ETV Bharat / sports

ಕೋಲ್ಕತ್ತಾ ವಿರುದ್ಧ ಮೋಹನ್ ಬಗಾನ್ ಫುಟ್ಬಾಲ್​ ಕ್ಲಬ್‌ ಜರ್ಸಿಯಲ್ಲಿ ನಾಳೆ ಲಕ್ನೋ ಕಣಕ್ಕೆ

author img

By

Published : May 19, 2023, 10:40 PM IST

ಕೋಲ್ಕತ್ತಾದ ಖ್ಯಾತ ಫುಟ್ಬಾಲ್​ ಕ್ಲಬ್‌ ಮೋಹನ್ ಬಗಾನ್​ ಜರ್ಸಿಯನ್ನು ತೊಟ್ಟು ನಾಳೆ ಕೆಕೆಆರ್ ವಿರುದ್ಧ ಲಕ್ನೋ ಸುಪರ್​ ಜೈಂಟ್ಸ್​ ಆಡಲಿದೆ. ​

Lucknow Super Gaints to wear Mohun Bagan Football Club-inspired jersey
ಕೋಲ್ಕತ್ತಾ ವಿರುದ್ಧ ಮೋಹನ್ ಬಗಾನ್ ಫುಟ್‌ಬಾಲ್ ಕ್ಲಬ್‌ ಜರ್ಸಿಯಲ್ಲಿ ನಾಳೆ ಲಕ್ನೋ ಕಣಕ್ಕೆ

ಕೋಲ್ಕತ್ತಾ (ಪಶ್ಚಿಮ ಬಂಗಾಳ): ಮೇ 20 ರಂದು ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್​) ವಿರುದ್ಧ ಐಪಿಎಲ್‌ನ ಕೊನೆಯ ಲೀಗ್ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ (ಎಲ್‌ಎಸ್‌ಜಿ) ಮೋಹನ್ ಬಗಾನ್ ಫುಟ್‌ಬಾಲ್ ಕ್ಲಬ್ ಜೆರ್ಸಿಯನ್ನು ಧರಿಸಿ ಆಡಲಿದೆ. ಕೋಲ್ಕತ್ತಾದ ಆರ್‌ಪಿಎಸ್‌ಜಿ ಹೌಸ್‌ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಸ್ಟ್ಯಾಂಡ್ ಇನ್ ನಾಯಕ ಕೃನಾಲ್ ಪಾಂಡ್ಯ ಮತ್ತು ವಿಕೆಟ್‌ ಕೀಪರ್ - ಬ್ಯಾಟರ್ ನಿಕೋಲಸ್ ಪೂರನ್ ಉಪಸ್ಥಿತಿಯಲ್ಲಿ ಈ ಘೋಷಣೆ ಮಾಡಲಾಯಿತು.

ಎಲ್‌ಎಸ್‌ಜಿ ಮತ್ತು ಮೋಹನ್ ಬಗಾನ್ ಫುಟ್‌ಬಾಲ್ ಕ್ಲಬ್‌ನ ಮಾಲೀಕರಾಗಿರುವ ಸಂಜೀವ್ ಗೋಯೆಂಕಾ, ಎಲ್‌ಎಸ್‌ಜಿ ಮೋಹನ್ ಬಗಾನ್‌ಗೆ ಗೌರವ ಸಲ್ಲಿಸುತ್ತದೆ ಎಂದು ಹೇಳಿದರು.

ಜೆರ್ಸಿಯನ್ನು ಪ್ರದರ್ಶಿಸಿದ ಪತ್ರಿಕಾಗೋಷ್ಠಿಯಲ್ಲಿ, ಸಂಜೀವ್ ಗೋಯೆಂಕಾ, "ಇದು ಮೋಹನ್ ಬಗಾನ್ ಪರಂಪರೆಗೆ ಮತ್ತು ನಮ್ಮ ನಗರದ ಪರಂಪರೆಗೆ ಗೌರವ ಸಲ್ಲಿಸುವ ಮಾರ್ಗವಾಗಿದೆ. ಮೋಹನ್ ಬಗಾನ್ ಒಂದು ಶತಮಾನದಷ್ಟು ಹಳೆಯದಾದ ಸಂಸ್ಥೆಯಾಗಿದೆ. ನಾವು ಅವರಿಗೆ ಗೌರವ ಸಲ್ಲಿಸುತ್ತಿದ್ದೇವೆ. ಈ ಶನಿವಾರದಂದು ನಾವು ಕೆಕೆಆರ್​ ವಿರುದ್ಧ ಆಡುವ ಪಂದ್ಯದಲ್ಲಿ ಮೋಹನ್ ಬಗಾನ್‌ನ ಐಕಾನಿಕ್ ಗ್ರೀನ್ ಮತ್ತು ಮರೂನ್ ಜರ್ಸಿ ಧರಿಸುತ್ತೇವೆ ಆಡುತ್ತಿದ್ದೇವೆ" ಎಂದು ಹೇಳಿದ್ದಾರೆ.

