ETV Bharat / state

ದಾವಣಗೆರೆ: ರಸ್ತೆಯಲ್ಲಿ ಸಿಕ್ಕ ಚಿನ್ನದ ಸರ ವಾರಸುದಾರರಿಗೆ ಒಪ್ಪಿಸಿ ಪ್ರಾಮಾಣಿಕತೆ ಮೆರೆದ ಶಿಕ್ಷಕ ದಂಪತಿ

author img

By

Published : Jun 12, 2023, 7:25 PM IST

handing over gold chain found on road to police
ರಸ್ತೆಯಲ್ಲಿ ಸಿಕ್ಕ ಚಿನ್ನದ ಸರ ಪೊಲೀಸರಿಗೆ ಒಪ್ಪಿಸಿ ಪ್ರಾಮಾಣಿಕತೆ ಮೆರೆದ ಶಿಕ್ಷಕ ದಂಪತಿ

ಚಿನ್ನವನ್ನು ಹಿಂತಿರುಗಿಸಿದ ಶಿಕ್ಷಕ ದಂಪತಿಗೆ ಸಾಕಷ್ಟು ಪ್ರಶಂಸೆ ವ್ಯಕ್ತವಾಗಿದೆ.

ದಾವಣಗೆರೆ: ರಸ್ತೆಯಲ್ಲಿ ಸಿಕ್ಕ ಚಿನ್ನದ ಮಾಂಗಲ್ಯ ಸರ ಪೊಲೀಸರಿಗೆ ಒಪ್ಪಿಸಿ ಶಿಕ್ಷಕ ದಂಪತಿ ಪ್ರಾಮಾಣಿಕತೆ ಮೆರೆದಿದ್ದಾರೆ. ಸುಮಾರು ಮೂರು ಲಕ್ಷ ರೂಪಾಯಿ‌ ಬೆಲೆಬಾಳುವ ಚಿನ್ನದ ಮಾಂಗಲ್ಯ ಸರ ಇದಾಗಿದ್ದು, ಶ್ರೀನಿವಾಸ- ಪೂರ್ಣಿಮಾ ಸಿಕ್ಕ ಸರವನ್ನು ಪೊಲೀಸರ ಕೈಗೆ ಒಪ್ಪಿಸಿದ ಶಿಕ್ಷಕ ದಂಪತಿಗಳು.

ಶಾಲೆ ಮುಗಿಸಿ ಶಾಲೆ ಕಡೆಯಿಂದ ಬಂದು ಸಂತೆಬೆನ್ನೂರಿನಲ್ಲಿ ದಿನಸಿ ತೆಗೆದುಕೊಳ್ಳಲು ಹೋದಾಗ ರಸ್ತೆಯಲ್ಲಿ ಮಾಂಗಲ್ಯ ಸರ ಸಿಕ್ಕಿತ್ತು. ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಸಂತೆಬೆನ್ನೂರು ಹೋಬಳಿಯಲ್ಲಿ ಈ ಘಟನೆ ನಡೆದಿದ್ದು, ಈ ಮಾಂಗಲ್ಯ ಸರವನ್ನು ಪೊಲೀಸರಿಗೆ ಒಪ್ಪಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ. ಇನ್ನು ಪ್ರಮಾಣಿಕತೆ ಮೆರೆದ ದಂಪತಿ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಹಿರೇಕೊಗಲೂರು ಗ್ರಾಮದ ನಿವಾಸಿಗಳೆಂದು ತಿಳಿದು ಬಂದಿದ್ದು, ಅವರ ಪರ ಸಮಾಜದಲ್ಲಿ ಸಾಕಷ್ಟು ಪ್ರಶಂಸೆ ವ್ಯಕ್ತವಾಗುತ್ತಿದೆ.

ಕಳೆದು ಹೋದ ಸರ ಸಿಕ್ಕ ಸಂಭ್ರಮದಲ್ಲಿ ಪ್ರಾಧ್ಯಾಪಕ ದಂಪತಿ: ಇನ್ನು ಸಂತೆಬೆನ್ನೂರಿನ ರಸ್ತೆಯಲ್ಲಿ ಸಿಕ್ಕ ಚಿನ್ನದ ಸರವನ್ನು ಪೊಲೀಸರಿಗೆ ಒಪ್ಪಿಸಿದ ತಕ್ಷಣ ಅದರ ವಾರಸುದಾರರು ಯಾರೆಂದು ಪೊಲೀಸರು ಪತ್ತೆ ಹಚ್ಚಿ ಒಪ್ಪಿಸಲಾಗಿದೆ. ಇನ್ನು ಈ ಚಿನ್ನದ ಸರ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಗೊಲ್ಲರಹಳ್ಳಿ ಗ್ರಾಮದ ಪ್ರಾಧ್ಯಾಪಕ ಕುಮಾರ್​ ಅವರ ಪತ್ನಿ ಲತಾ ಎಂಬುವರಿಗೆ ಸೇರಿದ್ದಾಗಿದೆ.‌

ಲತಾ ಅವರು ಇಂದು ಮಾಂಗಲ್ಯ ಸರವನ್ನು ಕಳೆದುಕೊಂಡಿದ್ದರು. ಕಳೆದುಕೊಂಡ ಸರದ ಬಗ್ಗೆ ಲತಾ ಅವರು ಸಂತೆಬೆನ್ನೂರು ಪೊಲೀಸ್ ಠಾಣೆಗೆ ತೆರಳಿ ಬೆಳಗ್ಗೆಯೇ ಮಾಹಿತಿ ನೀಡಿದ್ದರು. ಇನ್ನು ಶಿಕ್ಷಕ ದಂಪತಿ ತಂದು ಕೊಟ್ಟ ರಸ್ತೆಯಲ್ಲಿ ದೊರೆತ ಚಿನ್ನದ ಸರವನ್ನು ಸಂತೆಬೆನ್ನೂರು ಠಾಣೆ ಪೊಲೀಸರು ವಾರಸುದಾರರಾದ ಲತಾ ಅವರಿಗೆ ಒಪ್ಪಿಸಿದ್ದಾರೆ.

