ETV Bharat / sukhibhava

ಭಾರತದಲ್ಲಿ ಹೆಚ್ಚುತ್ತಿದೆ ಗರ್ಭಕಂಠದ ಕ್ಯಾನ್ಸರ್​​: ಕಾರಣವೇನು? ಚಿಕಿತ್ಸೆಯ ವಿವರ

author img

By ETV Bharat Karnataka Team

Published : Jan 16, 2024, 10:56 AM IST

cervical cancer are significantly rising in India
cervical cancer are significantly rising in India

ಮಹಿಳೆಯರನ್ನು ಹೆಚ್ಚು ಬಾಧಿಸುವ ಕ್ಯಾನ್ಸರ್​ಗಳಲ್ಲಿ ಗರ್ಭಕಂಠದ ಕ್ಯಾನ್ಸರ್​ ಒಂದು. ಈ ಕುರಿತು ಉಪಯುಕ್ತ ಮಾಹಿತಿ ಇಲ್ಲಿದೆ.

ಭಾರತದಲ್ಲಿ ಗರ್ಭಕಂಠದ ಕ್ಯಾನ್ಸರ್​ ತಡೆಗಟ್ಟುವ ಚಿಕಿತ್ಸೆಗಳಿದ್ದರೂ ಪ್ರಕರಣಗಳು ಗಣನೀಯ ಪ್ರಮಾಣದಲ್ಲಿ ಹೆಚ್ಚುತ್ತಿವೆ. ಈ ನಿಟ್ಟಿನಲ್ಲಿ ಸೂಕ್ತ ಲಸಿಕೆ, ಅರಿವು ಹಾಗೂ ಆರಂಭಿಕ ಪತ್ತೆ ಕಾರ್ಯಗಳ ಅವಶ್ಯಕತೆಯಿದೆ ಎಂದು ವೈದ್ಯರು ತಿಳಿಸಿದ್ದಾರೆ. ದೇಶದಲ್ಲಿ ಐವರಲ್ಲಿ ಓರ್ವ ವ್ಯಕ್ತಿ ಕ್ಯಾನ್ಸರ್​​ ಹೊಂದಿದ್ದಾರೆ ಅಥವಾ ಇದರ ಪ್ರಮಾಣ ಶೇ.21ರಷ್ಟಿದೆ ಎಂದು ಇತ್ತೀಚಿಗೆ ಬಿಡುಗಡೆಯಾದ ಲ್ಯಾನ್ಸೆಟ್​ ಗ್ಲೋಬಲ್​ ಹೆಲ್ತ್​ ವರದಿ ಹೇಳುತ್ತದೆ.

ಗರ್ಭಕಂಠದ ಕ್ಯಾನ್ಸರ್​ ಪ್ಯಾಪಿಕೋಮವೈರಸ್​ (ಎಚ್​ಪಿವಿ) ಎಂಬ ನಿರ್ದಿಷ್ಟ ತಳಿಯ ವೈರಸ್​ನಿಂದ ಶೇ.95ರಷ್ಟು ಪ್ರಕರಣಗಳಲ್ಲಿ ಕಂಡುಬರುತ್ತದೆ. ಇದು ಎಚ್​ಪಿವಿ ಲೈಂಗಿಕ ಚಟುವಟಿಕೆಯ ಮೂಲಕ ಹರಡುತ್ತದೆ. ಆದಾಗ್ಯೂ ಒಂದು ಸಣ್ಣ ಪ್ರಮಾಣದ ಶೇಖಡಾವಾರು ಮಾತ್ರ ಈ ಗರ್ಭಕಂಠದ ಕ್ಯಾನ್ಸರ್​ ಅನ್ನು ಅಭಿವೃದ್ಧಿಪಡಿಸುತ್ತದೆ.

ಗರ್ಭಕಂಠದ ಕ್ಯಾನ್ಸರ್​​ ದೇಹದ ಕೋಶದಲ್ಲಿ ನಿಯಂತ್ರಣವಿಲ್ಲದೆ ಬೆಳೆಯುತ್ತದೆ. ಪ್ರಾಥಮಿಕವಾಗಿ ಇದು ವ್ಯಕ್ತಿಯ ಗರ್ಭಕಂಠದ ಮೇಲೆ ಪರಿಣಾಮ ಬೀರುತ್ತದೆ. ಆರಂಭಿಕ ಪತ್ತೆಯಲ್ಲಿ ಲಸಿಕೆ ಮೂಲಕ ತಡೆಯಬಹುದು ಮತ್ತು ಚಿಕಿತ್ಸೆ ನೀಡಬಹುದು. ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ಈ ಬಗೆಯ ಕ್ಯಾನ್ಸರ್​ ದೊಡ್ಡ​ ಸವಾಲು ಎಂದು ಪುಣೆಯ ರುಬಿ ಹಾಲ್​ ಕ್ಲಿನಿಕ್​​ನ ಸ್ತ್ರೀರೋಗ ತಜ್ಞರಾದ ಡಾ.ಮನೀಶ್​ ಮಚಾವೆ ತಿಳಿಸಿದರು.

