ETV Bharat / sports

ಭಾರತ ವಿರುದ್ಧದ ಏಕದಿನ ಸರಣಿಗೆ 17 ಸದಸ್ಯರ ತಂಡ ಪ್ರಕಟಿಸಿದ ದ. ಆಫ್ರಿಕಾ

author img

By

Published : Jan 2, 2022, 8:10 PM IST

South Africa-India ODI series-2022: ವರ್ಷದ ಏಕದಿನ ಆಟಗಾರ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿರುವ ಜನ್ನೆಮಾನ್ ಮಲನ್​, ಡೇವಿಡ್​ ಮಿಲ್ಲರ್​, ಆ್ಯಂಡಿಲೆ ಪೆಹ್ಲುಕ್ವಾಯೋ, ಡ್ವೇನ್ ಪ್ರಿಟೋರಿಯಸ್​ ಹಾಗೂ ಟಿ20 ಕ್ರಿಕೆಟ್​ನಲ್ಲಿ 2ನೇ ಶ್ರೇಯಾಂಕದಲ್ಲಿರುವ ತಬ್ರೈಜ್ ಶಮ್ಸಿ ಏಕದಿನ ತಂಡದಲ್ಲಿರುವ ಸ್ಟಾರ್ ಆಟಗಾರರಾಗಿದ್ದಾರೆ.

South Africa announced 17 members squad
ದಕ್ಷಿಣ ಆಫ್ರಿಕಾ ಏಕದಿನ ತಂಡ

ಜೋಹನ್ಸ್​ಬರ್ಗ್​: ಭಾರತದ ವಿರುದ್ಧ ನಡೆಯುವ ಮೂರು ಪಂದ್ಯಗಳ ಏಕದಿನ ಸರಣಿಗಾಗಿ ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿ ಭಾನುವಾರ 17 ಸದಸ್ಯರ ತಂಡವನ್ನು ಪ್ರಕಟಿಸಿದೆ.

ಟೆಸ್ಟ್​ ತಂಡದಲ್ಲಿ ಉತ್ತಮ ಪ್ರದರ್ಶನ ತೋರುತ್ತಿರುವ ಮಾರ್ಕೊ ಜಾನ್ಸನ್​ ಏಕದಿನ ಕ್ರಿಕೆಟ್​ನಲ್ಲೂ ಮೊದಲ ಬಾರಿ ಅವಕಾಶ ಪಡೆದಿದ್ದಾರೆ . ಟೆಂಬ ಬವುಮಾ ನಾಯಕನ ಸ್ಥಾನಕ್ಕೆ ಮರಳಿದ್ದಾರೆ. ವೇಯ್ನ್​ ಪಾರ್ನೆಲ್ , ರಿಯಾನ್ ರಿಕೆಲ್ಟನ್, ಸಿಸಂಡಾ ಮಗಾಲಾ ಮತ್ತು ಜುಬೇರ್​ ಹಮ್ಜಾ ತಮ್ಮ ಸ್ಥಾನವನ್ನು ಉಳಿಸಿಕೊಂಡಿದ್ದಾರೆ.

ವರ್ಷದ ಏಕದಿನ ಆಟಗಾರ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿರುವ ಜನ್ನೆಮಾನ್ ಮಲನ್​, ಡೇವಿಡ್​ ಮಿಲ್ಲರ್​, ಆ್ಯಂಡಿಲೆ ಪೆಹ್ಲುಕ್ವಾಯೋ, ಡ್ವೇನ್ ಪ್ರಿಟೋರಿಯಸ್​ ಹಾಗೂ ಟಿ20 ಕ್ರಿಕೆಟ್​ನಲ್ಲಿ 2ನೇ ಶ್ರೇಯಾಂಕದಲ್ಲಿರುವ ತಬ್ರೈಜ್ ಶಮ್ಸಿ ಏಕದಿನ ತಂಡದಲ್ಲಿರುವ ಸ್ಟಾರ್ ಆಟಗಾರರಾಗಿದ್ದಾರೆ.

ಗಾಯದ ಕಾರಣ ಟೆಸ್ಟ್​ ಸರಣಿಯಿಂದ ಹೊರಬಿದ್ದಿರುವ ಎನ್ರಿಚ್ ನಾರ್ಕಿಯಾ ಏಕದಿನ ತಂಡದಿಂದಲೂ ಹೊರಬಿದ್ದಿದ್ದಾರೆ. ಮೊದಲ ಟೆಸ್ಟ್​ನಲ್ಲಿ ಅದ್ಭುತ ಬೌಲಿಂಗ್ ಪ್ರದರ್ಶನ ತೋರಿರುವ ಕಗಿಸೋ ರಬಾಡ ಮತ್ತು ಲುಂಗಿ ಎಂಗಿಡಿ ಕೂಡ ಇದ್ದಾರೆ.

2018ರಲ್ಲಿ ದಕ್ಷಿಣ ಅಫ್ರಿಕಾ ಪ್ರವಾಸ ಕೈಗೊಂಡಿದ್ದ ವೇಳೆ ವಿರಾಟ್ ಕೊಹ್ಲಿ ಪಡೆ 5-1ರಲ್ಲಿ ಸರಣಿಯನ್ನು ಗೆದ್ದು ಬೀಗಿತ್ತು. ವಿರಾಟ್​ ಕೊಹ್ಲಿ 3 ಶತಕದ ಸಹಿತ ಬರೋಬ್ಬರಿ 558 ರನ್​ಗಳಿಸಿ ವಿಜೃಂಭಿಸಿದ್ದರು.

SA ODI squad announced :

ಟೆಂಬಾ ಬವುಮಾ(ನಾಯಕ), ಕೇಶವ್ ಮಹಾರಾಜ್(ಉಪನಾಯಕ), ಕ್ವಿಂಟನ್ ಡಿ ಕಾಕ್(ವಿಕೀ), ಜುಬೈರ್ ಹಮ್ಜಾ, ಮಾರ್ಕೊ ಜಾನ್ಸನ್, ಜನ್ನೆಮಾನ್ ಮಲನ್, ಸಿಸಂಡಾ ಮಗಾಲಾ,ಐಡೆನ್ ಮಾರ್ಕ್ರಮ್, ಡೇವಿಡ್ ಮಿಲ್ಲರ್, ಲುಂಗಿ ಎಂಗಿಡಿ, ವೇಯ್ನ್ ಪಾರ್ನಲ್, ಆ್ಯಂಡಿಲೇ ಪೆಹ್ಲುಕ್ವಾಯೋ,ಡ್ವೇನ್ ಪ್ರೆಟೋರಿಯಸ್, ಕಗಿಸೊ ರಬಾಡ, ತಬ್ರೈಜ್ ಶಮ್ಸಿ, ರಾಸ್ಸಿ ವ್ಯಾನ ಡರ್ ಡಸೆನ್, ಕೈಲ್​ ವೀರೆಯ್ನೆ

ಇದನ್ನೂ ಓದಿ:ಕೊಹ್ಲಿ ಒಬ್ಬ ಅದ್ಭುತ ನಾಯಕ, ಶೀಘ್ರದಲ್ಲೇ ಅವರು ಶತಕ ಸಿಡಿಸುವ ವಿಶ್ವಾಸವಿದೆ: ದ್ರಾವಿಡ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.