ETV Bharat / sports

ಸಿಡ್ನಿಯಲ್ಲಿ ಯಾರಿಗೆ ಫೈನಲ್​ ಟಿಕೆಟ್​.. ಕಿವೀಸ್​, ಪಾಕ್​ ಮಧ್ಯೆ ನಾಳೆ ಮೊದಲ ಸೆಮಿಫೈನಲ್​

author img

By

Published : Nov 8, 2022, 5:48 PM IST

ಎದ್ದುಬಿದ್ದು ಸೆಮಿಫೈನಲ್​ ತಲುಪಿರುವ ಪಾಕಿಸ್ತಾನ, ಬಲಿಷ್ಠ ನ್ಯೂಜಿಲ್ಯಾಂಡ್​ ಎದುರು ನಾಳೆ ಸಿಡ್ನಿಯಲ್ಲಿ ಫೈನಲ್​ ಟಿಕೆಟ್​ಗಾಗಿ ಸೆಣಸಾಡಲಿದೆ.

t20-world-cup-semifinal-1
ಸಿಡ್ನಿಯಲ್ಲಿ ಯಾರಿಗೆ ಫೈನಲ್​ ಟಿಕೆಟ್

ಸಿಡ್ನಿ(ಆಸ್ಟ್ರೇಲಿಯಾ): ಆರಂಭಿಕ ಮೊದಲೆರಡು ಪಂದ್ಯಗಳಲ್ಲಿ ಸೋತು ಟೂರ್ನಿಯಿಂದ ಹೊರಬೀಳುವ ಆತಂಕದಲ್ಲಿದ್ದ ಪಾಕಿಸ್ತಾನ, ಪುಟಿದೆದ್ದು ನಂತರದ ಎಲ್ಲ ಮ್ಯಾಚ್​ಗಳಲ್ಲಿ ಗೆದ್ದು ಸೆಮಿಫೈನಲ್​ ತಲುಪಿದೆ. ಗ್ರೂಪ್​ 1 ರ ಅಗ್ರಸ್ಥಾನಿ ನ್ಯೂಜಿಲ್ಯಾಂಡ್​ ವಿರುದ್ಧ ಸಿಡ್ನಿಯಲ್ಲಿ ನವೆಂಬರ್​ 9 ರಂದು (ನಾಳೆ) ಮುಖಾಮುಖಿಯಾಗಲಿದೆ.

ಬಾಬರ್ ಅಜಮ್ ನೇತೃತ್ವದ ತಂಡ ಮುಂಚೂಣಿ ಪಂದ್ಯಗಳಲ್ಲಿ ಭಾರತ ಮತ್ತು ಜಿಂಬಾಬ್ವೆ ವಿರುದ್ಧ ಸೋತಿತ್ತು. ಇದು ತಂಡದ ಆಯ್ಕೆ ಮತ್ತು ಆಟದ ಮೇಲೆ ಭಾರೀ ಟೀಕೆ ಕೇಳಿ ಬಂದಿತ್ತು. ಬಳಿಕ ನೆದರ್​ಲ್ಯಾಂಡ್ಸ್​, ದಕ್ಷಿಣ ಆಫ್ರಿಕಾ, ಬಾಂಗ್ಲಾದೇಶ ವಿರುದ್ಧ ಗೆಲುವು ಸಾಧಿಸಿ ಭಾರತದ ಜೊತೆಗೆ ಗ್ರೂಪ್​ 2 ರ ನಾಲ್ಕರಘಟ್ಟಕ್ಕೆ ಪ್ರವೇಶ ಪಡೆದಿದೆ.

