ETV Bharat / sports

ಟಿ20 ವಿಶ್ವಕಪ್​: ಸ್ಕಾಟ್ಲೆಂಡ್​ಗೆ 173 ರನ್​ಗಳ ಬೃಹತ್ ಟಾರ್ಗೆಟ್ ನೀಡಿದ ನ್ಯೂಜಿಲೆಂಡ್​​

author img

By

Published : Nov 3, 2021, 5:41 PM IST

scotland-need-173-runs-to-win-against-newzealand
ICC ವಿಶ್ವಕಪ್​​ ಟಿ20: ಸ್ಕಾಟ್ಲೆಂಡ್​ಗೆ 173 ರನ್​ಗಳ ಬೃಹತ್ ಟಾರ್ಗೆಟ್ ನೀಡಿದ ನ್ಯೂಜಿಲೆಂಡ್​​

ಈ ಪಂದ್ಯವನ್ನು ಗೆಲ್ಲಲೇಬೇಕಾದ ಒತ್ತಡದಲ್ಲಿರುವ ನ್ಯೂಜಿಲೆಂಡ್ ತಂಡ ಸ್ಕಾಟ್ಲೆಂಡ್​ಗೆ ಬೃಹತ್ ಮೊತ್ತದ ಗುರಿ ನೀಡಿದೆ.

ದುಬೈ: ಟಿ20 ವಿಶ್ವಕಪ್​ನ ಸೂಪರ್ 12 ಬಿ ಗುಂಪಿನ 32ನೇ ಪಂದ್ಯದಲ್ಲಿ ಸ್ಕಾಟ್ಲೆಂಡ್​​ ವಿರುದ್ಧ ಬಲಿಷ್ಠ ನ್ಯೂಜಿಲೆಂಡ್ ತಂಡ 172 ರನ್ ದಾಖಲಿಸಿತು. ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ಸ್ಕಾಟ್ಲೆಂಡ್ ತಂಡ ನ್ಯೂಜಿಲೆಂಡ್​ ಬ್ಯಾಟರ್‌ಗಳನ್ನು ಕಟ್ಟಿಹಾಕುವಲ್ಲಿ ವಿಫಲವಾಯಿತು.

ಆರಂಭದಿಂದಲೇ ಅಪಾಯಕಾರಿ ಬ್ಯಾಟಿಂಗ್​​​ಗೆ ಮುಂದಾದ ನ್ಯೂಜಿಲೆಂಡ್ ಪಡೆ ಪವರ್ ಪ್ಲೇನಲ್ಲಿ ಉತ್ತಮ ರನ್ ಕಲೆಹಾಕಿತು. ಆರಂಭಿಕ ಮಾರ್ಟಿನ್ ಗಪ್ಟಿಲ್ 56 ಎಸೆತದಲ್ಲಿ 7 ಸಿಕ್ಸರ್ 6 ಬೌಂಡರಿ ಸಿಡಿಸಿ ಬರೋಬ್ಬರಿ 93 ರನ್ ದಾಖಲಿಸಿದರು. ಇದಕ್ಕೂ ಮೊದಲು ಆರಂಭಿಕ ಡೇರಿಲ್ ಮಿಚೆಲ್ 13 ರನ್​ಗಳಿಸಿ ಬಹುಬೇಗ ವಿಕೆಟ್ ಒಪ್ಪಿಸಿದರು. ಅಂತಿಮವಾಗಿ 20 ಓವರ್ ಮುಕ್ತಾಯಕ್ಕೆ 5 ವಿಕೆಟ್ ಕಳೆದುಕೊಂಡು ತಂಡ 172ರನ್ ಪೇರಿಸಿತು.

ಸ್ಕಾಟ್ಲೆಂಡ್ ಪರ ಬ್ರಾಡ್ಲಿ ವೀಲ್, ಸಫ್ಯಾನ್ ಷರೀಫ್ ತಲಾ 2 ವಿಕೆಟ್​ ಪಡೆದರೆ ಮಾರ್ಕ್ ವ್ಯಾಟ್ ಒಂದು ವಿಕೆಟ್ ಪಡೆದರು.

ಇದನ್ನೂ ಓದಿ: ಐಸಿಸಿ ಟಿ20 ರ‍್ಯಾಂಕಿಂಗ್‌: ಬ್ಯಾಟಿಂಗ್‌ನಲ್ಲಿ ಬಾಬರ್‌ಗೆ ಅಗ್ರಸ್ಥಾನ, ಹಸರಂಗ ನಂ1 ಬೌಲರ್‌, ಕೊಹ್ಲಿ ಯಥಾಸ್ಥಿತಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.