ETV Bharat / sports

ಪಂಜಾಬ್​ ವಿರುದ್ಧ ರಾಜಸ್ಥಾನ ರಾಯಲ್ಸ್​ಗೆ​ ಗೆಲುವು: ಸೋಲಿನೊಂದಿಗೆ ಐಪಿಎಲ್​ನಿಂದ ಹೊರಬಿದ್ದ ಕಿಂಗ್ಸ್​

author img

By

Published : May 19, 2023, 9:46 PM IST

Updated : May 20, 2023, 12:21 AM IST

ಹಿಮಾಚಲ ಪ್ರದೇಶದ ಧರ್ಮಶಾಲಾ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್​ ವಿರುದ್ಧದ ಸೋಲಿನೊಂದಿಗೆ ಪಂಜಾಬ್​ ಕಿಂಗ್ಸ್​ ತಂಡ ಟೂರ್ನಿಯಿಂದ ಹೊರ ಬಿದ್ದಿದೆ.

Punjab Kings vs Rajasthan Royals 66th Match update
ಪಂಜಾಬ್​ಗೆ ಮಧ್ಯಮ ಕ್ರಮಾಂಕದ ಆಸರೆ: ರಾಜಸ್ಥಾನಕ್ಕೆ 188 ರನ್​ ಸ್ಪರ್ಧಾತ್ಮಕ ಗುರಿ

ಧರ್ಮಶಾಲಾ (ಹಿಮಾಚಲ ಪ್ರದೇಶ): ಪಂಜಾಬ್​ ಕಿಂಗ್ಸ್ ವಿರುದ್ಧ ರಾಜಸ್ಥಾನ ರಾಯಲ್ಸ್‌ ತಂಡ ನಾಲ್ಕು ವಿಕೆಟ್​ಗಳ ರೋಚಕ ಜಯ ದಾಖಲಿಸಿದೆ. ಈ ಪಂದ್ಯದ ಸೋಲಿನೊಂದಿಗೆ ಐಪಿಎಲ್​ ಟೂರ್ನಿನಿಂದ ಶಿಖರ್​ ಧವನ್​ ಪಡೆ ಹೊರ ಬಿದ್ದಿದೆ. ಮತ್ತೊಂದೆಡೆ, ನಿರ್ಣಾಯಕ ಪಂದ್ಯದಲ್ಲಿ ರಾಯಸ್ಥಾನ ತಂಡ ಗೆದ್ದು ಐದನೇ ಸ್ಥಾನಕ್ಕೆ ಏರಿದರೂ ಪ್ಲೇ ಆಫ್​​ ಹಾದಿ ಕಠಿಣವಾಗಿದೆ. ಮುಂದಿನ ಪಂದ್ಯಗಳಲ್ಲಿ ಆರ್‌ಸಿಬಿ ಹಾಗೂ ಮುಂಬೈ ಇಂಡಿಯನ್ಸ್‌ ತಂಡಗಳ ಫಲಿತಾಂಶ ಮೇಲೆ ರಾಯಲ್ಸ್​ ಭವಿಷ್ಯ ನಿಂತಿದೆ.

ಇಲ್ಲಿನ ಧರ್ಮಶಾಲಾ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್​ ಸೋತು ಮೊದಲ ಬ್ಯಾಟಿಂಗ್​ ಮಾಡಿದ ಪಂಬಾಜ್​ ಪಂದ್ಯ 187 ರನ್​ಗಳನ್ನು ಪೇರಿಸಿತ್ತು. ಈ ಗುರಿ ಬೆನ್ನಟ್ಟಿದ ರಾಜಸ್ಥಾನ ರಾಯಲ್ಸ್​ ತಂಡವು ಇನ್ಸಿಂಗ್ಸ್​ನ ಎರಡು ಎಸೆತಗಳು ಬಾಕಿ ಇರುವಾಗಲೇ 189 ರನ್​ ಬಾರಿಸಿ ಗೆಲುವಿನ ನಗೆ ಬೀರಿತು. ರಾಜಸ್ಥಾನ ಪರ ಆರಂಭಿಕ ಬ್ಯಾಟರ್​ ಜೋಸ್‌ ಬಟ್ಲರ್‌ ಶೂನ್ಯಕ್ಕೆ ಔಟಾದರು. ನಂತರದಲ್ಲಿ ಯಶಸ್ವಿ ಜೈಸ್ವಾಲ್‌ ಮತ್ತು ಕನ್ನಡಿಗ ದೇವದತ್‌ ಪಡಿಕ್ಕಲ್‌ 73 ರನ್​ಗಳ ಜೊತೆಯಾಟ ನೀಡಿ ಆಸರೆಯಾದರು.

