ETV Bharat / sukhibhava

ಗರ್ಭಕಂಠದ ಕ್ಯಾನ್ಸರ್: ಯುವತಿಯರು, ಮಹಿಳೆಯರು ವಹಿಸಬೇಕಾದ ಮುನ್ನೆಚ್ಚರಿಕಾ ಕ್ರಮಗಳೇನು?

author img

By

Published : Dec 24, 2022, 2:26 PM IST

cervical cancer vaccination
ಗರ್ಭಕಂಠದ ಕ್ಯಾನ್ಸರ್

ಗರ್ಭಕಂಠದ ಕ್ಯಾನ್ಸರ್​ಗೆ ವ್ಯಾಕ್ಸಿನೇಷನ್ ಲಭ್ಯವಿದ್ದು, ಈ ಬಗ್ಗೆ ಯುವತಿಯರು ಮತ್ತು ಮಹಿಳೆಯರಲ್ಲಿ ಮಾಹಿತಿಯ ಕೊರತೆ ಇದೆ.

ಇಂದಿನ ಯುವ ಪೀಳಿಗೆಯು ಬಹು ಸಂಬಂಧಗಳಿಂದ ಹೆಚ್ಚು ಪ್ರಭಾವಿತವಾಗಿದೆ ಮತ್ತು ಹೆಚ್ಚು ಸಂಬಂಧಗಳಲ್ಲಿ ವಾಸಿಸುತ್ತಿದ್ದಾರೆ. ಅಂದರೆ ಚಿಕ್ಕ ವಯಸ್ಸಿನಲ್ಲೇ ಲೈಂಗಿಕವಾಗಿ ತೊಡಗಿಕೊಳ್ಳುತ್ತಾರೆ. ಅದು ಅಲ್ಲದೇ ಬಹು ಸಂಬಂಧ ಹೊಂದುವುದರಿಂದ ಗರ್ಭಕಂಠದ ಕ್ಯಾನ್ಸರ್ ಮತ್ತು ಹೆಚ್​ಐವಿಗೆ ಒಳಗಾಗುವ ಸಾಧ್ಯತೆ ಇದೆ. ಇದಕ್ಕೆ ಮುನ್ನೆಚ್ಚರಿಕಾ ಕ್ರಮವಾಗಿ ಲಸಿಕೆಗಳಿದ್ದು, ಈ ಬಗ್ಗೆ ಮಹಿಳೆಯರಿಗೆ ಮತ್ತು ಯುವತಿಯರಿಗೆ ಸರಿಯಾದ ಮಾಹಿಯ ಕೊರೆತೆ ಇದೆ.

ಹೆಚ್ಚು ಜನರೊಂದಿಗೆ ಲೈಂಗಿಕ ಸಂಪರ್ಕದಿಂದ ಗರ್ಭಕಂಠದ ಕ್ಯಾನ್ಸರ್​ ಸಾಧ್ಯತೆ: ಪ್ರಸ್ತುತ ಹುಡುಗಿಯರು ಮದುವೆಗೆ ಮುಂಚೆಯೇ ಲೈಂಗಿಕವಾಗಿ ಸಕ್ರಿಯರಾಗುವುದು ತುಂಬಾ ಸಾಮಾನ್ಯವಾಗಿದೆ. ಅಂತಹ ಪರಿಸ್ಥಿತಿಯಲ್ಲಿ ಯುವತಿಯರು ಮಾಡುವ ನಿರ್ಲಕ್ಷ್ಯ ಮತ್ತು ತಪ್ಪುಗಳು ಮುಂದಿನ ಜೀವನದಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸ ಬೇಕಾಗುತ್ತದೆ ಎಂದು ಡಾ. ನೇಹಾ ಶರ್ಮಾ ಹೇಳುತ್ತಾರೆ.

ಮೊದಲ ಬಾರಿ ಲೈಂಗಿಕವಾಗಿ ತೊಂಡಗಿಕೊಳ್ಳುವುದು ಮತ್ತು ಬೇರೆ ಬೇರೆಯವರೊಂದಿಗೆ ಲೈಂಗಿಕವಾಗಿ ಸಕ್ರೀಯವಾಗಿರುವುದರಿಂದ ಗರ್ಭಕಂಠದ ಕ್ಯಾನ್ಸರ್ ಮತ್ತು ಹೆಚ್​ಐವಿಯ ಬರುವ ಸಾಧ್ಯತೆ ಹೆಚ್ಚಿದೆ. ಮೊದಲ ಬಾರಿಗೆ ಲೈಂಗಿಕವಾಗಿ ತೊಡಗಿಕೊಳ್ಳುವ ಮುನ್ನ ಲಸಿಕೆ ಹಾಕಿಸಿಕೊಳ್ಳಬಹುದು ಇಲ್ಲವೇ ನಂತರವೂ ಸಾಧ್ಯತೆಗಳಿವೆ. ಈ ಲಸಿಕೆ ಬಗ್ಗೆ ಯುವತಿಯರು ಮತ್ತು ಮಹಿಳೆಯರಲ್ಲಿ ಜಾಗೃತಿ ಕಡಿಮೆ ಇದೆ ಎಂದು ಅವರು ಹೇಳಿದರು.

