ETV Bharat / sports

ಐಪಿಎಲ್​ ಬಳಿಕ ಇದೀಗ ಪ್ರೊ ಕಬ್ಬಡ್ಡಿಯಲ್ಲೂ ಮಹಿಳಾ ತಂಡ

author img

By

Published : Mar 2, 2023, 4:09 PM IST

Etv Bharatಐಪಿಎಲ್​ ಬಳಿಕ ಇದೀಗ ಪ್ರೊ ಕಬ್ಬಡ್ಡಿಯಲ್ಲೂ ಮಹಿಳಾ ತಂಡ
Etv Bharatಐಪಿಎಲ್​ ಬಳಿಕ ಇದೀಗ ಪ್ರೊ ಕಬ್ಬಡ್ಡಿಯಲ್ಲೂ ಮಹಿಳಾ ತಂಡ

ಮಾರ್ಚ್​​ 4ರಂದು ಮೊದಲ ಬಾರಿಗೆ ವುಮೆನ್​ ಪ್ರೀಮಿಯರ್​ ಲೀಗ್​ ಆಡಲು ಮಹಿಳಾ ಕ್ರೀಡಾಪಟುಗಳು ಸಜ್ಜಾಗಿದ್ದಾರೆ. ಈ ಯಶಸ್ಸಿನ ಬೆನ್ನಲ್ಲೇ ಇದೀಗ ಪ್ರೊ ಕಬಡ್ಡಿಯಲ್ಲಿ ಮಹಿಳಾ ತಂಡ ಆರಂಭಕ್ಕೆ ಮುನ್ನುಡಿ ಬರೆಯಲಾಗಿದೆ.

ನವದೆಹಲಿ: ಮಹಿಳಾ ಐಪಿಎಲ್​ ತಂಡದ ಖರೀದಿ ಮುಗಿದಿದ್ದು, ಮಾರ್ಚ್​ 4ರಿಂದ ಮಹಿಳಾ ಕ್ರೀಡಾಪಟುಗಳು ಐಪಿಎಲ್ ಆಡುವ​ ಮೂಲಕ ಜಗತ್ತಿನ ಎಲ್ಲರ ಗಮನ ಸೆಳೆಯಲು ಮುಂದಾಗಿದ್ದಾರೆ. ಈ ಯಶಸ್ಸಿನ ಬೆನ್ನಲ್ಲೇ ಇದೀಗ ಮೊದಲ ಬಾರಿ ಕಬಡ್ಡಿಯಲ್ಲೂ ಮಹಿಳಾ ತಂಡ ರಚನೆಗೆ ಮುಂದಾಗಲಾಗಿದೆ. ಈಗಾಗಲೇ ಪುರುಷ ಪ್ರೋ ಕಬಡ್ಡಿ ದೇಶದಲ್ಲಿ ಅನೇಕರ ಆಕರ್ಷಣೆಯಾಗಿದೆ. ಈ ಹಿನ್ನೆಲೆ ಈಗ ಇದರಲ್ಲೂ ಕೂಡ ಮಹಿಳಾ ಪ್ರೊ ಕಬಡ್ಡಿ ಲೀಗ್​ ಆರಂಭಿಸುವ ಚಿಂತನೆ ನಡೆಸಲಾಗಿದೆ. ಈ ಸಂಬಂಧ ದೇಶದಲ್ಲಿ ಮಹಿಳಾ ವೃತ್ತಿಪರ ಫ್ರಾಂಚೈಸಿಗಳನ್ನು ಉದ್ಘಾಟಿಸುವ ಸಾಧ್ಯತೆ ಕುರಿತು ಕೂಡ ಮಾತುಕತೆಗಳು ನಡೆಯುತ್ತಿದೆ.

