ETV Bharat / sports

Pro Kabaddi: ಪ್ರೋ ಕಬಡ್ಡಿ ಹೊಸ ಸೀಸನ್‌ಗೆ ಮುಹೂರ್ತ; ದೇಶದ 12 ನಗರಗಳಲ್ಲಿ ಪಂದ್ಯಾಟ

author img

By

Published : Aug 17, 2023, 3:38 PM IST

ಪ್ರೋ-ಕಬಡ್ಡಿ ಸೀಸನ್‌ 10
ಪ್ರೋ-ಕಬಡ್ಡಿ ಸೀಸನ್‌ 10

Pro Kabaddi Season 10: ಪ್ರೋ ಕಬಡ್ಡಿ 10ನೇ ಸೀಸನ್​ ಡಿಸೆಂಬರ್​ 2ರಿಂದ ದೇಶದ ವಿವಿಧ ನಗರಳಗಳಲ್ಲಿ ನಡೆಯಲಿದೆ.

ಮುಂಬೈ: 9 ಆವೃತ್ತಿಗಳ ಭರ್ಜರಿ ಯಶಸ್ಸಿನ ಬಳಿಕ 10ನೇ ಆವೃತ್ತಿಯ ಪ್ರೋ ಕಬಡ್ಡಿ ಲೀಗ್ ಡಿಸೆಂಬರ್ 2ರಿಂದ ಆರಂಭವಾಗಲಿದೆ. ಈ ಸಲದ ಟೂರ್ನಿ ದೇಶದ ಹನ್ನೆರಡು ನಗರಗಳಲ್ಲಿ ಹಂತಹಂತವಾಗಿ ನಡೆಯಲಿದೆ. ಲೀಗ್‌ನ ಎಲ್ಲಾ ತಂಡಗಳ ಅಭಿಮಾನಿಗಳು ತಮ್ಮ ನಗರಗಳಲ್ಲಿಯೇ ಸ್ಟಾರ್ ಆಟಗಾರರ ಪ್ರದರ್ಶನವನ್ನು ಕಣ್ತುಂಬಿಕೊಳ್ಳಬಹುದು.

ಪ್ರೋ ಕಬಡ್ಡಿ ಆಯೋಜಿಸುತ್ತಿರುವ ಮಾಶಲ್ ಸ್ಪೋರ್ಟ್ಸ್ ಮತ್ತು ಲೀಗ್‌ ಮುಖ್ಯಸ್ಥ ಹಾಗೂ ಲೀಗ್ ಆಯುಕ್ತ ಅನುಪಮ್ ಗೋಸ್ವಾಮಿ ಮಾತನಾಡಿ, "ಹತ್ತನೇ ಆವೃತ್ತಿಯನ್ನು ಆಯೋಜಿಸಲು ನಾವು ಉತ್ಸುಕರಾಗಿದ್ದೇವೆ. ಅದ್ಭುತ ಪ್ರಯಾಣದ ಭಾಗವಾಗಿದ್ದಕ್ಕಾಗಿ ನಾವು ನಮ್ಮ ಕ್ರೀಡಾಪಟುಗಳು ಮತ್ತು ಅಭಿಮಾನಿಗಳಿಗೆ ಕೃತಜ್ಞರಾಗಿರುತ್ತೇವೆ" ಎಂದರು.

ಪ್ರೋ ಕಬಡ್ಡಿ ಹೊಸ ಸೀಸನ್ನಿನ ಆಟಗಾರರ ಹರಾಜು ಪ್ರಕ್ರಿಯೆ ಸೆಪ್ಟೆಂಬರ್ 8-9ರಂದು ಮುಂಬೈನಲ್ಲಿ ನಡೆಯಲಿದೆ. ಮಾಶಲ್ ಸ್ಪೋರ್ಟ್ಸ್, ಡಿಸ್ನಿ ಸ್ಟಾರ್, ಅಮೆಚೂರ್ ಕಬಡ್ಡಿ ಫೆಡರೇಶನ್ ಆಫ್ ಇಂಡಿಯಾ (ಎಕೆಎಫ್‌ಐ) ಸಹಯೋಗದಲ್ಲಿ ಲೀಗ್ ಆಯೋಜಿಸಲ್ಪಡುತ್ತಿದೆ.