ಅರಿವಿನ ಕೊರತೆ, ಲಸಿಕೆ ಅಪೂರ್ಣತೆ, ಪತ್ತೆಯಲ್ಲಿ ದೋಷ, ವೆಚ್ಚ, ಗುಣಮಟ್ಟದ ಚಿಕಿತ್ಸೆ, ಚಿಕ್ಕವಯಸ್ಸಿನಲ್ಲೇ ಮದುವೆ, ಅನೇಕ ಗರ್ಭಧಾರಣೆಗಳು ಭಾರತದಲ್ಲಿ ಗರ್ಭಕಂಠದ ಕ್ಯಾನ್ಸರ್​​ ಪ್ರಕರಣಗಳ ಏರಿಕೆಗೆ ಕಾರಣವಾಗಿವೆ.

ಚಿಕಿತ್ಸೆ: ಮಹಿಳೆಯರಿಗೆ ತಮ್ಮ 9ನೇ ವಯಸ್ಸಿನಿಂದ 22ರವರೆಗೆ ಸರಿಯಾಗಿ ಚಿಕಿತ್ಸೆ ನೀಡಿದ್ದಲ್ಲಿ ಈ ಎಚ್​ಪಿವಿ ಸೋಂಕಿನಿಂದ ತಡೆಯಬಹುದು. ಚಿಕ್ಕ ವಯಸ್ಸಿನಲ್ಲೇ ಇದರ ಪತ್ತೆಯಿಂದ ಸಂಪೂರ್ಣವಾಗಿ​​ ಗುಣಪಡಿಸಬಹುದು ಎಂದು ಸರ್.ಎಚ್.​ಎನ್.ರಿಲಯನ್ಸ್​​ ಫೌಂಡೇಷನ್​ ಹಾಸ್ಪಿಟಲ್​ನ ಕನ್ಸಲ್ಟೆಂಟ್​ ಮೆಡಿಕಲ್​ ಆಂಕೊಲಜಿ ವಿಭಾಗದ ಡಾ.ಪ್ರೀತಂ ಕಟಾರಿಯಾ ತಿಳಿಸಿದ್ದಾರೆ.

ಪ್ಯಾಪ್ ಸ್ಮೀಯರ್ ಪರೀಕ್ಷೆಯು ಎಚ್​ಪಿವಿ ಸೋಂಕು ಪತ್ತೆ ಮಾಡುತ್ತದೆ. ಮಹಿಳೆಯರು ಹೆಚ್ಚಿನ ರಕ್ತಸ್ರಾವ, ಶ್ರೋಣಿಯ ನೋವುಗಳ ಬಗ್ಗೆ ಗಮನಹರಿಸಬೇಕು ಎಂದು ಇದೇ ವೇಳೆ ಅವರು ಸಲಹೆ ನೀಡಿದ್ದಾರೆ. ನಿರಂತರ ರಕ್ತಸ್ರಾವ, ಮೆನೋಪಸ್​ ಬಳಿಕ ಗರ್ಭಕಂಠದಲ್ಲಿ ಬೆಳೆಯುವ ಅಸಮಾನ್ಯ ಕೋಶ, ದೀರ್ಘದ ಋತುಚಕ್ರದ ರಸ್ತಸ್ರಾವ ಗರ್ಭಕಂಠ ಕ್ಯಾನ್ಸರ್​​ ಲಕ್ಷಣವಾಗಿದೆ. ಗರ್ಭಕಂಠ ಕ್ಯಾನ್ಸರ್​​ ಬೆನ್ನುಮೂಳೆಗೆ ಹರಡಬಹುದಾಗಿದ್ದು, ಇದು ಭಾರಿ ತೊಂದರೆಗೆ ಕಾರಣವಾಗಬಹುದು.

ಇದರ​ ತಡೆಗೆ ಯುವತಿಯರು 21ನೇ ವಯಸ್ಸಿನಲ್ಲಿ ಪ್ಯಾಪ್ ಸ್ಮೀಯರ್ ಪರೀಕ್ಷೆಗೆ ಒಳಗಾಗಬಹುದು. ಅಲ್ಲದೆ 9ರಿಂದ 12 ವರ್ಷದವರೆಗೆ ಲಸಿಕೆ ಪಡೆಯಬಹುದಾಗಿದೆ. ಒಂದು ವೇಳೆ ಈ ಅವಧಿಯಲ್ಲಿ ಲಸಿಕೆ ಪಡೆಯದವರು ತಮ್ಮ 26ನೇ ವಯಸ್ಸಿನಲ್ಲಿ ಪಡೆಯಬಹುದು ಎಂದು ವೈದ್ಯರು ಸಲಹೆ ನೀಡಿದ್ದಾರೆ.(ಐಎಎನ್​ಎಸ್​)

ಇದನ್ನೂ ಓದಿ: ದೇಶದಲ್ಲಿ 5 ವರ್ಷದ ಸ್ತನ ಕ್ಯಾನ್ಸರ್​​ ಉಳಿಯುವಿಕೆ ದರ ಶೇ.66: ಐಸಿಎಂಆರ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.