ಕೆ ಬೇಕಾದಲ್ಲಿ ನೆನೆಸಿದ ಚಿಯಾ ಬೀಜಗಳನ್ನು ಬಳಸಬಹುದು.

ಚಿಯಾ ಬೀಜದ ಪ್ಯಾನ್​ ಕೇಕ್
ಚಿಯಾ ಬೀಜದ ಪ್ಯಾನ್​ ಕೇಕ್

ಚಿಯಾ ಬೀಜದ ಪ್ಯಾನ್​ ಕೇಕ್​: ಮಕ್ಕಳ ಜೊತೆ ದೊಡ್ಡವರ ಬಾಯಲ್ಲಿ ನೀರು ತರಿಸುತ್ತದೆ ಈ ಪ್ಯಾನ್​ ಕೇಕ್​ಗಳು. ರುಚಿಕರ ಪ್ಯಾನ್​ ಕೇಕ್​ ಅನ್ನು ಮತ್ತಷ್ಟು ಮೃದು ಮತ್ತು ಸ್ವಾದಿಷ್ಟಭರಿತ ಮಾಡಲು ಪ್ಯಾನ್​ಕೇಕ್​ ಮಿಕ್ಸ್​ಗೆ ಚಿಯಾ ಬೀಜ ಬಳಸಿ.

ಚಿಯಾ ಬೀಜದ ಸ್ಮೂಥಿ
ಚಿಯಾ ಬೀಜದ ಸ್ಮೂಥಿ

ಚಿಯಾ ಬೀಜದ ಸ್ಮೂಥಿ: ಸ್ಮೂಥಿಗಳ ಪೋಷಕಾಂಶಗಳನ್ನು ಹೆಚ್ಚಿಸಲು ಚಿಯಾ ಬೀಜಗಳನ್ನು ಉಪಯೋಗಿಸಬಹುದು. ಸೇಬು, ಬಾಳೆಹಣ್ಣು ಅಥವಾ ಮಾವಿನ ಹಣ್ಣು ಹೀಗೆ ಯಾವುದೇ ಸ್ಮೂಥಿಗಳಾದರೂ ಅದಕ್ಕೆ ಚಿಯಾ ಬೀಜಗಳನ್ನು ಸೇರಿಸಬಹುದು.

ಚಿಯಾ ಬೀಜದ ನಿಂಬೆ ಪಾನಕ
ಚಿಯಾ ಬೀಜದ ನಿಂಬೆ ಪಾನಕ

ಚಿಯಾ ಬೀಜದ ನಿಂಬೆ ಪಾನಕ: ಬೇಸಿಗೆ ಜೊತೆ ಎಲ್ಲಾ ಋತುಮಾನಗಳಲ್ಲೂ ನಿಂಬೆ ಪಾನಕಕ್ಕೆ ಬೇಡಿಕೆ ಹೆಚ್ಚು. ಪಾನಕಕ್ಕೆ ಚಿಯಾ ಬೀಜಗಳನ್ನು ಬೆರೆಸುವುದರಿಂದ ಉತ್ತಮ ರುಚಿ ಸಿಗುತ್ತದೆ. ದೇಹಕ್ಕೆ ಬೇಕಾದ ನೀರಿನಾಂಶವೂ ಲಭ್ಯ.

ಇದನ್ನೂ ಓದಿ: ಬೇಸಿಗೆಯ ದಾಹ ತಣಿಸುತ್ತವೆ ಈ ಸ್ಮೂಥಿಗಳು: ಒಮ್ಮೆ ಟ್ರೈ ಮಾಡಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.