ಈ ಸಂಬಂಧ ಮಾತನಾಡಿರುವ ಪ್ರೋ ಕಬಡ್ಡಿ ಲೀಗ್​ ಸಂಘಟಕರಾಗಿರುವ ಮಶಾಲ್​ ಸ್ಪೋರ್ಟ್ಸ್​​, ಇದೀಗ 10ನೇ ವರ್ಷ ಯಶಸ್ವಿಯಾಗಿ ಪ್ರೊ ಕಬಡ್ಡಿ ನಡೆಯುತ್ತಿದೆ. ಇದೀಗ ಅಮೆಚೂರು ಕಬಡ್ಡಿ ಫೆಡರೇಷನ್​ ಆಫ್​ ಇಂಡಿಯಾ ಮತ್ತು ಇಂಟರ್​ನ್ಯಾಷನಲ್​ ಕಬ್ಬಡಿ ಫೆಡರೇಷನ್​ (ಐಕೆಎಫ್​​) ಸಹಯೋಗದಿಂದ ಮಹಿಳಾ ಲೀಗ್​ ಉದ್ಘಾಟಿಸಲು ಯೋಜನೆ ನಡೆಸಲಾಗುತ್ತಿದೆ ಎಂದಿದ್ದಾರೆ. ಮಹಿಳಾ ಐಪಿಎಲ್​ನಿಂದ ಉತ್ಸಾಹಗೊಂಡು ಇದೀಗ ಮಹಿಳಾ ತಂಡ ರಚಿಸುವ ಚಿಂತನೆ ನಡೆದಿದೆ. ಪುರುಷರ ಕಬಡ್ಡಿಯಲ್ಲಿ ಯಶಸ್ಸು ಕಂಡಿದ್ದು, ಇದೇ ಯಶಸ್ಸಿನ ಆಧಾರದ ಮೇಲೆ ಮಹಿಳಾ ವೃತ್ತಿಪರ ಕಬಡ್ಡಿ ಲೀಗ್​ ಅನ್ನು ರಚಿಸುವುದು ನಮ್ಮ ಯೋಜನೆಯಾಗಿದೆ ಎಂದು ಮಾಶಲ್​ ಸ್ಪೋರ್ಟ್ಸ್ ಸಿಇಒ​ ಮತ್ತು ಪಿಕೆಲ್​ ಆಯುಕ್ತರಾಗಿರುವ ಅನೂಪಮ್​ ಗೋಸ್ವಾಮಿ ತಿಳಿಸಿದ್ದಾರೆ.

ಎಕೆಎಫ್​ಯು ಸೇರಿದಂತೆ ಅಂತಾರಾಷ್ಟ್ರೀಯ ಕಬಡ್ಡಿ ಫೆಡರೇಷನ್​ ಸೇರಿದಂತೆ ನಮ್ಮ ಹಲವು ಸ್ಟೇಕ್​ ಹೋಲ್ಡರ್​ ಜೊತೆ ಈ ಮಹಿಳಾ ಲೀಗ್​ ಕುರಿತು ಕಾರ್ಯ ನಿರ್ವಹಿಸುವ ಸಂಬಂಧ ಮಾತುಕತೆ ನಡೆಸಲಾಗುವುದು ಎಂದಿದ್ದಾರೆ. ಟೆಸ್ಟ್​ ಟೂರ್ನಮೆಂಟ್​, ಮಹಿಳಾ ಕಬಡ್ಡಿ ಸವಾಲಿನ ಕೆಲಸವಾಗಿದೆ. ಈಗಾಗಲೇ ಫೈರ್​ಬರ್ಡ್​​, ಐಎಸ್​ದಿವಾಸ್​ ಮತ್ತು ಸ್ಟ್ರೋಮ್​ಕ್ವೀನ್ಸ್​ 2016ರಲ್ಲಿಯೇ ಸಂಘಟನೆ ಆಗಿದೆ.