"ಕೇವಲ ಮೋಹನ್ ಬಗಾನ್ ಅಭಿಮಾನಿಗಳು ಮಾತ್ರವಲ್ಲ, ಕೋಲ್ಕತ್ತಾದ ಎಲ್ಲಾ ನಿವಾಸಿಗಳು ನಮ್ಮನ್ನು ಬೆಂಬಲಿಸುತ್ತಾರೆ ಎಂದು ಭಾವಿಸುತ್ತೇವೆ. ನಮಗೆ, ಕೋಲ್ಕತ್ತಾ ನಮ್ಮ ಮನೆಯ ಹಕ್ಕು. ಆದ್ದರಿಂದ, ನಮಗೆ ಎಷ್ಟು ಸಾಧ್ಯವೋ ಅಷ್ಟು ಬೆಂಬಲವನ್ನು ನಾವು ಕೇಳುತ್ತೇವೆ" ಎಂದು ಗೋಯೆಂಕಾ ತಿಳಿಸಿದ್ದಾರೆ.

ಜೂನ್ 1, 2023 ರಂದು ಕ್ಲಬ್ ಅನ್ನು ಮೋಹನ್ ಬಗಾನ್ ಸೂಪರ್ ಜೈಂಟ್ ಎಂದು ಮರುನಾಮಕರಣ ಮಾಡಲಾಗುತ್ತದೆ. ಮೊಹನ್​ ಬಗಾನ್​ ಕೋಲ್ಕತ್ತಾ ಮೂಲದ ಭಾರತೀಯ ವೃತ್ತಿಪರ ಫುಟ್ಬಾಲ್ ಕ್ಲಬ್ ಆಗಿದೆ. ಕ್ಲಬ್ ಇಂಡಿಯನ್ ಸೂಪರ್ ಲೀಗ್‌ನಲ್ಲಿ ಸ್ಪರ್ಧಿಸುತ್ತದೆ ಮತ್ತು ಈ ಬಾರಿ (2020-21) ರಲ್ಲಿ ಚಾಂಪಿಯನ್​ ಆಗಿ ಹೊರ ಹೊಮ್ಮಿತ್ತು.

ಐಪಿಎಲ್ ಲೀಗ್ ಪಟ್ಟಿಯಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಪ್ರಸ್ತುತ ಮೂರನೇ ಸ್ಥಾನದಲ್ಲಿದೆ. 13 ಪಂದ್ಯಗಳನ್ನು ಆಡಿರುವ ಅವರು ಏಳರಲ್ಲಿ ಗೆದ್ದು ಐದರಲ್ಲಿ ಸೋಲು ಕಂಡಿದ್ದು, ಒಂದು ಪಂದ್ಯ ರದ್ದಾದ ಕಾರಣ 15 ಪಾಯಿಂಟ್‌ಗಳನ್ನು ಹೊಂದಿದೆ. ನಾಳೆ ಲಕ್ನೋ ಕೆಕೆಆರ್ ವಿರುದ್ಧ ಗೆದ್ದರೆ ಎರಡನೇ ಸ್ಥಾನಕ್ಕೆ ಏರಲಿದೆ. ಪ್ಲೇ ಆಫ್​ಗೆ ಪ್ರವೇಶ ಪಡೆದ ಎರಡನೇ ತಂಡವಾಗಲಿದೆ.

ಸಂಭಾವ್ಯ ತಂಡ ಇಂತಿದೆ: ಕೋಲ್ಕತ್ತಾ ನೈಟ್​ ರೈಡರ್ಸ್​: ರಹಮಾನುಲ್ಲಾ ಗುರ್ಬಾಜ್ (ವಿಕೆಟ್​ ಕೀಪರ್​), ಜೇಸನ್ ರಾಯ್, ವೆಂಕಟೇಶ್ ಅಯ್ಯರ್, ನಿತೀಶ್ ರಾಣಾ (ನಾಯಕ), ಆಂಡ್ರೆ ರಸೆಲ್, ರಿಂಕು ಸಿಂಗ್, ಶಾರ್ದೂಲ್ ಠಾಕೂರ್, ಸುನಿಲ್ ನರೈನ್, ವೈಭವ್ ಅರೋರಾ, ಹರ್ಷಿತ್ ರಾಣಾ, ಸುಯಶ್ ಶರ್ಮಾ, ವರುಣ್ ಚಕ್ರವರ್ತಿ

ಲಕ್ನೋ ಸೂಪರ್​ ಜೈಂಟ್ಸ್​: ಕ್ವಿಂಟನ್ ಡಿ ಕಾಕ್ (ವಿಕೆಟ್​​ ಕೀಪರ್​), ಕೈಲ್ ಮೇಯರ್ಸ್, ದೀಪಕ್ ಹೂಡಾ, ಪ್ರೇರಕ್ ಮಂಕಡ್, ಕೃನಾಲ್ ಪಾಂಡ್ಯ (ನಾಯಕ), ಮಾರ್ಕಸ್ ಸ್ಟೋನಿಸ್, ನಿಕೋಲಸ್ ಪೂರನ್, ಆಯುಷ್ ಬಡೋನಿ, ನವೀನ್-ಉಲ್-ಹಕ್, ರವಿ ಬಿಷ್ಣೋಯ್, ಸ್ವಪ್ನಿಲ್ ಸಿಂಗ್, ಮೊಹ್ಸಿನ್ ಖಾನ್

ಇದನ್ನೂ ಓದಿ: ಪಂಜಾಬ್​ಗೆ ಮಧ್ಯಮ ಕ್ರಮಾಂಕದ ಆಸರೆ: ರಾಜಸ್ಥಾನಕ್ಕೆ 188 ರನ್​ ಸ್ಪರ್ಧಾತ್ಮಕ ಗುರಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.