ETV Bharat / state

ಅನ್ಯಕೋಮಿನ ವ್ಯಾಪಾರಿಗಳ ನಿಷೇಧಕ್ಕೆ ಸಂಘಟನೆಗಳ ಪಟ್ಟು

author img

By

Published : Dec 1, 2022, 8:47 PM IST

ಮತೀಯ ಕಲಹದಂತ ಸೂಕ್ಷ ವಿಚಾರಕ್ಕೆ ಈಗಾಗಲೆ ರಾಜ್ಯಮಟ್ಟದಲ್ಲಿ ಹಲವು ಬಾರಿ ಗುರುತಿಸಿಕೊಂಡಿರುವ ಗಂಗಾವತಿಯಲ್ಲಿ ಡಿ. 5ರಂದು ಹನುಮ ಜಯಂತಿ ನಿಮಿತ್ತ ಹನುಮ ಮಾಲಾಧಾರಿಗಳ ಬೃಹತ್ ಶೋಭಾಯಾತ್ರೆ ನಡೆಯಲಿದ್ದು, ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ.

ಅನ್ಯಕೋಮಿನ ವ್ಯಾಪಾರಿಗಳ ನಿಷೇಧಕ್ಕೆ ಸಂಘಟನೆಗಳ ಪಟ್ಟು
ಅನ್ಯಕೋಮಿನ ವ್ಯಾಪಾರಿಗಳ ನಿಷೇಧಕ್ಕೆ ಸಂಘಟನೆಗಳ ಪಟ್ಟು

ಗಂಗಾವತಿ (ಕೊಪ್ಪಳ): ಹಿಂದೂಗಳ ಪವಿತ್ರ ಧಾರ್ಮಿಕ ತಾಣವಾದ ಅಂಜನಾದ್ರಿಯಲ್ಲಿ ಹಿಂದೂಯೇತರ ಹಾಗೂ ಅನ್ಯಕೋಮಿನ ವ್ಯಾಪಾರಿಗಳಿಗೆ ವಹಿವಾಟು ನಡೆಸಲು ಅವಕಾಶ ನೀಡಬಾರದು ಎಂಬ ಒತ್ತಾಯವನ್ನು ಹಿಂದೂಪರ ಸಂಘಟನೆಗಳ ಮುಖಂಡರು ಪುನರುಚ್ಚರಿಸಿದ್ದಾರೆ.

ಅನ್ಯಕೋಮಿನ ವ್ಯಾಪಾರಿಗಳ ನಿಷೇಧಕ್ಕೆ ಸಂಘಟನೆಗಳ ಪಟ್ಟು
ಅನ್ಯಕೋಮಿನ ವ್ಯಾಪಾರಿಗಳ ನಿಷೇಧಕ್ಕೆ ಸಂಘಟನೆಗಳ ಪಟ್ಟು

ಅನ್ಯಕೋಮಿನ ವ್ಯಾಪಾರಿಗಳ ನಿಷೇಧಕ್ಕೆ ಒತ್ತಾಯಿಸಿ ಹಿಂದೂಪರ ಸಂಘಟನೆಗಳು ಅಂಜನಾದ್ರಿಯಲ್ಲಿ ಅಳವಡಿಸಿದ್ದ ಬ್ಯಾನರ್​ಗಳನ್ನು ತಹಶೀಲ್ದಾರ್​ ನಾಗರಾಜ್ ನೇತೃತ್ವದಲ್ಲಿ ಪೊಲೀಸರು ತೆಗೆದು ಹಾಕಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಹಿಂದೂ ಸಂಘಟನೆಗಳು ನಿಷೇಧಕ್ಕೆ ಪಟ್ಟು ಹಿಡಿದಿದ್ದರಿಂದ ಗುರುವಾರ ಸಮಾಲೋಚನಾ ಸಭೆ ಆಯೋಜಿಸಲಾಗಿತ್ತು.

ಅಂಜನಾದ್ರಿ ದೇಗುಲದ ತಾತ್ಕಾಲಿಕ ಆಡಳಿತಾಧಿಕಾರಿ ಹಾಗೂ ಸಹಾಯಕ ಆಯುಕ್ತ ಬಸವಣೆಪ್ಪ ಕಳಶೆಟ್ಟಿ ನೇತೃತ್ವದಲ್ಲಿ ಆಯೋಜಿಸಲಾಗಿದ್ದ ಸಭೆಯಲ್ಲಿ ವ್ಯಾಪಾರ ನಿಷೇಧಕ್ಕೆ ಮತ್ತೆ ಹಿಂದೂಪರ ಸಂಘಟನೆಯ ಕಾರ್ಯಕರ್ತರು ಪಟ್ಟು ಹಿಡಿದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಬಸವಣೆಪ್ಪ, ಹಿಂದೂ ಧಾರ್ಮಿಕದತ್ತಿ ಮತ್ತು ಮುಜರಾಯಿ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಮಳಿಗೆಗಳನ್ನು ಮಾತ್ರ ಅನ್ಯ ಕೋಮಿನವರಿಗೆ ನೀಡಲು ಅವಕಾಶವಿಲ್ಲ. ಆದರೆ, ಅಂಜನಾದ್ರಿಯಲ್ಲಿ ಕೆಲ ವ್ಯಾಪಾರಿಗಳು ಖಾಸಗಿ ವ್ಯಕ್ತಿಗಳ ಜಮೀನಿನಲ್ಲಿ ಅಂಗಡಿ ತೆರೆದು ವ್ಯಾಪಾರ ಮಾಡುತ್ತಿದ್ದಾರೆ. ಈ ಬಗ್ಗೆ ಕ್ರಮ ಕೈಗೊಳ್ಳಲಾಗದು ಎಂದರು.