ದೇವದತ್‌ ಪಡಿಕ್ಕಲ್‌ 30 ಎಸೆತಗಳಲ್ಲಿ 5 ಬೌಂಡರಿ, 3 ಸಿಕ್ಸರ್‌ಗಳ ಸಮೇತ 51 ರನ್‌ ಬಾರಿಸಿ ಮಿಂಚಿದರು. ಸಂಜು ಸಮ್ಸನ್​ ಕೇವಲ 2 ರನ್​ಗೆ ವಿಕೆಟ್​ ವಿಕೆಟ್ ಒಪ್ಪಿಸಿದರು. ಮತ್ತೊಂದೆಡೆ, ಯಶಸ್ವಿ ಜೈಸ್ವಾಲ್‌ 36 ಎಸೆತಗಳಲ್ಲಿ 8 ಬೌಂಡರಿಗಳೊಂದಿಗೆ 50 ರನ್‌ ಬಾರಿಸಿ ಗಮನ ಸೆಳೆದರು. ರಿಯಾನ್‌ ಪರಾಗ್‌ 12 ಎಸೆತದಲ್ಲಿ 2 ಸಿಕ್ಸರ್‌ 1 ಬೌಂಡರಿಯೊಂದಿಗೆ 20 ರನ್‌ಗಳ ಕಾಣಿಕೆ ನೀಡಿದರು. ಇನ್ನಿಂಗ್ಸ್‌ನ ಕೊನೆಯಲ್ಲಿ ಶ್ರಿಮೋನ್‌ ಹೆಟ್ಮೆಯರ್‌ 28 ಎಸೆತಗಳಲ್ಲಿ 4 ಬೌಂಡರಿ, 3 ಸಿಕ್ಸರ್‌ ಸಮೇತ 46 ರನ್‌ ಸಿಡಿಸಿ ತಂಡದ ಗೆಲುವನ್ನು ಸುಲಭ ಮಾಡಿದರು. ಕೊನೆಗೆ ಧ್ರುವ ಜುರೆಲ್​ ಅಜೇಯ 18 ಮತ್ತು ಟ್ರೆಂಟ್ ಬೌಲ್ಟ್ 1 ರನ್​ ಗಳಿಸಿ ತಂದವನ್ನು ಗೆಲುವಿನ ದಡ ಸೇರಿಸಿದರು.

ಇದಕ್ಕೂ ಮುನ್ನ ಸ್ಯಾಮ್​ ಕರನ್, ಜಿತೇಶ್​ ಶರ್ಮಾ ಮತ್ತು ಶಾರುಖ್ ಖಾನ್ ಭರ್ಜರಿ ಬ್ಯಾಟಿಂಗ್​ ಬಲದಿಂದ ಪಂಜಾಬ್​ ಕಿಂಗ್ಸ್​ ನಿಗದಿತ ಓವರ್​ಗಳಲ್ಲಿ​ ಐದು ವಿಕೆಟ್​ ನಷ್ಟಕ್ಕೆ 187 ರನ್​ಗಳನ್ನು ಕಲೆ ಹಾಕಿತ್ತು. ಮೊದಲ ಹತ್ತು ಓವರ್​ಗಳಲ್ಲಿ ರಾಜಸ್ಥಾನ ಬೌಲರ್​ಗಳು ಹಿಡಿತ ಸಾಧಿಸಿದರು. ಇದರಿಂದ ಪಂಜಾಬ್​ ತಂದ ಆರಂಭದಲ್ಲೇ ಸಂಕಷ್ಟಕ್ಕೆ ಒಳಗಾಯಿತು. ಕಳೆದ ಪಂದ್ಯದಲ್ಲಿ ಶತಕ ಬಾರಿಸಿದ್ದ ಪ್ರಭಾಸಿಮ್ರಾನ್ ಸಿಂಗ್ ಕೇವಲ 2 ರನ್​ಗೆ ವಿಕೆಟ್​ ಒಪ್ಪಿಸಿದರು. ನಂತರ ಬಂದ ಅಥರ್ವ ಟೈಡೆ 19 ರನ್​ ಗಳಿಸಿದ ನಿರ್ಗಮಿಸಿದರು.

