ETV Bharat / state

ಬಾಗಲಕೋಟೆ: ದಿಡಗಿನ ಫಾಲ್ಸ್‌ ಸೌಂದರ್ಯ ಸವಿಯಲು ಬೇಕಿದೆ ಸೂಕ್ತ ರಸ್ತೆ ವ್ಯವಸ್ಥೆ

author img

By

Published : May 22, 2022, 11:11 AM IST

Updated : May 22, 2022, 11:57 AM IST

There is no proper road to go didagina Falls in bagalakote
ಧುಮ್ಮಿಕ್ಕಿ ಹರಿಯುತ್ತಿರುವ ದಿಡಗಿನ ಫಾಲ್ಸ್​ಗೆ ಹೋಗಲು ಇಲ್ಲ ಸೂಕ್ತ ರಸ್ತೆ

ಗುಳೇದಗುಡ್ಡ ಬಳಿಯ ಕೋಟೆಕಲ್ಲ ಗ್ರಾಮದ ಬೆಟ್ಟದಲ್ಲಿ ಹಾಲ್ನೊರೆಯಂತೆ ಬೀಳುತ್ತಿರುವ ಜಲಪಾತ ಕಣ್ಣಿಗೆ ಹಬ್ಬ. ಆದರೆ ಇಲ್ಲಿಗೆ ಹೋಗುವುದೇ ಹರಸಾಹಸದ ಕೆಲಸವಾಗಿದೆ. ರಸ್ತೆ ಸಮಸ್ಯೆ ಫಾಲ್ಸ್​ಗೆ ಹೋಗಲು ಅಡ್ಡಿಯಾಗಿದೆ.

ಬಾಗಲಕೋಟೆ: ಕಳೆದ ಮೂರ್ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಗುಳೇದಗುಡ್ಡ ಬಳಿಯ ಕೋಟೆಕಲ್ಲ ಗ್ರಾಮದ ಬೆಟ್ಟದಲ್ಲಿರುವ‌ ದಿಡಗಿನ ಫಾಲ್ಸ್ ಧುಮ್ಮಿಕ್ಕಿ ಹರಿಯುತ್ತಿದೆ. ಪ್ರಕೃತಿಯ ಈ ರಮಣೀಯ ಸೌಂದರ್ಯವನ್ನು ಬಾಗಲಕೋಟೆ ಮಂದಿ ಕಣ್ತುಂಬಿಕೊಳ್ಳುತ್ತಿದ್ದಾರೆ.


ಹಾಲ್ನೊರೆಯಂತೆ ಬೀಳುತ್ತಿರುವ ಜಲಪಾತ ಕಣ್ಣಿಗೆ ಹಬ್ಬ. ಆದರೆ ಇಲ್ಲಿಗೆ ಹೋಗುವುದೇ ಹರಸಾಹಸದ ಕೆಲಸವಾಗಿದೆ. ರಸ್ತೆ ಸಮಸ್ಯೆ ಫಾಲ್ಸ್​ಗೆ ಹೋಗಲು ಅಡ್ಡಿಯಾಗಿದೆ. ಇಲ್ಲಿಗೆ ತಲುಪಬೇಕೆಂದರೆ ಗುಳೇದಗುಡ್ಡ ಬೆಟ್ಟದ ಮೇಲೆ ಹೋಗಬೇಕು ಇಲ್ಲವೇ ಕೋಟೆಕಲ್ಲ ಗ್ರಾಮದಿಂದ ಬೆಟ್ಟದ ಮೇಲೆ ಸಾಗಬೇಕು. ವಾಹನಗಳಂತೂ ಹೋಗಲಾರವು. ಹೀಗಾಗಿ ಯುವಕರು ಕಲ್ಲುಮುಳ್ಳೆನ್ನದೇ ಹರಸಾಹಸ ಮಾಡಿ ಫಾಲ್ಸ್ ಕಡೆಗೆ ಧಾವಿಸುತ್ತಿದ್ದಾರೆ.

ಇದನ್ನೂ ಓದಿ: ಪೆಟ್ರೋಲ್-ಡೀಸೆಲ್ ಸುಂಕ ಇಳಿಕೆ ಕುರಿತು ಪರಿಶೀಲನೆ: ಸಿಎಂ ಬೊಮ್ಮಾಯಿ

ಕಾರು, ಬೈಕ್‌ಗಳು ತೆರಳಲು ಸುಗಮ ದಾರಿ ಮಾಡಿಕೊಟ್ಟರೆ ದಿಡಗಿನ ಫಾಲ್ಸ್‌ ಪ್ರವಾಸಿತಾಣವಾಗಿ ಬೆಳೆಯುತ್ತದೆ. ಪ್ರತಿ ವರ್ಷ ಮಳೆಗಾಲದಲ್ಲಿ ಫಾಲ್ಸ್ ಮೈದುಂಬಿ ಧುಮುಕುತ್ತದೆ. ಎರಡರಿಂದ ಮೂರು ದಿನಗಳ ಕಾಲ ಸತತ ಮಳೆಯಾದರೂ ಸಾಕು ಜಲಪಾತಕ್ಕೆ ವಿಶೇಷ ಕಳೆ ಬರುತ್ತದೆ. ಹಾಗಾಗಿ ಈ ಸ್ಥಳವನ್ನು ಅಭಿವೃದ್ಧಿಪಡಿಸುವತ್ತ ಸರ್ಕಾರ, ಪ್ರವಾಸೋದ್ಯಮ ಇಲಾಖೆ ಗಮನಹರಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

Last Updated :May 22, 2022, 11:57 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.