ಲಸಿಕೆ ಪಡೆಯುವ ವಿಧಾನ: ಗರ್ಭಕಂಠದ ಕ್ಯಾನ್ಸರ್​ನ್ನು ಲಸಿಕೆಯಿಂದ ನೇರವಾಗಿ ತಡೆಗಟ್ಟಬಹುದಾಗಿದೆ. ಈ ರೋಗವನ್ನು ತಪ್ಪಿಸಲು ಹೆಚ್​ಪಿವಿ(HPV) ಲಸಿಕೆಯನ್ನು ಮಾಡಲಾಗುತ್ತದೆ. ಈ ಲಸಿಕೆಯು ಗರ್ಭಕಂಠದ ಕ್ಯಾನ್ಸರ್ ಅಪಾಯದಿಂದ ಹುಡುಗಿಯರನ್ನು ರಕ್ಷಿಸುತ್ತದೆ ಎಂದು ಡಾ.ನೇಹಾ ಸಲಹೆ ನೀಡಿದ್ದಾರೆ.

7.5 ಪ್ರತಿಶತ ಮಹಿಳೆಯರಲ್ಲಿ ಗರ್ಭಕಂಠದ ಕ್ಯಾನ್ಸರ್: ಮೊದಲು ಕಡಿಮೆ ಆದಾಯ ಮತ್ತು ಕಡಿಮೆ ಸಾಮಾಜಿಕ ಸ್ಥಾನಮಾನದಲ್ಲಿ ವಾಸಿಸುವ ಮಹಿಳೆಯರು ಈ ಸಮಸ್ಯೆಗೆ ಹೆಚ್ಚು ಬಾಧಿತರಾಗುತ್ತಿದ್ದಾರೆ. ಈಗ ಎಲ್ಲ ವರ್ಗದ ಮಹಿಳೆಯರಲ್ಲಿ ಈ ಕ್ಯಾನ್ಸರ್ ಕಂಡು ಬರುತ್ತಿದೆ. ಅಂಕಿ - ಅಂಶಗಳ ಬಗ್ಗೆ ನೋಡುವಾಗ 7.5 ಪ್ರತಿಶತ ಮಹಿಳೆಯರಲ್ಲಿ ಕಂಡುಬರುತ್ತಿದೆ.

ಲಸಿಕೆಯ ವಿಧಾನ: 9ನೇ ವಯಸ್ಸಿನಿಂದ ಲಸಿಕೆ ಹಾಕುವುದು ಆರಂಭವಾಗುತ್ತದೆ. 9 ವರ್ಷದಿಂದ 14 ವರ್ಷದೊಳಗಿನ ಬಾಲಕಿಯರಿಗೆ ಎರಡು ಡೋಸ್ ಲಸಿಕೆ ನೀಡಲಾಗುತ್ತದೆ. ಈ ವಯಸ್ಸಿನಲ್ಲಿ ಆಗದಿದ್ದಲ್ಲಿ 15 ರಿಂದ 26 ವರ್ಷ ವಯಸ್ಸಿನಲ್ಲೂ ಲಸಿಕೆ ಹಾಕಬಹುದು, ಆದರೆ ಮೂರು ಡೋಸ್​ ನೀಡಬೇಕಾಗುತ್ತದೆ.

