ETV Bharat / state

ಅಕ್ರಮ ಹಣ ವರ್ಗಾವಣೆ : ಎಸಿಬಿ ಬಲೆಗೆ ಬಿದ್ದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ!

author img

By

Published : Jul 8, 2020, 1:29 AM IST

ACB Raid
ಎಸಿಬಿ ಬಲೆಗೆ ಬಿದ್ದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ

ತಾಲೂಕಿನ ಹಿಟ್ನಾಳ್ ಟೋಲ್ ಗೇಟ್ ಬಳಿ ಎಸಿಬಿ ಅಧಿಕಾರಿಗಳು ಟ್ರ್ಯಾಪ್ ಮಾಡಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಯನ್ನು ವಶಕ್ಕೆ ಪಡೆದಿದ್ದಾರೆ.

ಕೊಪ್ಪಳ : ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿ ರೂಪಾ ಸಿ. ಹೆಚ್​ ದಾಖಲೆ ಇಲ್ಲದೆ 3.20 ಲಕ್ಷ ರೂ. ಹಣ ಸಾಗಣೆ ಮಾಡುವಾಗ ಎಸಿಬಿ ಬಲೆಗೆ ಬಿದ್ದಿದ್ದಾರೆ.

ತಾಲೂಕಿನ ಹಿಟ್ನಾಳ್ ಟೋಲ್ ಗೇಟ್ ಬಳಿ ಎಸಿಬಿ ಅಧಿಕಾರಿಗಳು ಟ್ರ್ಯಾಪ್ ಮಾಡಿ ವಶಕ್ಕೆ ಪಡೆದಿದ್ದಾರೆ. ಎಸಿಬಿ ಡಿವೈಎಸ್​ಪಿ ಆರ್. ಎಸ್. ಉಜ್ಜಿನಕೊಪ್ಪ ನೇತೃತ್ವದಲ್ಲಿ ಈ ದಾಳಿ ನಡೆಸಲಾಗಿದೆ.

ACB Raid
ಎಸಿಬಿ ಬಲೆಗೆ ಬಿದ್ದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ

ಮಹಿಳಾ ಅಧಿಕಾರಿ KA-35-P-0225 ನಂಬರ್​ನ ಕಾರಿನಲ್ಲಿ 3.20 ಲಕ್ಷ ರೂಪಾಯಿ ಹಣವನ್ನು ದಾಖಲೆ ಇಲ್ಲದೆ ಸಾಗಿಸುತ್ತಿದ್ದಾಗ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ದಾಳಿ ಸಂದರ್ಭದಲ್ಲಿ ಎಸಿಬಿ ಇನ್ಸ್​​ಪೆಕ್ಟರ್​ಗಳಾದ ಎಸ್. ಎಸ್. ಬೀಳಗಿ, ಗುರುರಾಜ ಎನ್​. ಎಂ ಉಪಸ್ಥಿತರಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.