ETV Bharat / bharat

ಕೋವಿಶೀಲ್ಡ್ ಲಸಿಕೆ ಪಡೆದವರಿಗೆ ಕಾರ್ಬೆವಾಕ್ಸ್ ಬೂಸ್ಟರ್ ಪರಿಣಾಮಕಾರಿ: ಎಐಜಿ ಆಸ್ಪತ್ರೆಗಳ ಅಧ್ಯಯನ

author img

By

Published : Dec 24, 2022, 9:34 AM IST

ಒಮಿಕ್ರಾನ್​ ರೂಪಾಂತರಿಗಳ ವಿರುದ್ಧ ಹೋರಾಡಲು ಕೋವಿಶೀಲ್ಡ್​ ಲಸಿಕೆ ಪಡೆದವರಿಗೆ ಬೂಸ್ಟರ್​ ಡೋಸ್​ ಆಗಿ ಕಾರ್ಬೆವ್ಯಾಕ್ಸ್​ ನೀಡಿದಲ್ಲಿ ಹೆಚ್ಚಿನ ರೋಗ ನಿರೋಧಕ ಶಕ್ತಿ ವೃದ್ಧಿಯಾಗುತ್ತದೆ ಎಂಬುದನ್ನು ಎಐಜಿ ಆಸ್ಪತ್ರೆಗಳ ಸಮೂಹದ ಅಧ್ಯಯನ ತಿಳಿಸಿದೆ.

corbevax-as-booster
ಕೋವಿಶೀಲ್ಡ್ ಲಸಿಕೆ ಪಡೆದವರಿಗೆ ಕಾರ್ಬೆವಾಕ್ಸ್ ಬೂಸ್ಟರ್

ಹೈದರಾಬಾದ್: ಕೊರೊನಾ ಒಮಿಕ್ರಾನ್​ ರೂಪಾಂತರವಾದ BF.7 ವೈರಸ್​ ಅನ್ನು ಎದುರಿಸಲು ಎಐಜಿ ಆಸ್ಪತ್ರೆಗಳ ಸಂಶೋಧಕರು ಹೊಸದೊಂದು ವಿಧಾನ ಕಂಡುಕೊಂಡಿದ್ದಾರೆ. ಕೋವಿಶೀಲ್ಡ್​ ಲಸಿಕೆ ಪಡೆದವರು ಬೂಸ್ಟರ್​ ಡೋಸ್​ ಆಗಿ ಕಾರ್ಬೆವಾಕ್ಸ್​ ಪಡೆದುಕೊಂಡರೆ ವೈರಸ್​ ಅನ್ನು ಪರಿಣಾಮಕಾರಿ ಎದುರಿಸಬಹುದು. ಲಸಿಕೆ ಬದಲಿಯಿಂದ ಮನುಷ್ಯನಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಎಂದು ಅಧ್ಯಯನ ಹೇಳಿದೆ.

2 ಡೋಸ್​ ಕೋವಿಶೀಲ್ಡ್​ ಪಡೆದ 250 ಆರೋಗ್ಯ ಕಾರ್ಯಕರ್ತರ ಮೇಲೆ ನಡೆಸಿ ಈ ಪ್ರಯೋಗ ಫಲ ನೀಡಿದ್ದು, 6 ತಿಂಗಳಲ್ಲಿ ಅವರು ಹೆಚ್ಚಿನ ರೋಗನಿರ್ಣಯ ಶಕ್ತಿಯನ್ನು ಹೊಂದಿದ್ದಾರೆ. ಲಸಿಕೆ ವೈವಿಧ್ಯತೆಯು ಪರಿಣಾಮಕಾರಿಯಾಗಿದೆ. ಅಧ್ಯಯನದಲ್ಲಿ ಒಳಗಾದವರು ಉತ್ತಮ ಆರೋಗ್ಯ ವೃದ್ಧಿ ತೋರಿಸಿದ್ದಾರೆ. ಮಿಶ್ರಿತ ಲಸಿಕೆಗಳು ಯಾವುದೇ ವ್ಯತಿರಿಕ್ತ ಪರಿಣಾಮ ಬೀರಿಲ್ಲ ಎಂದು ಅಧ್ಯಯನದ ಮುಂದಾಳು, ಎಐಜಿ ಆಸ್ಪತ್ರೆಗಳ ಅಧ್ಯಕ್ಷ ಡಾ.ಡಿ ನಾಗೇಶ್ವರ್​ ರೆಡ್ಡಿ ಮತ್ತು ತಂಡ ಹೇಳಿದೆ.

ಇದಲ್ಲದೇ, ಕೋವಿಶೀಲ್ಡ್​ ಪಡೆದವರು ಕಾರ್ಬೊವ್ಯಾಕ್ಸ್​ ಲಸಿಕೆ ತೆಗೆದುಕೊಳ್ಳುವುದರಿಂದ ಅವರ ದೇಹದಲ್ಲಿ ಟಿ ಕೋಶಗಳು 30 ದಿನದಲ್ಲಿ ಬಹುವಾಗಿ ವೃದ್ಧಿಗೊಳ್ಳುತ್ತವೆ. ಲಸಿಕೆಯ ಪ್ರಭಾವ 90 ದಿನಕ್ಕೂ ಅಧಿಕ ಅವಧಿ ರಕ್ಷಣೆ ನೀಡುತ್ತದೆ. ಇದು ಒಮಿಕ್ರಾನ್​ ಮತ್ತು ಅದರ ರೂಪಾಂತರಿ ವೈರಸ್​ಗಳಿಂದ ಹೆಚ್ಚಿನ ರಕ್ಷಣೆ ನೀಡುತ್ತದೆ ಎಂದು ಅಧ್ಯಯನ ಹೇಳಿದೆ.

ಓದಿ: ಭಾರತ್ ಬಯೋಟೆಕ್ ಅಭಿವೃದ್ಧಿಪಡಿಸಿದ ಮೂಗಿನ ಲಸಿಕೆಗೆ ಕೇಂದ್ರ ಅನುಮತಿ.. ಶುಕ್ರವಾರ ಸಂಜೆಯಿಂದಲೇ ಲಭ್ಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.