ETV Bharat / sports

IPL: ಪಂಜಾಬ್​ ವಿರುದ್ಧದ ಔಪಚಾರಿಕ ಪಂದ್ಯದಲ್ಲೂ ಎಡವಿದ ರಾಜಸ್ಥಾನ್​, ಸತತ 4ನೇ ಸೋಲು - PBKS Beat RR

author img

By PTI

Published : May 16, 2024, 7:13 AM IST

ನಿನ್ನೆ ನಡೆದ ಐಪಿಎಲ್​ನ 65ನೇ ಪಂದ್ಯದಲ್ಲಿ ಪಂಜಾಬ್​ ಕಿಂಗ್ಸ್​ ವಿರುದ್ಧ ರಾಜಸ್ಥಾನ್​ ರಾಯಲ್ಸ್​ ಸೋಲನುಭವಿಸಿದೆ.

ರಾಜಸ್ಥಾನ್​ ರಾಯಲ್ಸ್​ಗೆ ಸತತ 4ನೇ ಸೋಲು
ರಾಜಸ್ಥಾನ್​ ರಾಯಲ್ಸ್​ಗೆ ಸತತ 4ನೇ ಸೋಲು (IANS)

ಗುವಾಹಟಿ: ಪ್ರಸಕ್ತ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್)​ನಲ್ಲಿ ಆರಂಭದಿಂದಲೂ ಅಬ್ಬರಿಸಿದ್ದ ರಾಜಸ್ಥಾನ್​ ರಾಯಲ್ಸ್​ ತಂಡ ಇದೀಗ ಸೋಲಿನ ಸುಳಿಗೆ ಸಿಲುಕಿ ಹೊರಬರಲು ಪರದಾಡುತ್ತಿದೆ. ಈಗಾಗಲೇ ಪ್ಲೇ ಆಫ್​ಗೆ​ ಅಧಿಕೃತವಾಗಿ ಅರ್ಹತೆ ಪಡೆದಿದ್ದರೂ ಸತತ ಸೋಲಿನಿಂದ ಮುಗ್ಗರಿಸಿದೆ.

ಬುಧವಾರ ನಡೆದ ಪಂಜಾಬ್​ ಕಿಂಗ್ಸ್​ ವಿರುದ್ದದ ಔಪಚಾರಿಕ ಪಂದ್ಯದಲ್ಲೂ ರಾಜಸ್ಥಾನ್​ ರಾಯಲ್ಸ್​ 5 ವಿಕೆಟ್​ಗಳಿಂದ ಹೀನಾಯ ಸೋಲನುಭವಿಸಿತು. ಮತ್ತೊಂದೆಡೆ, ನಾಕೌಟ್​ ರೇಸ್​ನಿಂದ ಹೊರಬಿದ್ದಿರುವ ಪಂಜಾಬ್ ಟೂರ್ನಿಯಲ್ಲಿ​ 5ನೇ ಗೆಲುವು ಸಾಧಿಸಿತು.

ಗುವಾಹಟಿಯ ಬರ್ಸಾಪರಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್​ ಗೆದ್ದು ಮೊದಲು ಬ್ಯಾಟ್​ ಮಾಡಿದ ಸ್ಯಾಮ್ಸನ್​ ಟೀಂ, ನಿಗದಿತ 20 ಓವರ್​ಗಳಲ್ಲಿ 9 ವಿಕೆಟ್​ ನಷ್ಟಕ್ಕೆ 144 ರನ್​ಗಳ ಸಾಧಾರಣ ಮೊತ್ತ ಕಲೆ ಹಾಕಿತು. ತಂಡದ ಪರ ರಿಯಾನ್ ಪರಾಗ್ 48 ರನ್ ಗಳಿಸಿ ಗರಿಷ್ಠ ಸ್ಕೋರರ್​ ಎನಿಸಿಕೊಂಡರು. ಉಳಿದಂತೆ, ಜೈಸ್ವಾಲ್ (4), ಕ್ಯಾಡ್ಮೊರ್​ (18), ಸ್ಯಾಮ್ಸನ್​ (18),​ ಅಶ್ವಿನ್​ (28), ಧ್ರುವ್​ ಜುರೆಲ್​ (0), ಪೊವೆಲ್​ (4), ಫೆರೆರಿಯಾ (7), ಬೌಲ್ಟ್​ (7), ಆವೇಶ್​ ಖಾನ್​ (3) ರನ್ ಕಲೆ ಹಾಕಿದರು.

ಪಂಜಾಬ್ ಪರ ಸ್ಯಾಮ್ ಕರ್ರಾನ್, ರಾಹುಲ್ ಚಹಾರ್, ಹರ್ಷಲ್ ಪಟೇಲ್ ತಲಾ 2 ವಿಕೆಟ್​ ಪಡೆದು ಮಿಂಚಿದರು.

ಸ್ಯಾಮ್ ಕರ್ರಾನ್ ನಾಯಕನಾಟ: ಇದಕ್ಕುತ್ತರವಾಗಿ, ಪಂಜಾಬ್​ ಆರಂಭಿಕ ಹಿನ್ನೆಡೆ ಅನುಭವಿಸಿದರೂ ಚೇತರಿಸಿಕೊಂಡು 18.5 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು ಪಂದ್ಯ ಗೆದ್ದುಕೊಂಡಿತು. ತಂಡದ ನಾಯಕ ಸ್ಯಾಮ್ ಕರ್ರಾನ್ 41 ಎಸೆತಗಳಲ್ಲಿ ಅಜೇಯ 63 ರನ್​ಗಳ ಇನಿಂಗ್ಸ್​ ಆಡಿ ತಂಡದ ಗೆಲುವಿಗೆ ಕಾರಣರಾದರು. ಉಳಿದಂತೆ ಜಿತೇಶ್ ಶರ್ಮಾ (22) ಮತ್ತು ರಿಲೆ ರೊಸ್ಸೊ (22) ರನ್​ ಕೊಡುಗೆ ನೀಡಿದರು.

ರಾಜಸ್ಥಾನ ಪರ ಯಜ್ವೇಂದ್ರ ಚಹಾಲ್, ಅವೇಶ್ ಖಾನ್ ತಲಾ 2, ಟ್ರೆಂಟ್ ಬೌಲ್ಟ್ ಒಂದು ವಿಕೆಟ್ ಉರುಳಿಸಿದರು.

ಇದನ್ನೂ ಓದಿ: ಔಪಚಾರಿಕ ಪಂದ್ಯದಲ್ಲೂ ಕುಂದಿದ ರಾಯಲ್ಸ್ ಬ್ಯಾಟಿಂಗ್​: ಪಂಜಾಬ್​ಗೆ 145 ರನ್​ಗಳ ಅಲ್ಪ ಗುರಿ - RR vs PBKS match

ETV Bharat Logo

Copyright © 2024 Ushodaya Enterprises Pvt. Ltd., All Rights Reserved.