ಪಾಕ್​ನ ಅಗ್ರ ಬ್ಯಾಟರ್​ಗಳ ವೈಫಲ್ಯ: ಪಾಕಿಸ್ತಾನ ತಂಡ ಬೌಲಿಂಗ್​ನಲ್ಲಿ ಬಿಗಿ ಹಿಡಿತ ಸಾಧಿಸಿದರೂ, ಅಗ್ರ ಬ್ಯಾಟರ್​ಗಳ ವೈಫಲ್ಯ ತಂಡಕ್ಕೆ ತಲೆನೋವಾಗಿದೆ. ಹೊಡಿಬಡಿ ಆಟಗಾರ ಮೊಹಮ್ಮದ್ ರಿಜ್ವಾನ್ ಮತ್ತು ನಾಯಕ ಬಾಬರ್ ಅಜಮ್‌ ಬ್ಯಾಟಿಂಗ್​ನಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿಲ್ಲ. ರನ್​ಗಾಗಿ ಪರದಾಡುತ್ತಿರುವ ಇಬ್ಬರೂ ಸೆಮೀಸ್​ನಲ್ಲಿ ಮಿಂಚಿದರೆ ತಂಡಕ್ಕೆ ನೆರವಾಗಲಿದೆ.

ಆಲ್​ರೌಂಡರ್​​ಗಳಾದ ಇಫ್ತಿಕರ್ ಅಹ್ಮದ್, ಶಾದಾಬ್ ಖಾನ್ ಮಧ್ಯಮ ಕ್ರಮಾಂಕದಲ್ಲಿ ತಂಡಕ್ಕೆ ನೆರವಾಗುತ್ತಿದ್ದರೆ, ಶಾನ್ ಮಸೂದ್, ಮೊಹಮ್ಮದ್ ಹ್ಯಾರಿಸ್ ಬ್ಯಾಟ್​ ಝಳಪಿಸಬೇಕಿದೆ. ಬೌಲಿಂಗ್​ನಲ್ಲಿ ಮತ್ತೆ ಲಯ ಕಂಡುಕೊಂಡಿರುವ ಶಾಹೀನ್ ಆಫ್ರಿದಿ ಕಳೆದ ಬಾಂಗ್ಲಾದೇಶ ವಿರುದ್ಧ 4 ವಿಕೆಟ್​ ಕಿತ್ತು ಮಿಂಚಿದ್ದರು. ರೌಫ್​ ಹ್ಯಾರೀಸ್​, ನಸೀಮ್ ಶಾ ವೇಗದ ಬೌಲಿಂಗ್ ನಿಭಾಯಿಸಲಿದ್ದಾರೆ.

ನ್ಯೂಜಿಲ್ಯಾಂಡ್​ಗೆ ಫೈನಲ್​ ಗುರಿ: ಬ್ಯಾಟಿಂಗ್​, ಬೌಲಿಂಗ್​ನಲ್ಲಿ ಮಿಂಚು ಹರಿಸಿರುವ ನ್ಯೂಜಿಲ್ಯಾಂಡ್​ ತಂಡ ಫೈನಲ್​ ಕನಸು ಕಾಣುತ್ತಿದೆ. ಕೇನ್ ವಿಲಿಯಮ್ಸನ್ ನೇತೃತ್ವದ ಕಿವೀಸ್​ ಪಡೆ ಗುಂಪು ಹಂತದಲ್ಲಿ ಆಡಿದ 4 ಪಂದ್ಯಗಳಲ್ಲಿ ಮೂರು ಗೆದ್ದು 7 ಅಂಕ ಗಳಿಸಿ (1 ಪಂದ್ಯ ಮಳೆಯಿಂದ ರದ್ದು) ಅಗ್ರಸ್ಥಾನಿಯಾಗಿ ಸೆಮೀಸ್​ಗೆ ಬಂದಿದೆ.

ಆರಂಭಿಕ ಫಿನ್ ಅಲೆನ್ ಸ್ಫೋಟಕ ಆರಂಭ ನೀಡಿದರೆ, ಮಧ್ಯಮ ಕ್ರಮಾಂಕದಲ್ಲಿ ಗ್ಲೆನ್ ಫಿಲಿಪ್ಸ್ ಆಧಾರ ಸ್ತಂಭವಾಗಿದ್ದಾರೆ. ಅಲೆನ್ 4 ಇನ್ನಿಂಗ್ಸ್‌ಗಳಲ್ಲಿ ಕೇವಲ 91 ರನ್ ಗಳಿಸಿದ್ದರೂ, 189.58 ರ ಸ್ಟ್ರೈಕ್​ರೇಟ್ ಹೊಂದಿದ್ದಾರೆ. ತಾನು ಅಪಾಯಕಾರಿ ಬ್ಯಾಟರ್ ಎಂಬುದನ್ನು ತೋರಿಸಿಕೊಟ್ಟಿದ್ದಾರೆ.