ಆ.7ರಂದು ಫ್ರಾಂಚೈಸಿಗಳು ರಿಟೈನ್​ ಆಟಗಾರರ ಪಟ್ಟಿ ಬಿಡುಗಡೆಗೊಳಿಸಿದ್ದವು. ತಂಡದಲ್ಲಿ ಉಳಿಸಿಕೊಂಡ ಎಲೀಟ್​ ಆಟಗಾರರು ಮತ್ತು ಯುವ ಆಟಗಾರರ ಪಟ್ಟಿ ಪ್ರಕಟಗೊಳಿಸಲಾಗಿತ್ತು. ಎಲೀಟ್ ರಿಟೈನ್ಡ್ ಪ್ಲೇಯರ್ಸ್ (ERP), ರಿಟೈನ್ಡ್ ಯೂತ್ ಪ್ಲೇಯರ್ಸ್ (RYP) ಮತ್ತು ಎಕ್ಸಿಸ್ಟಿಂಗ್ ನ್ಯೂ ಯೂತ್ ಪ್ಲೇಯರ್ಸ್ (ENYP) ವಿಭಾಗಗಳೂ ಸೇರಿ ಒಟ್ಟು 84 ಆಟಗಾರರನ್ನು ಫ್ರಾಂಚೈಸಿಗಳು ತಮ್ಮ ತಂಡಗಳಲ್ಲಿ ಉಳಿಸಿಕೊಂಡಿವೆ. ತಂಡಗಳ ರಿಟೈನ್​ ಅಟಗಾರರ ವಿವರ ಇಲ್ಲಿದೆ.

ಬೆಂಗಳೂರು ಬುಲ್ಸ್: ಭರತ್ (RYP), ನೀರಜ್ ನರ್ವಾಲ್ (ERP), ಅಮನ್ (ENYP), ಸೌರಭ್ ನಂದಾಲ್ (RYP) ಮತ್ತು ಯಶ್ ಹೂಡಾ (ENYP)

ದಬಾಂಗ್ ಡೆಲ್ಲಿ: ವಿಜಯ್ (ENYP), ಆಶೀಶ್ ನರ್ವಾಲ್ (ENYP), ಮಂಜೀತ್ (ENYP), ಸೂರಜ್ ಪನ್ವಾರ್ (ENYP) ಮತ್ತು ಕೆ.ಸಿ.ನವೀನ್ ಕುಮಾರ್ (RYP)

ಹರಿಯಾಣ ಸ್ಟೀಲರ್ಸ್: ವಿನಯ್ (RYP), ಕೆ.ಪ್ರಪಂಜನ್ (ERP), ಮೋಹಿತ್ (RYP), ಜೈದೀಪ್ (RYP)

ಗುಜರಾತ್ ಜೈಂಟ್ಸ್: ಮಂಜು (ERP), ಸೋನು (ERP), ರಾಕೇಶ್ (RYP), ಪ್ರತೀಕ್ ದಹಿಯಾ (ENYP) ಮತ್ತು ರೋಹನ್ ಸಿಂಗ್ (ENYP)

ಪಾಟ್ನಾ ಪೈರೇಟ್ಸ್: ಸಚಿನ್ (ERP), ನೀರಜ್ ಕುಮಾರ್ (ERP), ತ್ಯಾಗರಾಜನ್ ಯುವರಾಜ್ (ENYP), ನವೀನ್ ಶರ್ಮಾ (ENYP), ಮನೀಶ್ (RYP), ಅನುಜ್ ಕುಮಾರ್ (ENYP) ಮತ್ತು ರಂಜಿತ್ ವೆಂಕಟರಮಣ ನಾಯ್ಕ್

ಬೆಂಗಾಲ್ ವಾರಿಯರ್ಸ್ : ವೈಭಾವ್ ಭಾವುಸಾಹೇಬ್ ಗರ್ಜೆ (ENYP), ಸುಯೋಗ್ ಬಬನ್ ಗಾಯ್ಕರ್ (ENYP), ಆರ್.ಗುಹಾನ್ (ENYP) ಮತ್ತು ಪರ್ಶಾಂತ್ ಕುಮಾರ್ (ENYP)

