ETV Bharat / state

ಶಿವಮೊಗ್ಗದಲ್ಲಿ ದಳಪತಿ ಚಿತ್ರೀಕರಣ: ಕಾತರದಿಂದ ಕಾಯುತ್ತಿದ್ದ ಅಭಿಮಾನಿಗಳಿಗೆ ದರ್ಶನ ನೀಡಿದ ವಿಜಯ್

author img

By

Published : Dec 12, 2019, 5:32 PM IST

ಕಳೆದೆರಡು ದಿನಗಳಿಂದ ತಮಿಳು ಚಿತ್ರರಂಗದ ಸೂಪರ್​ ಸ್ಟಾರ್​ ದಳಪತಿ ವಿಜಯ್​ ತಮ್ಮ ಸಿನಿಮಾದ ಚಿತ್ರೀಕರಣಕ್ಕಾಗಿ ನಗರದಲ್ಲಿ ಬೀಡುಬಿಟ್ಟಿದ್ದಾರೆ. ಅವರನ್ನು ನೋಡಲು ಅಭಿಮಾನಿಗಳು ಮುಗಿಬಿದ್ದಿದ್ದಾರೆ.

ದಳಪತಿ ವಿಜಯ್
Tamil Actor Vijay

ಶಿವಮೊಗ್ಗ: ಕಳೆದೆರಡು ದಿನಗಳಿಂದ ತಮಿಳು ಚಿತ್ರರಂಗದ ಸೂಪರ್​ ಸ್ಟಾರ್​ ದಳಪತಿ ವಿಜಯ್​ ತಮ್ಮ ಸಿನಿಮಾದ ಚಿತ್ರೀಕರಣಕ್ಕಾಗಿ ನಗರದಲ್ಲಿ ಬೀಡು ಬಿಟ್ಟಿದ್ದಾರೆ.

ಶಿವಮೊಗ್ಗದಲ್ಲಿ ದಳಪತಿ ಚಿತ್ರೀಕರಣ

ನಟ ವಿಜಯ್ ನಗರದ ಖಾಸಗಿ ಹೋಟೆಲ್​ನಲ್ಲಿ ತಂಗಿದ್ದು, ನಗರದಲ್ಲಿರುವ ಹಳೆ ಜೈಲು ಆವರಣದಲ್ಲಿ 'ದಳಪತಿ 64' ಚಿತ್ರದ ಶೂಟಿಂಗ್ ಮೂರು ದಿನಗಳಿಂದ ಭರದಿಂದ ಸಾಗಿದೆ. ಸಿನಿಮಾದ ಪ್ರಮುಖ ದೃಶ್ಯದ ಚಿತ್ರೀಕರಣವನ್ನು ಜೈಲಿನಲ್ಲಿ ಮಾಡಲಾಗುತ್ತಿದ್ದು, ಇದಕ್ಕಾಗಿ ಜೈಲು ಕಟ್ಟಡದೊಳಗೆ ಸೆಟ್ ಕೂಡ ಹಾಕಲಾಗಿದೆ.

ನಟ ವಿಜಯ್ ನೋಡಲು ಬೆಂಗಳೂರು, ಚಿಕ್ಕಮಗಳೂರು ಸೇರಿದಂತೆ ವಿವಿಧೆಡೆಯಿಂದ ಅಭಿಮಾನಿಗಳು ಆಗಮಿಸಿದ್ದಾರೆ. ಒಂದು ಬಾರಿಯಾದರೂ ತಮ್ಮ ನೆಚ್ಚಿನ ನಾಯಕ ನಟನನ್ನು ಕಣ್ತುಂಬಿಕೊಳ್ಳಬೇಕೆಂದು ಕಾಯುತ್ತಿದ್ದ ಅಭಿಮಾನಿಗಳಿಗೆ ಕೊನೆಗೂ ವಿಜಯ್​​ ತಾವು ತಂಗಿದ್ದ ಹೋಟೆಲ್​ಗೆ ತೆರಳುವ ವೇಳೆ ದರ್ಶನ ನೀಡಿದ್ದಾರೆ. ಇದರಿಂದ ಅಭಿಮಾನಿಗಳು ಖುಷ್​ ಆಗಿದ್ದಾರೆ.