ಪ್ರತಿಕ್ರಿಯೆ ನೀಡಿದ ಬಸವಣೆಪ್ಪ, ಹಿಂದೂ ಧಾರ್ಮಿಕ ದತ್ತಿ ಮತ್ತು ಮುಜರಾಯಿ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಮಳಿಗೆಗಳನ್ನು ಮಾತ್ರ ಅನ್ಯ ಕೋಮಿನವರಿಗೆ ನೀಡಲು ಅವಕಾಶವಿಲ್ಲ. ಆದರೆ, ಅಂಜನಾದ್ರಿಯಲ್ಲಿ ಕೆಲ ವ್ಯಾಪಾರಿಗಳು ಖಾಸಗಿ ವ್ಯಕ್ತಿಗಳ ಜಮೀನಿನಲ್ಲಿ ಅಂಗಡಿ ತೆರೆದು ವ್ಯಾಪಾರ ಮಾಡುತ್ತಿದ್ದಾರೆ. ಈ ಬಗ್ಗೆ ಕ್ರಮ ಕೈಗೊಳ್ಳಲಾಗದು ಎಂದು ಹೇಳಿದರು.

ಅಂಜನಾದ್ರಿ-ಗಂಗಾವತಿಗೆ ಎಸ್ಪಿ ದಿಢೀರ್ ಭೇಟಿ: ಪರಿಶೀಲನೆ: ಮತೀಯ ಕಲಹದಂತ ಸೂಕ್ಷ ವಿಚಾರಕ್ಕೆ ಈಗಾಗಲೆ ರಾಜ್ಯಮಟ್ಟದಲ್ಲಿ ಹಲವು ಬಾರಿ ಗುರುತಿಸಿಕೊಂಡಿರುವ ಗಂಗಾವತಿಯಲ್ಲಿ ಡಿ. 5ರಂದು ಹನುಮ ಜಯಂತಿ ನಿಮಿತ್ತ ಹನುಮ ಮಾಲಾಧಾರಿಗಳ ಬೃಹತ್ ಶೋಭಾಯಾತ್ರೆ ನಡೆಯಲಿದ್ದು, ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ.

ಅಂಜನಾದ್ರಿ
ಅಂಜನಾದ್ರಿ

ಡಿ. 5ರಂದು ಅಂಜನಾದ್ರಿಗೆ ರಾಜ್ಯದ ನಾನಾ ಜಿಲ್ಲೆಗಳಿಂದ ಒಂದು ಲಕ್ಷ ಜನ ಬರುವ ಸಾಧ್ಯತೆ ಹಿನ್ನೆಲೆ ಭದ್ರತೆ ಹಿನ್ನೆಲೆ ಕೈಗೊಂಡಿರುವ ಕ್ರಮಗಳ ಬಗ್ಗೆ ಕೊಪ್ಪಳ ಜಿಲ್ಲಾ ಎಸ್ಪಿ ಅರಣಂಗ್ಶುಗಿರಿ ಗುರುವಾರ ಸಂಜೆ ಗಂಗಾವತಿ ಹಾಗೂ ಅಂಜನಾದ್ರಿಗೆ ದಿಢೀರ್ ಭೇಟಿ ನೀಡಿ ಪರಿಶೀಲಿಸಿದರು.

ಅಂಜನಾದ್ರಿಯಲ್ಲಿ ಪಾರ್ಕಿಂಗ್​ ವ್ಯವಸ್ಥೆ, ಭದ್ರತೆ, ತಾತ್ಕಾಲಿಕ ಪೊಲೀಸ್ ಔಟ್​ ಸ್ಪಾಟ್​ಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ಡಿ. 4 ಮತ್ತು 5ರಂದು ಕೊಪ್ಪಳ ಜಿಲ್ಲೆಯ ನಾನಾ ಠಾಣೆಗಳ ಪೊಲೀಸರನ್ನು ಇಲ್ಲಿಗೆ ಹೆಚ್ಚುವರಿಯಾಗಿ ನಿಯೋಜನೆ ಮಾಡಲಾಗುವುದು ಎಂದು ಎಸ್​ಪಿ ತಿಳಿಸಿದರು.

ಅಲ್ಲದೇ ಗಂಗಾವತಿಯಲ್ಲಿ ಸಿಟಿ ರೌಂಡ್ ಹಾಕಿದ ಎಸ್ಪಿ, ಶೋಭಾಯಾತ್ರೆ ನಡೆಯುವ ಸಿಬಿಎಸ್ ವೃತ್ತದಿಂದ ಕೃಷ್ಣದೇವರಾಯ ವೃತ್ತದವರೆಗೆ ಹೆಚ್ಚಿನ ಪೊಲೀಸ್ ಭದ್ರತೆ ಮತ್ತು ಸಿಸಿಟಿವಿ ಅಳವಡಿಸಿ ನಿಗಾವಹಿಸುವಂತೆ ಸ್ಥಳೀಯ ಪೊಲೀಸರಿಗೆ ಸೂಚನೆ ನೀಡಿದರು.

ಓದಿ: ಅಂಜನಾದ್ರಿಯಲ್ಲಿ ಅನ್ಯಧರ್ಮೀಯರ ವ್ಯಾಪಾರಕ್ಕೆ ನಿರಾಕರಣೆ : ಸಿಪಿಐಎಂ ಖಂಡನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.