ETV Bharat / sports

CSK vs RR: ನಿರ್ಣಾಯಕ ಪಂದ್ಯದಲ್ಲಿ ಟಾಸ್​ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ರಾಜಸ್ಥಾನ್​

author img

By

Published : Oct 2, 2021, 7:16 PM IST

Updated : Oct 2, 2021, 8:00 PM IST

ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ರಾಜಸ್ಥಾನ್​ ರಾಯಲ್ಸ್ ತಂಡ ಪ್ರಮುಖ ಬದಲಾವಣೆ ಮಾಡಿಕೊಂಡಿದೆ. ಕ್ರಿಸ್​ ಮೋರಿಸ್​, ಮಹಿಪಾಲ್​ ಲಾಮ್ರೋರ್​ ರಿಯಾನ್ ಪರಾಗ್ ಮತ್ತು ಲಿಯಾಮ್ ಲಿವಿಂಗ್​ಸ್ಟೋನ್ ಬದಲಿಗೆ, ಡೇವಿಡ್ ಮಿಲ್ಲರ್​, ಗ್ಲೇನ್ ಫಿಲಿಫ್ಸ್, ಅಕಾಶ್ ಸಿಂಗ್ ಮತ್ತು ಶಿವಂ ದುಬೆಗೆ ಅವಕಾಶ ನೀಡಿದೆ.

ರಾಜಸ್ಥಾನ್ ರಾಯಲ್ಸ್ vs ಚೆನ್ನೈ ಸೂಪರ್ ಕಿಂಗ್ಸ್​
ರಾಜಸ್ಥಾನ್ ರಾಯಲ್ಸ್ vs ಚೆನ್ನೈ ಸೂಪರ್ ಕಿಂಗ್ಸ್​

ಅಬುಧಾಬಿ: ಪ್ಲೇ ಆಪ್​ ಪ್ರವೇಶಿಸುವ ಕೊನೆಯ ಅವಕಾಶವಾಗಿರುವ ಸಿಎಸ್​ಕೆ ವಿರುದ್ಧ ಪಂದ್ಯದಲ್ಲಿ ಟಾಸ್​ ಗೆದ್ದ ರಾಜಸ್ಥಾನ್​ ರಾಯಲ್ಸ್ ತಂಡದ ನಾಯಕ ಸಂಜು ಸಾಮ್ಸನ್​ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ.

ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ರಾಜಸ್ಥಾನ್​ ರಾಯಲ್ಸ್ ತಂಡ ಪ್ರಮುಖ ಬದಲಾವಣೆ ಮಾಡಿಕೊಂಡಿದೆ. ಕ್ರಿಸ್​ ಮೋರಿಸ್​, ಮಹಿಪಾಲ್​ ಲಾಮ್ರೋರ್​ ರಿಯಾನ್ ಪರಾಗ್ ಮತ್ತು ಲಿಯಾಮ್ ಲಿವಿಂಗ್​ಸ್ಟೋನ್ ಬದಲಿಗೆ, ಡೇವಿಡ್ ಮಿಲ್ಲರ್​, ಗ್ಲೇನ್ ಫಿಲಿಫ್ಸ್, ಅಕಾಶ್ ಸಿಂಗ್ ಮತ್ತು ಶಿವಂ ದುಬೆಗೆ ಅವಕಾಶ ನೀಡಿದೆ.

ಇತ್ತ ಸಿಎಸ್​ಕೆ ಡ್ವೇನ್ ಬ್ರಾವೋ ಬದಲಿಗೆ ಸ್ಯಾಮ್​ ಕರ್ರನ್ ಮತ್ತು ದೀಪಕ್ ಚಹರ್​ ಬದಲಿಗೆ ಕೆಎಂ ಆಸಿಫ್​ಗೆ ಅವಕಾಶ ನೀಡಿದೆ.