ಇವರ ಬೆನ್ನಲ್ಲೇ ನಾಯಕ ಶಿಖರ್​ ಧವನ್​ ಕೂಡ ಕೇವಲ 17 ರನ್​ ಬಾರಿಸಿ ಪೆವಿಲಿಯನ್​ ಹಾದಿ ಹಿಡಿದರು. ಲಿಯಾಮ್ ಲಿವಿಂಗ್‌ಸ್ಟೋನ್ ಸಹ 9 ರನ್​ಗೆ ಔಟಾದರು. ಇದರಿಂದ ತಂಡದ ಮೊತ್ತ 50 ರನ್​ ಆಗುವಷ್ಟರಲ್ಲಿ ಪಂಜಾಬ್​​ ಪ್ರಮುಖ ನಾಲ್ಕು ವಿಕೆಟ್​​ ಕಳೆದುಕೊಂಡು ಆಘಾತ ಅನುಭವಿಸಿ​ತ್ತು. ಆದರೆ, ನಂತರದಲ್ಲಿ ತಂಡಕ್ಕೆ ಮಧ್ಯಮ ಕ್ರಮಾಂಕದ ಬ್ಯಾಟರ್​ಗಳಾದ ಸ್ಯಾಮ್​ ಕರನ್, ಜಿತೇಶ್​ ಶರ್ಮಾ ಮತ್ತು ಶಾರುಖ್ ಖಾನ್ ಆಸರೆಯಾದರು.

4 ವಿಕೆಟ್​ ಪತನದ ನಂತರ ಸ್ಯಾಮ್ ಕರನ್ ಮತ್ತು ಜಿತೇಶ್ ಶರ್ಮಾ ಅರ್ಧಶತಕದ ಜೊತೆಯಾಟ ನೀಡಿದರು. ಈ ಜೊತೆಯಾಟದ ನೆರವಿನಿಂದ ತಂಡ 100 ರನ್​ನ ಗಡಿ ದಾಟಿತು. 28 ಬಾಲ್​ನಲ್ಲಿ 3 ಸಿಕ್ಸರ್​​ ಮತ್ತು 3 ಬೌಂಡರಿ ಸಮೇತ 44 ರನ್​ ಗಳಿಸಿದ್ದ ಜಿತೇಶ್​ ವಿಕೆಟ್​ ಕೊಟ್ಟರು. ಜಿತೇಶ್​ ಶರ್ಮಾ ನಂತರ ಬಂದ ಶಾರುಖ್ ಖಾನ್ ಅವರು ಸ್ಯಾಮ್​ ಕರನ್​ಗೆ ಜೊತೆಯಾದರು. ಈ ಜೋಡಿಯೂ ಮತ್ತೆ ಅರ್ಧಶತಕದ ಜೊತೆಯಾಟ ನೀಡಿತು. ಇದರಿಂದ ತಂಡ 150 ರನ್​ ಕ್ರಾಸ್ ಮಾಡಿತು.

ಕೊನೆಯ ಎರಡು ಓವರ್​ನಲ್ಲಿ ಈ ಜೋಡಿ 46 ರನ್ ಕಲೆ ಹಾಕಿತು. ಅನುಭವಿ ಚಹಾಲ್​ ಅವರ 19ನೇ ಓವರ್​ನಲ್ಲಿ 28 ರನ್​ ಗಳಿಸಿದರು. 20ನೇ ಓವರ್​ನಲ್ಲಿ ಬೋಲ್ಟ್​ಗೆ 18 ರನ್​ ಚಚ್ಚಿದರು. ಸ್ಯಾಮ್​ ಕರನ್​​ 31 ಬಾಲ್​ಗೆ 2 ಸಿಕ್ಸರ್​ ಮತ್ತು 4 ಬೌಂಡರಿಗಳೊಂದಿಗೆ 49 ರನ್​ ಗಳಿಸಿ ಅಜೇಯರಾಗಿ ಉಳಿದರು. 23 ಬಾಲ್​ ಎದುರಿಸಿದ ಶರುಖ್​ ನಾಲ್ಕು ಬೌಂಡರಿ, 2 ಸಿಕ್ಸರ್​ ಸಮೇತ ಅಜೇಯ 41 ರನ್​ ಬಾರಿಸಿದರು. ರಾಜಸ್ಥಾನ ಪರ ನವದೀಪ್​ ಶೈನಿ 3 ವಿಕೆಟ್​, ಝಂಪಾ ಮತ್ತು ಟ್ರೆಂಟ್ ಬೌಲ್ಟ್ ತಲಾ ಒಂದು ವಿಕೆಟ್​ ಗಳಿಸಿದ್ದರು.

ಇದನ್ನೂ ಓದಿ: ಟಿ-20 ಅತಿ ಹೆಚ್ಚು ಶತಕಗಳ ಸರದಾರ ಕೊಹ್ಲಿ: ಆರ್​ಸಿಬಿ - ಎಸ್ಆರ್​ಹೆಚ್​​ ಪಂದ್ಯದಲ್ಲಿ ನಿರ್ಮಾಣವಾದ ದಾಖಲೆಗಳಿವು..

Last Updated : May 20, 2023, 12:21 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.