ತಮಿಳ್ ತಲೈವಾಸ್: ಸಾಗರ್ (RYP), ಹಿಮಾಂಶು (RYP), ಅಜಿಂಕ್ಯ ಅಶೋಕ್ ಪವಾರ್ (ERP), ಸಾಹಿಲ್ (RYP), ಮೋಹಿತ್ (RYP), ಎಂ.ಅಭಿಷೇಕ್ (RYP) ಮತ್ತು ಆಶಿಶ್ (RYP)

ಜೈಪುರ್ ಪಿಂಕ್ ಪ್ಯಾಂಥರ್ಸ್: ಸುನಿಲ್ ಕುಮಾರ್ (ERP), ಅಜಿತ್ ವಿ ಕುಮಾರ್ (ERP), ರೆಜಾ ಮಿರ್ಬಾಗೆರಿ (ERP), ಭವಾನಿ ರಜಪೂತ್ (ERP), ಅರ್ಜುನ್ ದೇಶ್ವಾಲ್ (ERP) ಮತ್ತು ಸಾಹುಲ್ ಕುಮಾರ್ (ERP)

ತೆಲುಗು ಟೈಟಾನ್ಸ್: ರಜನೀಶ್ (RYP), ಮೋಹಿತ್ (ENYP), ಪರ್ವೇಶ್ ಭೈನ್ಸ್ವಾಲ್ (ERP), ವಿನಯ್ (ENYP) ಮತ್ತು ನಿತಿನ್ (ENYP)

ಪುಣೇರಿ ಪಲ್ಟನ್: ಗೌರವ್ ಖತ್ರಿ (ERP), ಅಭಿನೇಶ್ ನಟರಾಜನ್ (ERP), ಪಂಕಜ್ ಮೋಹಿತೆ (RYP), ಅಸ್ಲಾಂ ಮುಸ್ತಫಾ ಇನಾಂದಾರ್ (RYP), ಸಂಕೇತ್ ಸಾವಂತ್ (RYP), ಮೋಹಿತ್ ಗೋಯತ್ (RYP), ಬಾದಲ್ ತಕ್ದೀರ್ ಸಿಂಗ್ (ENYP), ಆದಿತ್ಯ ತುಷಾರ್ ಶಿಂಧೆ (ENYP), ಆಕಾಶ್ ಸಂತೋಷ್ ಶಿಂಧೆ (RYP),

ಯು.ಪಿ.ಯೋಧಾಸ್: ಮಹಿಪಾಲ್ (ENYP), ಸಮಿತ್ (RYP), ನಿತೇಶ್ ಕುಮಾರ್ (ERP), ಸುರೇಂದರ್ ಗಿಲ್ (RYP), ಅಶು ಸಿಂಗ್ (RYP), ಅನಿಲ್ ಕುಮಾರ್ (ENYP) ಮತ್ತು ಪರ್ದೀಪ್ ನರ್ವಾಲ್ (ERP)

ಯು ಮುಂಬಾ: ಜೈ ಭಗವಾನ್ (ERP), ಸುರಿಂದರ್ ಸಿಂಗ್ (ERP), ಹೈದರಾಲಿ ಇಕ್ರಮಿ (ERP), ಶಿವಂ (RYP), ರಿಂಕು (ERP), ಪ್ರಣಯ್ ವಿನಯ್ ರಾಣೆ (ENYP), ರೂಪೇಶ್ (ENYP), ಸಚಿನ್ (ENYP) ಮತ್ತು ಶಿವಾಂಶ್ ಠಾಕೂರ್ (ENYP)

ಇದನ್ನೂ ಓದಿ: ಭಾರತ ತಂಡದ ನಾಲ್ಕನೇ ಕ್ರಮಾಂಕದ ಬಿಕ್ಕಟ್ಟು: ಈ ಆಟಗಾರನನ್ನು ಆಡಿಸಲು ರವಿಶಾಸ್ತ್ರಿ ಸಲಹೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.