15 ರಿಂದ 26 ವಯಸ್ಸಿನವರಿಗೆ 0-1-6 ಅಥವಾ 0-2-6 ಸೂತ್ರದಲ್ಲಿ ಲಸಿಕೆ ನೀಡಲಾಗುತ್ತದೆ. 1ನೇ ಸೂತ್ರದಂತೆ ಮೊದಲ ಡೋಸ್ ನಂತರ, ಎರಡನೇ ಡೋಸ್ ಅನ್ನು 1 ತಿಂಗಳ ಮಧ್ಯಂತರದಲ್ಲಿ ಮತ್ತು ಮೂರನೇ ಡೋಸ್ ಅನ್ನು 6 ತಿಂಗಳ ಮಧ್ಯಂತರದಲ್ಲಿ ನೀಡಲಾಗುತ್ತದೆ. ಎರಡನೇ ಸೂತ್ರದಂತೆ ಮೊದಲ ಡೋಸ್ ನಂತರ 2 ತಿಂಗಳ ಮಧ್ಯಂತರದಲ್ಲಿ ಮತ್ತು ನಂತರ 6 ತಿಂಗಳ ಮಧ್ಯಂತರದಲ್ಲಿ ಲಸಿಕೆ ನೀಡಲಾಗುತ್ತದೆ. ಈ ಡೋಸ್ ಪ್ರಕ್ರಿಯೆಯನ್ನು ಪೂರ್ಣಗೊಳಿಸುವ ಮೂಲಕ ಗರ್ಭಕಂಠದ ಕ್ಯಾನ್ಸರ್ ಅನ್ನು ತಪ್ಪಿಸಬಹುದು.

ಲೈಂಗಿಕತೆ ನಂತರ ಲಸಿಕೆ ವಿಧಾನ: ಲೈಂಗಿಕತೆಗೆ ಒಳಗಾದ ನಂತರ ಲಸಿಕೆ ಪಡೆಯುವುದಿದ್ದರೆ HPV 16 ಮತ್ತು 18 ವೈರಸ್‌ ಬಗ್ಗೆ ಪರೀಕ್ಷಿಸಿಕೊಳ್ಳಬೇಕು. ವೈರಸ್​ ಹೊಂದಿಲ್ಲದಿದ್ದರೆ ಮಾತ್ರ ವ್ಯಾಕ್ಸಿನೇಷನ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದು. ಆದರೆ HPV 16 ಮತ್ತು 18 ಸೋಂಕು ಕಂಡುಬರುವ ಮಹಿಳೆಯರು ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯಬೇಕು ಎಂದು ಮಹಾಮಾನ ಮಾಳವೀಯ ಕ್ಯಾನ್ಸರ್ ಸಂಶೋಧನಾ ಕೇಂದ್ರದ ಡಾ. ರುಚಿ ಪಾಠಕ್ ಸಲಹೆ ನೀಡಿದ್ದಾರೆ.

30 ವರ್ಷ ಮೇಲ್ಪಟ್ಟ ಮಹಿಳೆಯರು ತಪಾಸಣೆಗೆ ಒಳಗಾಗುವುದು ಉತ್ತಮ: ಮಹಿಳೆಯರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು 30 ವರ್ಷ ಮೇಲ್ಪಟ್ಟ ಮಹಿಳೆಯರಿಗೆ ಆರೋಗ್ಯ ಇಲಾಖೆಯಿಂದ ಮಾರ್ಗಸೂಚಿಯಂತೆ ತಪಾಸಣೆ ಮಾಡುವುದು ಉತ್ತಮ. ಎಲ್ಲಾ ಮಹಿಳೆಯರು 3 ರಿಂದ 5 ವರ್ಷಗಳ ಅಂತರದಲ್ಲಿ ಸ್ಕ್ರೀನಿಂಗ್ ಮಾಡಿಸುವುದರಿಂದ ಸೋಂಕಿನ ಸ್ಥಿತಿ ಏನಾಗಿದೆ ಎಂಬುದು ಸ್ಪಷ್ಟವಾಗುತ್ತದೆ. ವರ್ಷಗಳ ಅಂತರದಲ್ಲಿ ಸ್ಕ್ರೀನಿಂಗ್ ಮಾಡುವುದರಿಂದ ಈ ನಡುವೆ ಸೋಂಕಿಗೆ ಒಳಗಾದರೂ ಕಂಡು ಬರುತ್ತದೆ. ಪ್ರಥಮ ಹಂತದಲ್ಲೆ ಚಿಕಿತ್ಸೆ ನೀಡಲು ಸಹಕಾರಿಯಾಗಲಿದೆ ಎಂದು ತಿಳಿಸಿದರು.

ಇದನ್ನೂ ಓದಿ: ಕೋವಿಶೀಲ್ಡ್ ಲಸಿಕೆ ಪಡೆದವರಿಗೆ ಕಾರ್ಬೆವಾಕ್ಸ್ ಬೂಸ್ಟರ್ ಪರಿಣಾಮಕಾರಿ: ಎಐಜಿ ಆಸ್ಪತ್ರೆಗಳ ಅಧ್ಯಯನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.