ಐರ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಅರ್ಧಶತಕ ಸಿಡಿಸಿದ ನಾಯಕ ವಿಲಿಯಮ್ಸನ್ ಬ್ಯಾಟಿಂಗ್‌ ಲಯಕ್ಕೆ ಮರಳಿದ್ದಾರೆ. ಡೆವೊನ್ ಕಾನ್ವೇ, ಡೇರಿಲ್ ಮಿಚೆಲ್ ಮತ್ತು ಜಿಮ್ಮಿ ನೀಶಂ ಉತ್ತಮ ಫಾರ್ಮ್​ನಲ್ಲಿದ್ದಾರೆ. ಬೌಲಿಂಗ್​ನಲ್ಲಿ ಟ್ರೆಂಟ್ ಬೌಲ್ಟ್‌, ಟಿಮ್ ಸೌಥಿ, ಲೂಕಿ ಫರ್ಗ್ಯುಸನ್ ವೇಗದ ಬೌಲಿಂಗ್ ನಿಭಾಯಿಸಿದರೆ, ಮಿಚೆಲ್ ಸ್ಯಾಂಟ್ನರ್, ಇಶ್ ಸೋಧಿ ಸ್ಪಿನ್​ ದಾಳಿ ನಡೆಸಲು ಸಜ್ಜಾಗಿದ್ದಾರೆ.

ಸಂಭಾವ್ಯ ತಂಡಗಳು- ಪಾಕಿಸ್ತಾನ: ಬಾಬರ್ ಅಜಂ (ನಾಯಕ), ಶಾದಾಬ್ ಖಾನ್, ಆಸಿಫ್ ಅಲಿ, ಫಖರ್ ಜಮಾನ್, ಹೈದರ್ ಅಲಿ, ಹಾರಿಸ್ ರೌಫ್, ಇಫ್ತಿಕರ್ ಅಹ್ಮದ್, ಖುಷ್ದಿಲ್ ಶಾ, ಮೊಹಮ್ಮದ್ ಹಸ್ನೇನ್, ಮೊಹಮ್ಮದ್ ನವಾಜ್, ಮೊಹಮ್ಮದ್ ರಿಜ್ವಾನ್, ಮೊಹಮ್ಮದ್ ವಾಸಿಮ್, ನಸೀಮ್ ಶಾ, ಶಾಹೀನ್ ಶಾ ಅಫ್ರಿದಿ, ಶಾನ್ ಮಾಸ್.

ನ್ಯೂಜಿಲ್ಯಾಂಡ್​​ : ಕೇನ್ ವಿಲಿಯಮ್ಸನ್ (ನಾಯಕ), ಟಿಮ್ ಸೌಥಿ, ಇಶ್ ಸೋಧಿ, ಮಿಚೆಲ್ ಸ್ಯಾಂಟ್ನರ್, ಗ್ಲೆನ್ ಫಿಲಿಪ್ಸ್, ಜಿಮ್ಮಿ ನೀಶಮ್, ಡೇರಿಲ್ ಮಿಚೆಲ್, ಆ್ಯಡಂ ಮಿಲ್ನೆ, ಮಾರ್ಟಿನ್ ಗಪ್ಟಿಲ್, ಲಾಚ್ಲಾನ್ ಫರ್ಗ್ಯುಸನ್, ಡೆವೊನ್ ಕಾನ್ವೇ, ಮಾರ್ಕ್ ಚಾಪ್ಮನ್, ಮೈಕಲ್ ಬ್ರೇಸ್‌ವೆಲ್, ಟ್ರೆಂಟ್ ಬೌಲ್ಟ್.

ಓದಿ: ಟಿ20 ವಿಶ್ವಕಪ್​ನಲ್ಲಿ ಆರ್​ ಅಶ್ವಿನ್​ ದಾಖಲೆ.. ಅತ್ಯಧಿಕ ವಿಕೆಟ್​ ಕಿತ್ತ ಮೊದಲ ಭಾರತೀಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.