ಚಿನ್ನ, ನಗದು ಇದ್ದ ಬ್ಯಾಗ್​ ಮರಳಿಸಿದ ಸಾರಿಗೆ ಸಿಬ್ಬಂದಿ: ಸಾರಿಗೆ ಬಸ್​ನಲ್ಲಿ ಪ್ರಯಾಣಿಕರು ಬಿಟ್ಟು ಹೋಗಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ನಗದು ಇದ್ದ ಬ್ಯಾಗ್​ ಅನ್ನು ಬಸ್​ ಚಾಲಕ ಹಾಗೂ ನಿರ್ವಾಹಕ ಅದರ ವಾರಸುದಾರರಿಗೆ ಒಪ್ಪಿಸಿದ್ದ ಘಟನೆ ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ನಡೆದಿತ್ತು.

ಕಾರವಾರ ಡಿಪೋಗೆ ಸೇರಿದ ಬಸ್​ ಒಂದು ಚಿಕ್ಕಮಗಳೂರಿನಿಂದ ಕಾರವಾರಕ್ಕೆ ಬರುತ್ತಿದ್ದ ಬಸ್​ಗೆ ಕುಮಟಾದಲ್ಲಿ ಬಸ್​ ನಿಲ್ದಾಣದಲ್ಲಿ ಕಾರವಾರ ನಿವಾಸಿ ಅಬ್ದುಲ್​ ಸತ್ತಾರ್​ ಶೇಖ್​ ತಮ್ಮ ಕುಟುಂಬದೊಂದಿಗೆ ಏರಿದ್ದರು. ಬಸ್​ ಫುಲ್​ ಆಗಿದ್ದ ಕಾರಣ ಕುಳಿತುಕೊಳ್ಳಲು ಸಾಧ್ಯವಿಲ್ಲ ಎಂದು ಭಾವಿಸಿ, ಆ ಬಸ್​ನಿಂದ ಕೆಳಗಿಳಿದು, ಬೇರೊಂದು ಬಸ್​ನಲ್ಲಿ ಪ್ರಯಾಣಿಸಿದ್ದರು. ಆದರೆ ಬಸ್​ನಿಂದ ಇಳಿಯುವಾಗ ಬ್ಯಾಗ್​ ಮರೆತು ಬಸ್​ನಲ್ಲೇ ಬಿಟ್ಟು ಹೋಗಿದ್ದರು. ಆಬ್ಯಾಗ್​ ಅನ್ನು ಗಮನಿಸಿದ ನಿರ್ವಾಹಕ ಹರೀಶ್​ ಎನ್ನುವವರು ಬಸ್​ ಚಾಲಕ ಸ್ಟೀಫನ್​ ಫರ್ನಾಂಡೀಸ್​ಗೆ ತಿಳಿಸಿ, ಬ್ಯಾಗ್​ ಅನ್ನು ಬಸ್​ ಡಿಪೋ ಮೇಲಾಧಿಕಾರಿಗೆ ತಲುಪಿಸಿದ್ದರು.

ಬೇರೆ ಬಸ್​ಗೆ ಹೋಗಿದ್ದ ಅಬ್ದುಲ್​ ಅವರು ಟಿಕೆಟ್​ ಪಡೆಯಲು ಹಣ ತೆಗೆಯಲು ನೋಡಿದಾಗ ಬ್ಯಾಗ್​ ಇಲ್ಲದೇ ಇದ್ದದ್ದನ್ನು ಗಮನಿಸಿ, ಡಿಪೋ ಅಧಿಕಾರಿಗಳನ್ನು ಸಂಪರ್ಕಿಸಿದ್ದರು. ಆಗ ಬ್ಯಾಗ್​ ಸುರಕ್ಷಿತವಾಗಿರುವುದು ಗೊತ್ತಾಗಿತ್ತು. ನಂತರ ಅಧಿಕಾರಿಗಳ ಸಮಸಕ್ಷಮದಲ್ಲಿ ಬ್ಯಾಗ್​ ಮರಳಿ ಪಡೆದಿದ್ದರು. ಮಾನವೀಯತೆ ಮೆರೆದ ಇಬ್ಬರು ಬಸ್​ ಸಿಬ್ಬಂದಿಗೆ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಭರತ್​ ಎಸ್​ ಅಭಿನಂದಿಸಿದ್ದರು.

ಇದನ್ನೂ ಓದಿ: ಬಸ್​ನಲ್ಲಿ ಸಿಕ್ಕ ಲಕ್ಷಾಂತರ ಮೌಲ್ಯದ ಒಡವೆ, ನಗದು ಮರಳಿಸಿದ NWKRTC ಸಿಬ್ಬಂದಿಗೆ ಅಭಿನಂದನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.