ETV Bharat / state

ಅಕ್ರಮವಾಗಿ ಗಾಂಜಾ ಸಾಗಿಸುತ್ತಿದ್ದ ನಾಲ್ವರ ಬಂಧನ..

author img

By

Published : Nov 27, 2019, 7:17 PM IST

Four people were arrested
ಬಂಧಿತ ಆರೋಪಿಗಳು

ತಿರುಪತಿಯಿಂದ ತುಮಕೂರು ಕಡೆಗೆ ಖಾಸಗಿ ಬಸ್​​ನಲ್ಲಿ ನಾಲ್ವರು ಅಕ್ರಮವಾಗಿ ಗಾಂಜಾ ಸಾಗಿಸುತ್ತಿದ್ದ ವೇಳಿ ದಾಳಿ ನಡೆಸಿದ ಪೊಲೀಸರು ನಾಲ್ವರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ಕೋಲಾರ: ಅಕ್ರಮವಾಗಿ ಗಾಂಜಾ ಸಾಗಿಸುತ್ತಿದ್ದ ಆರೋಪಿಗಳನ್ನು ಬೆಂಗಳೂರಿನ ಮಾದಕ ನಿಗ್ರಹ ದಳದ ಪೊಲೀಸರು ಕಾರ್ಯಚಾರಣೆ ನಡೆಸಿ ಬಂಧಿಸಿರುವ ಘಟನೆ ಕೋಲಾರದಲ್ಲಿ ನಡೆದಿದೆ‌.

ಆರೋಪಿಗಳು ತಿರುಪತಿಯಿಂದ ತುಮಕೂರು ಕಡೆಗೆ ಖಾಸಗಿ ಬಸ್​​ನಲ್ಲಿ ಗಾಂಜಾವನ್ನ ಸಾಗಿಸುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ದಾಳಿ‌ ನಡೆಸಿದ ಪೊಲೀಸರು, ನಾಲ್ವರು ಆರೋಪಿಗಳನ್ನ ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕಿನ ವಡ್ಡರಹಳ್ಳಿ ಗ್ರಾಮದ ಬಳಿ ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ಬಂಧಿತರು ಆಂಧ್ರಪ್ರದೇಶದ ಪುಂಗನೂರಿನ ಬಿ ಸಿ ಕಾಲೋನಿ ನಿವಾಸಿಗಳು ಎಂದು ತಿಳಿದು ಬಂದಿದೆ. ನಾಲ್ವರು ಆರೋಪಿಗಳ ಬಳಿ‌ ಇದ್ದ 80 ಕೆಜಿ ಗಾಂಜಾ ಸೊಪ್ಪನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

Intro:ಆಂಕರ್: ಬೆಂಗಳೂರಿನ ಮಾದಕ ಹಾಗೂ ನಿಗ್ರಹ ದಳದ ಪೊಲೀಸರು ಕಾರ್ಯಚಾರಣೆ ನಡೆಸಿ, ಅಕ್ರಮವಾಗಿ ಗಾಂಜಾ ಸಾಗಿಸುತ್ತಿದ್ದ ಅರೋಪಿಗಳನ್ನ ಬಂಧಿಸಿರುವ ಘಟನೆ ಕೋಲಾರದಲ್ಲಿ ಜರುಗಿದೆ‌. Body:ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕಿನ ವಡ್ಡರಹಳ್ಳಿ ಗ್ರಾಮದ ಬಳಿ ಅರೋಪಿಗಳನ್ನ ಬಂಧಿಸಲಾಗಿದೆ. ಆರೋಪಿಗಳು ತಿರುಪತಿಯಿಂದ ತುಮಕೂರು ಕಡೆಗೆ ಖಾಸಗೀ ಬಸ್ ನಲ್ಲಿ ಗಾಂಜಾವನ್ನ ಸಾಗಿಸುತ್ತಿದ್ದು, ಖಚಿತ ಮಾಹಿತಿ ಮೇರೆಗೆ ದಾಳಿ‌ ನಡೆಸಿದ ಮಾದಕ ವಸ್ತು ಹಾಗೂ ನಿಗ್ರಹ ದಳದ ಪೊಲೀಸರು ದಾಳೊ ನಡೆಸಿ ನಾಲ್ವರು ಆರೋಪಿಗಳನ್ನ ಬಂಧಿಸಿ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಇನ್ನು ಬಂಧಿತರು ಆಂಧ್ರಪ್ರದೇಶದ ಪುಂಗನೂರಿನ ಬಿ.ಸಿ.ಕಾಲೋನಿ ನಿವಾಸಿ ರೆಡ್ಡಮ್ಮ(೪೦) ಹಾಗೂ ನಾಲ್ವರನ್ನ ಬಂಧಿಸಿ, ಆರೋಪಿಗಳ ಬಳಿ‌ ಇದ್ದ 80 ಕೆಜಿ ಗಾಂಜಾ ಸೊಪ್ಪನ್ನ ಪೊಲೀಸರು ವಶ ಪಡಿಸಿಕೊಂಡಿದ್ದಾರೆ.

Conclusion:ಇನ್ನು ಆರೋಪಿಗಳನ್ನ ಹೆಚ್ಚಿನ ವಿಚಾರಣೆಗಾಗಿ ಮುಳಬಾಗಿಲು ಗ್ರಾಮಾಂತರ ಠಾಣಾ ಪೊಲೀಸರಿಗೆ ಒಪ್ಪಿಸಿದ್ದು, ವಿಚಾರಣೆ ನಡೆಸಲಾಗುತ್ತಿದೆ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.