ETV Bharat / entertainment

'ಉತ್ತರಕಾಂಡ' ಸಿನಿಮಾ ಸೆಟ್​ನಲ್ಲಿ ಶಿವರಾಜ್​ಕುಮಾರ್​ಗೆ ಅದ್ದೂರಿ ಸ್ವಾಗತ - shivarajkumar

author img

By ETV Bharat Karnataka Team

Published : May 24, 2024, 11:00 PM IST

ಶಿವರಾಜ್​ಕುಮಾರ್ ಅವರು ‘ಉತ್ತರಕಾಂಡ’ ಸಿನಿಮಾ ಸೆಟ್​ಗೆ ಭರ್ಜರಿಯಾಗಿ ಎಂಟ್ರಿ ಕೊಟ್ಟಿದ್ದಾರೆ.

ಶಿವರಾಜ್​ಕುಮಾರ್​ಗೆ ಅದ್ದೂರಿ ಸ್ವಾಗತ
ಶಿವರಾಜ್​ಕುಮಾರ್​ಗೆ ಅದ್ದೂರಿ ಸ್ವಾಗತ (ETV Bharat)

ನಟ ಶಿವರಾಜ್​ಕುಮಾರ್​ ಅವರು ರಾಜ್ಯಾದ್ಯಂತ ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಅವರು ಹೋದಲ್ಲೆಲ್ಲ ಫ್ಯಾನ್ಸ್ ಕಿಕ್ಕಿರಿದು ನೆರೆಯುತ್ತಾರೆ. ಅವರು ಸಿನಿಮಾ ಸೆಟ್​ಗೆ ಬಂದರೆ ಅದ್ದೂರಿ ಸ್ವಾಗತ ಸಿಗುತ್ತದೆ. ಅವರು ಇಂದು ಉತ್ತರಕಾಂಡ ಸಿನಿಮಾ ಸೆಟ್​ಗೆ ಎಂಟ್ರಿ ಕೊಟ್ಟಿದ್ದು, ಸಿನಿಮಾ ತಂಡದವರು ಅದ್ದೂರಿಯಾಗಿ ಸ್ವಾಗತಿಸಿದ್ದಾರೆ. ಈ ವೇಳೆ, ಚಿಕ್ಕವರಿಂದ ಹಿಡಿದು ದೊಡ್ಡವರ ತನಕ ಎಲ್ಲರೂ ಶಿವಣ್ಣ ಅವರ ಮುಖವಾಡ ಧರಿಸಿದ್ದು, ವಿಶೇಷವಾಗಿತ್ತು.

ಉತ್ತರಕಾಂಡ ಚಿತ್ರದ ಶೀರ್ಷಿಕೆಯಿಂದಲೇ ಕನ್ನಡ ಚಿತ್ರರಂಗದ ಗಮನ ಸೆಳೆಯುತ್ತಿದೆ. ಈ ಚಿತ್ರದ ಮುಹೂರ್ತ 2022ರಲ್ಲಿ‌ ಆಗಿತ್ತು. ಚಿತ್ರಕಥೆಯು ಬಯಲುಸೀಮೆಯ ಸಂಸ್ಕೃತಿಯನ್ನು ಎಳೆ ಎಳೆಯಾಗಿ ಬಿಚ್ಚಿಡುವುದರಿಂದ ಹಾಗೂ ಚಿತ್ರವು ಉತ್ತರ ಕರ್ನಾಟಕದ ಆಡುಭಾಷೆಯನ್ನು ಹೊಂದಿರುವುದರಿಂದ ಈ ಚಿತ್ರದ ಶೂಟಿಂಗ್​ ಉತ್ತರ ಕರ್ನಾಟಕದ ಕೆಲವೊಂದು ಜಿಲ್ಲೆಗಳಲ್ಲಿ ಭರದಿಂದ ನಡೆಯುತ್ತಿದೆ. ಈಗಾಗಲೇ ವಿಜಯಪುರ ಕೆಲವೊಂದು ಲೊಕೇಶನ್​ಗಳಲ್ಲಿ ಚಿತ್ರೀಕರಣ ಮಾಡಿರೋ ಚಿತ್ರತಂಡ, ಈಗ ಬೆಳಗಾವಿಯ ಸುಂದರವಾದ ಸ್ಥಳಗಳಲ್ಲಿ ಶೂಟಿಂಗ್ ಮಾಡುತ್ತಿದೆ. ಉತ್ತರಕಾಂಡ ಚಿತ್ರದಲ್ಲಿ ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಮತ್ತು ಡಾಲಿ ಧನಂಜಯ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ರೋಹಿತ್ ಪದಕಿ ಅವರು ‘ಉತ್ತರಕಾಂಡ’ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಕೆಆರ್​ಜಿ ಸ್ಟೂಡಿಯೋಸ್ ಬ್ಯಾನರ್​ನಡಿ ಕಾರ್ತಿಕ್ ಗೌಡ ಮತ್ತು ಯೋಗಿ‌ ಜಿ. ರಾಜ್ ನಿರ್ಮಿಸುಸುತ್ತಿದ್ದಾರೆ. ಖ್ಯಾತ ಬಾಲಿವುಡ್ ಗಾಯಕ ಹಾಗೂ ಸಂಗೀತ ನಿರ್ದೇಶಕ ಅಮಿತ್ ತ್ರಿವೇದಿ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಲಿದ್ದು, ಅದ್ವೈತ ಗುರುಮೂರ್ತಿ ಮುಖ್ಯ ಛಾಯಾಗ್ರಾಹಕರಾಗಿದ್ದಾರೆ. ಚಿತ್ರಕ್ಕೆ ವಿಶ್ವಾಸ್ ಕಶ್ಯಪ್ ಪ್ರೊಡಕ್ಷನ್ ವಿನ್ಯಾಸ (ಡಿಸೈನ್)ಮಾಡಲಿದ್ದಾರೆ. ಬಹು ದೊಡ್ಡ ತಾರಾಬಳಗವನ್ನು ಹೊಂದಿರುವ ಈ ಚಿತ್ರದಲ್ಲಿ ಶಿವರಾಜ್ ಕುಮಾರ್ ಪಾತ್ರ ಏನು ಅನ್ನೋದು ಅಭಿಮಾನಿಗಳಲ್ಲಿ ಕುತೂಹಲ ಹುಟ್ಟಿಸಿದೆ.

ಇದನ್ನೂ ಓದಿ: ಅಭೂತಪೂರ್ವ ಸಂಗೀತ ಸಾಧನೆಯೊಂದಿಗೆ ಇತಿಹಾಸ ಸೃಷ್ಟಿಸಲು ಸಜ್ಜಾದ ಯುಐ ಸಿನಿಮಾ - UI READY TO CREATE NEW HISTORY

ETV Bharat Logo

Copyright © 2024 Ushodaya Enterprises Pvt. Ltd., All Rights Reserved.