Intro:ಶಿವಮೊಗ್ಗ,


ವಿಜಯ ಅಭಿನಯದ ದಳಪತಿ 64 ಚಿತ್ರೀಕರಣ ಆರಂಭ ಕೊನೆಗೂ ಅಭಿಮಾನಿಗಳಿಗೆ ದರ್ಶನ ಕೊಟ್ಟ ವಿಜಯ

ಆ್ಯಂಕರ್..........
ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ದಳಪತಿ ವಿಜಯ್ ಶಿವಮೊಗ್ಗದಲ್ಲಿ ಬೀಡು ಬಿಟ್ಟಿದ್ದಾರೆ. ಕಳೆದ ಮೂರು ದಿನಗಳ ಹಿಂದೆ ಶಿವಮೊಗ್ಗ ಬಂದಿರುವ ವಿಜಯ್ ಶಿವಮೊಗ್ಗದ ಖಾಸಗಿ ಹೋಟೆಲ್ ನಲ್ಲಿ ತಂಗಿದ್ದು ಶಿವಮೊಗ್ಗದಲ್ಲಿ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಶಿವಮೊಗ್ಗದ ಹಳೆ ಜೈಲು ಆವರಣದಲ್ಲಿ ವಿಜಯ್ ಅಭಿನಯದ ದಳಪತಿ 64 ಚಿತ್ರದ ಶೂಟಿಂಗ್ ಭರ್ಜರಿಯಾಗಿ ನಡೆಯುತ್ತಿದೆ.
ಕಳೆದ ಮೂರು ದಿನದಿಂದ ನಿರಂತರ ಶೂಟಿಂಗ್ ನಡೆಯುತ್ತಿದೆ. ಚಿತ್ರದ ಪ್ರಮುಖ ಸೀಕ್ವೆನ್ಸ್ ಒಂದರ ಚಿತ್ರೀಕರಣವನ್ನು ಶಿವಮೊಗ್ಗದ ಹಳೆ ಜೈಲಿನಲ್ಲಿ ಮಾಡಲಾಗುತ್ತಿದೆ. ಇದಕ್ಕಾಗಿ ಜೈಲು ಕಟ್ಟಡದೊಳಗೆ ಸೆಟ್ ಕೂಡ ಹಾಕಲಾಗಿದೆ.
ಇನ್ನು, ಜೈಲು ಆವರಣದ ಹೊರಗೆ ಇಳಯ ದಳಪತಿ ವಿಜಯ್ ನೋಡಲು ಫ್ಯಾನ್ಸ್ ಕಾತುರದಿಂದ ಕಾಯುತ್ತಿದ್ದಾರೆ. ಬೆಂಗಳೂರು, ಚಿಕ್ಕಮಗಳೂರು ಸೇರಿದಂತೆ ವಿವಿಧೆಡೆಯಿಂದ ಅಭಿಮಾನಿಗಳು ಆಗಮಿಸಿದ್ದಾರೆ. ಒಂದು ಸರಿಯಾದರು ತಮ್ಮ ಹೀರೋನನ್ನು ಕಣ್ತುಂಬಿಕೊಳ್ಳಬೇಕು ಎಂದು ಕಾಯುತ್ತಿದ್ದ ಅಭಿಮಾನಿಗಳಿಗೆ
ರಾಯಲ್ ಆರ್ಕೇಡ್ ಹೋಟೆಲ್ ಬಳಿ ಚಿತ್ರೀಕರಣಕ್ಕೆ ಹೋಗುವ ಸಂದರ್ಭದಲ್ಲಿ ಪ್ರತ್ಯಕ್ಷ ರಾಗಿ ಅಭಿಮಾನಿಗಳಿಗೆ ಕೈ ಬಿಸಿದ್ದಾರೆ.

ಭೀಮಾನಾಯ್ಕ ಎಸ್ ಶಿವಮೊಗ್ಗBody:ಭೀಮಾನಾಯ್ಕ ಎಸ್ ಶಿವಮೊಗ್ಗConclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.