ETV Bharat / state

ಅಜಾಗರೂಕತೆಯಿಂದ ಬೈಕ್ ಚಾಲನೆ; ಹಳ್ಳಕ್ಕೆ ಉರುಳಿ ಬಿದ್ದು ಸವಾರರಿಬ್ಬರು ಸ್ಥಳದಲ್ಲೇ ಸಾವು - Bike riders fell into ditch

author img

By ETV Bharat Karnataka Team

Published : May 16, 2024, 10:19 PM IST

ಮುತ್ತಗಿ ಗ್ರಾಮದಿಂದ ಶೀರೇನಹಳ್ಳಿ ಗ್ರಾಮಕ್ಕೆ ಹೋಗುವ ಮಾರ್ಗಮಧ್ಯೆ ಬೈಕ್​ ಹಳ್ಳಕ್ಕೆ ಬಿದ್ದು ಸವಾರರಿಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ.

Bike
ಬೈಕ್ (ETV Bharat)

ವಿಜಯನಗರ : ಅಜಾಗರೂಕತೆಯಿಂದ ಬೈಕ್ ಚಾಲನೆ ಮಾಡಿ ಆಳುದ್ದದ ಹಳ್ಳಕ್ಕೆ ಉರುಳಿ ಬಿದ್ದು, ಸವಾರರಿಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಒಬ್ಬನಿಗೆ ಸಣ್ಣಪುಟ್ಟ ಗಾಯಗಳಾಗಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

ನಾಗರಾಜ (27), ಅಡಿವೆಪ್ಪ (25) ಬೈಕ್ ಬಿದ್ದ ಸ್ಥಳದಲ್ಲೇ ಸಾವನ್ನಪ್ಪಿದರೆ, ಮತ್ತೊಬ್ಬರಿಗೆ ಗಾಯವಾಗಿದೆ. ಗಾಯಾಳುಗಳಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಬೈಕ್ ಬಿದ್ದ ರಭಸಕ್ಕೆ ತಲೆಗೆ ತೀವ್ರ ಪೆಟ್ಟಾಗಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ಮುತ್ತಗಿ ಗ್ರಾಮದಿಂದ ಶೀರೇನಹಳ್ಳಿ ಗ್ರಾಮಕ್ಕೆ ಹೋಗುವ ಮಾರ್ಗಮಧ್ಯೆ ಈ ಘಟನೆ ನಡೆದಿದೆ.

ಮೃತರಿಬ್ಬರು ಶೀರೇನಹಳ್ಳಿ ಗ್ರಾಮದವರು ಅಂತ ಗುರುತು ಪತ್ತೆಯಾಗಿದೆ. ಹರಪನಹಳ್ಳಿ ತಾಲೂಕಿನ ಚಿಗಟೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : ಬೈಕ್​ಗೆ ಡಿಕ್ಕಿ ಹೊಡೆದು, ಸವಾರನ ಸಮೇತ 2 ಕಿ.ಮೀ ಎಳೆದೊಯ್ದ ಲಾರಿ ಚಾಲಕ: ವಿಡಿಯೋ ನೋಡಿ - Lorry Driver Dragged Bike Rider

ETV Bharat Logo

Copyright © 2024 Ushodaya Enterprises Pvt. Ltd., All Rights Reserved.