ETV Bharat / sports

ಟಿ20 ವಿಶ್ವಕಪ್: ನ್ಯೂಜಿಲ್ಯಾಂಡ್​ ವಿರುದ್ಧ ಸ್ಕಾಟ್ಲೆಂಡ್​ಗೆ ವಿರೋಚಿತ ಸೋಲು

author img

By

Published : Nov 3, 2021, 7:36 PM IST

ನ್ಯೂಜಿಲ್ಯಾಂಡ್​ ವಿರುದ್ಧ ಸ್ಕಾಟ್ಲೆಂಡ್​ಗೆ ವಿರೋಚಿತ ಸೋಲು
ನ್ಯೂಜಿಲ್ಯಾಂಡ್​ ವಿರುದ್ಧ ಸ್ಕಾಟ್ಲೆಂಡ್​ಗೆ ವಿರೋಚಿತ ಸೋಲು

ಪಂದ್ಯದ ಅಂತಿಮ ಹಂತದಲ್ಲಿ ಸ್ಟಾಟ್ಲೆಂಡ್‌ನ ಕ್ರಿಸ್ ಗ್ರೀವ್ಸ್ (8)*, ಮೈಕೆಲ್ ಲೀಸ್ಕ್ (42)* ಅಬ್ಬರದ ಬ್ಯಾಟಿಂಗ್​ ಮಾಡಿದರು. ಆದರೂ ತಂಡಕ್ಕೆ ಗೆಲುವು ತಂದುಕೊಡುವಲ್ಲಿ ವಿಫಲರಾದರು.

ದುಬೈ: ಟಿ20 ವಿಶ್ವಕಪ್ ಸೂಪರ್ 12 ಬಿ ಗುಂಪಿನ 32ನೇ ಪಂದ್ಯದಲ್ಲಿ ಸ್ಕಾಟ್ಲೆಂಡ್​​ ವಿರುದ್ಧ ಬಲಿಷ್ಠ ನ್ಯೂಜಿಲ್ಯಾಂಡ್​​​ ತಂಡ 16 ರನ್​ಗಳ ಭರ್ಜರಿ ಜಯ ಸಾಧಿಸಿದೆ.

ಟಾಸ್​ ಸೋತು ಬ್ಯಾಟಿಂಗ್​ ಮಾಡಿದ್ದ ನ್ಯೂಜಿಲ್ಯಾಂಡ್​​​ ನಿಗದಿತ 20 ಓವರ್​ಗಳಲ್ಲಿ 172 ರನ್​​ ದಾಖಲಿಸಿತ್ತು. ಈ ಮೊತ್ತವನ್ನು ಬೆನ್ನಟ್ಟಿದ್ದ ಸ್ಕಾಟ್ಲೆಂಡ್​​ 20 ಓವರ್​ಗಳಲ್ಲಿ 5 ವಿಕೆಟ್​​ ಕಳೆದುಕೊಂಡು 156 ರನ್​ ಗಳಿಸಲಷ್ಟೇ ಶಕ್ತವಾಯಿತು.

ಸ್ಕಾಟ್ಲೆಂಡ್​ ಪರ ಓಪನರ್​ ಆಗಿ ಕಣಕ್ಕಿಳಿದ ಜಾರ್ಜ್ ಮುನ್ಸೆ, ಕೈಲೀಟ್ಜರ್ ಮೊದಲ ವಿಕೆಟ್​ಗೆ 21 ರನ್​ಗಳ ಜೊತೆಯಾಟವಾಡಿದರು. ಕೈಲೀಟ್ಜರ್​ 17 ರನ್​ ಗಳಿಸಿದಾಗ ಬೌಲ್ಟ್​​ಗೆ ಬಲಿಯಾದರು. ಜಾರ್ಜ್ ಮುನ್ಸೆ 22, ಮ್ಯಾಥ್ಯೂ ಕ್ರಾಸ್ 27, ರಿಚಿ ಬೆರಿಂಗ್ಟನ್ 20, ಕ್ಯಾಲಮ್ ಮ್ಯಾಕ್ಲಿಯೋಡ್ 12 ರನ್​ಗಳಿಸಿ ಔಟಾದರು.

ಅಂತಿಮ ಹಂತದಲ್ಲಿ ಕ್ರಿಸ್ ಗ್ರೀವ್ಸ್ (8)*, ಮೈಕೆಲ್ ಲೀಸ್ಕ್ (42)* ಅಬ್ಬರದ ಬ್ಯಾಟಿಂಗ್​ ಆಡಿದರು. ಆದರೂ ತಂಡಕ್ಕೆ ಗೆಲುವು ತಂದುಕೊಡುವಲ್ಲಿ ವಿಫಲರಾದರು. ಮೈಕೆಲ್ ಲೀಸ್ಕ್ ಈ ಇನ್ನಿಂಗ್ಸ್​​ನಲ್ಲಿ ಕೇವಲ 20 ಬೌಲ್​ಗಳಲ್ಲಿ 3 ಬೌಂಡರಿ, 3 ಸಿಕ್ಸರ್​ ನೆರವಿನಿಂದ 42 ರನ್​​ಗಳಿಸಿ ಅಜೆಯರಾಗುಳಿದರು. ಸ್ಕಾಟ್ಲೆಂಡ್​​ ಅಂತಿಮವಾಗಿ 20 ಓವರ್​ಗಳಲ್ಲಿ 5 ವಿಕೆಟ್​​ ಕಳೆದುಕೊಂಡು 156 ರನ್​ ಗಳಿಸಿತು.

ನ್ಯೂಜಿಲ್ಯಾಂಡ್​ ಪರ ಉತ್ತಮ ಬೌಲಿಂಗ್​ ಮಾಡಿದ ಟಿಮ್ ಸೌಥಿ 1 ಹಾಗೂ ಇಶ್ ಸೌಧಿ, ಟ್ರೆಂಟ್ ಬೌಲ್ಟ್ ತಲಾ 2 ವಿಕೆಟ್​ ಪಡೆದು ಮಿಂಚಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.