ಆಟಗಾರರ ಕನಸು ನನಸು: ಇನ್ನು ಈ ಮಹಿಳಾ ಕಬಡ್ಡಿ ತಂಡದ ರಚನೆ ಕುರಿತು ಮಾತನಾಡಿರುವ ಭಾರತದ ತಂಡದ ಮಾಜಿ ನಾಯಕಿ ವಿ ತೇಜಸ್ವಿನಿ ಬಾಯಿ, ಮಹಿಳಾ ಲೀಗ್​ ಕಾರ್ಯ ರೂಪಕ್ಕೆ ಬಂದರೆ, ದೊಡ್ಡ ಕನಸು ನೆರವೇರಲಿದೆ ಎಂದಿದ್ದಾರೆ. 2014ರಲ್ಲಿ ಪ್ರೊ ಕಬಡ್ಡಿ ಆರಂಭವಾದಾಗ, ಮಹಿಳಾ ಕ್ರೀಡಾಪಟುಗಳು ಕೂಡ ತಮ್ಮದೇ ಆದ ವೃತ್ತಿಪರ ತಂಡಗಳು ಆಗುತ್ತವೆ ಎಂಬ ಆಸೆಯನ್ನು ಹೊಂದಿದ್ದರು ಎಂದು ಸ್ಟ್ರೋಮ್​ ಕ್ವೀನ್ಸ್​ನ ನಾಯಕಿ ತೇಜಸ್ವಿನಿ ತಿಳಿಸಿದ್ದಾರೆ.

ಇದೀಗ ಮಹಿಳಾ ಪಿಕೆಎಲ್​ ಆರಂಭವಾಗುವ ಮೂಲಕ ಪ್ರತಿಯೊಬ್ಬ ಮಹಿಳಾ ಭಾರತೀಯ ಕಬಡ್ಡಿ ಆಟಗಾರ್ತಿ ಜೊತೆಗೆ ಇತರ ದೇಶಗಳ ಆಟಗಾರ್ತಿಯರ ಕನಸು ನಿಜವಾಗಲಿದೆ ಎಂದು ಅರ್ಜುನ ಪ್ರಶಸ್ತಿ ವಿಜೇತೆ ತೇಜಸ್ವಿನಿ ತಿಳಿಸಿದ್ದಾರೆ. ಭಾರತೀಯ ಪುರಷ ಕಬಡ್ಡಿ ಆಟಗಾರರು ಕೂಡ ಇದೇ ರೀತಿಯ ಭಾವನೆ ಹೊಂದಿದ್ದಾರೆ. ಪ್ರೊ ಕಬಡ್ಡಿ ಅನೇಕ ದೇಶದ ಅನೇಕ ಕಬಡ್ಡಿ ಆಟಗಾರರ ಜೀವನ ಮತ್ತು ದೃಷ್ಟಿಕೋನ ಬದಲಾಯಿಸಿದೆ ಎಂದು ರಾಷ್ಟ್ರೀಯ ಕಬಡ್ಡಿ ಮಾಹಿ ನಾಯಕ ಅಜಯ್​ ಠಾಕೂರ್​ ತಿಳಿಸಿದ್ದಾರೆ.

ಪ್ರೊ ಕಬಡ್ಡಿಯ ಗುಣಮಟ್ಟ ಮತ್ತು ಜನಪ್ರಿಯತೆಯಿಂದಾಗಿ ಇಂದು ಕಬಡ್ಡಿ ಆಟಗಾರರು ಹೆಮ್ಮೆ ಮತ್ತು ಗೌರವವನ್ನು ಪಡೆಯುತ್ತಿದ್ದಾರೆ. ಇದೇ ರೀತಿ ಮಹಿಳಾ ಆಟಗಾರರು ಕೂಡ ಪಿಕೆಎಲ್​ ಮೂಲಕ ಸಮಾನ ಅವಕಾಶವನ್ನು ಪಡೆಯುತ್ತಾರೆ ಎಂಬ ಖಾತ್ರಿ ಇದೆ ಎಂದು ಕಬ್ಬಡಿ ಪಟು ಪ್ರದೀಪ್​ ನರ್ವಾಲ್​ ತಿಳಿಸಿದ್ದಾರೆ.

ಇದನ್ನೂ ಓದಿ: ಮಹಿಳಾ ಪ್ರೀಮಿಯರ್ ಲೀಗ್: ಮುಂಬೈ ಇಂಡಿಯನ್ಸ್‌ಗೆ ಹರ್ಮನ್‌ಪ್ರೀತ್ ಕೌರ್ ನಾಯಕಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.