ಮೂರು ಬಾರಿ ಐಪಿಎಲ್ ಚಾಂಪಿಯನ್ ಸಿಎಸ್​ಕೆ ಆಡಿರುವ 11 ಪಂದ್ಯಗಳಲ್ಲಿ 9ರಲ್ಲಿ ಗೆಲುವು ಸಾಧಿಸಿ ಪ್ಲೇ ಆಫ್​ ಪ್ರವೇಶಿಸಿದೆ. ನಂತರದ ಸ್ಥಾನದಲ್ಲಿ ಡೆಲ್ಲಿ ಕ್ಯಾಪಿಟಲ್ಸ್​(16) ಇದೆ. ಒಂದು ವೇಳೆ ಈ ಪಂದ್ಯವನ್ನು ಗೆದ್ದರೆ ಚೆನ್ನೈ ತಂಡ ಅಗ್ರ ಎರಡು ಸ್ಥಾನವನ್ನು ಖಚಿತಪಡಿಸಿಕೊಳ್ಳಲಿದೆ.

ಆದರೆ ರಾಜಸ್ಥಾನ್ ಪರಿಸ್ಥಿತಿ ಇದಕ್ಕೆ ತದ್ವಿರುದ್ಧವಾಗಿದೆ. ಅವರು 11 ಪಂದ್ಯಗಳಲ್ಲಿ 4ರಲ್ಲಿ ಗೆಲುವು ಮತ್ತು 7ರಲ್ಲಿ ಸೋಲು ಕಂಡಿದ್ದು ಕೊನೆಯಿಂದ 2ನೇ ಸ್ಥಾನದಲ್ಲಿದೆ. ಈ ಪಂದ್ಯವನ್ನು ಗೆದ್ದರೆ 10 ಅಂಕವನ್ನು ಗಳಿಸಿಕೊಳ್ಳಲಿದ್ದು, ಕೆಕೆಆರ್​ ಮತ್ತು ಪಂಜಾಬ್​ ತಂಡದೊಂದಿಗೆ ಪೈಪೋಟಿಗೆ ಬರಲಿದೆ. ಒಂದು ವೇಳೆ ಈ ಪಂದ್ಯವನ್ನು ರಾಜಸ್ಥಾನ್ ಗೆದ್ದರೆ 2021ರ ಲೀಗ್ ಕೊನೆಯ ಪಂದ್ಯದವರೆಗೂ ರೋಚಕವಾಗಿರಲಿದೆ.

ಚೆನ್ನೈ ಸೂಪರ್ ಕಿಂಗ್ಸ್ : ರುತುರಾಜ್ ಗಾಯಕವಾಡ್, ಫಾಫ್ ಡು ಪ್ಲೆಸಿಸ್, ಮೊಯೀನ್ ಅಲಿ, ಸುರೇಶ್ ರೈನಾ, ಅಂಬಟಿ ರಾಯುಡು, ಎಂಎಸ್ ಧೋನಿ (ನಾಯಕ/ವಿಕೀ), ರವೀಂದ್ರ ಜಡೇಜಾ, ಸ್ಯಾಮ್ ಕುರ್ರನ್, ಶಾರ್ದೂಲ್ ಠಾಕೂರ್, ಕೆಎಂ ಆಸಿಫ್, ಜೋಶ್ ಹೆಜಲ್‌ವುಡ್

ರಾಜಸ್ಥಾನ ರಾಯಲ್ಸ್ : ಎವಿನ್ ಲೂಯಿಸ್, ಯಶಸ್ವಿ ಜೈಸ್ವಾಲ್, ಸಂಜು ಸ್ಯಾಮ್ಸನ್ (ನಾಯಕ/ವಿ.ಕೀ), ಶಿವಂ ದುಬೆ, ಗ್ಲೆನ್ ಫಿಲಿಪ್ಸ್, ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ, ಆಕಾಶ್ ಸಿಂಗ್, ಮಯಾಂಕ್ ಮಾರ್ಕಂಡೆ, ಚೇತನ್ ಸಕಾರಿಯಾ, ಮುಸ್ತಫಿಜುರ್ ರೆಹಮಾನ್

Last Updated :Oct 2, 2021, 8:00 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.