ETV Bharat / sports

ಟಿ-20 ಅತಿ ಹೆಚ್ಚು ಶತಕಗಳ ಸರದಾರ ಕೊಹ್ಲಿ: ಆರ್​ಸಿಬಿ - ಎಸ್ಆರ್​ಹೆಚ್​​ ಪಂದ್ಯದಲ್ಲಿ ನಿರ್ಮಾಣವಾದ ದಾಖಲೆಗಳಿವು..

author img

By

Published : May 19, 2023, 6:05 PM IST

IPL Records in SRH vs RCB Match RGI Stadium Hyderabad
ಟಿ20 ಅತಿ ಹೆಚ್ಚು ಶತಕಗಳ ಸರದಾರ ಕೊಹ್ಲಿ: ಆರ್​ಸಿಬಿ-ಎಸ್ಆರ್​ಹೆಚ್​​ ಪಂದ್ಯದಲ್ಲಿ ನಿರ್ಮಾಣವಾದ ದಾಖಲೆಗಳಿವು..

ನಿನ್ನೆ ನಡೆದ ಆರ್​ಸಿಬಿ ಮತ್ತು ಹೈದರಾಬಾದ್​ ನಡುವೆ ನಡೆದ ಪಂದ್ಯದಲ್ಲಿ ಹಲವಾರು ದಾಖಲೆಗಳು ನಿರ್ಮಾಣವಾದವು. ಅವುಗಳ ಪಟ್ಟಿ ಇಲ್ಲಿದೆ..

ಹೈದರಾಬಾದ್ (ತೆಲಂಗಾಣ): ಇಲ್ಲಿನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಸನ್​ ರೈಸರ್ಸ್​ ಹೈದರಾಬಾದ್​​ (ಎಸ್‌ಆರ್‌ಎಚ್) ಮತ್ತು ರಾಯಲ್ಸ್​ ಚಾಲೆಂಜರ್ಸ್​ ಬೆಂಗಳೂರು (ಆರ್‌ಸಿಬಿ) ಪಂದ್ಯದ ವೇಳೆ ಹಲವು ದಾಖಲೆಗಳನ್ನು ನಿರ್ಮಾಣವಾದವು. ವಿರಾಟ್​ ಬ್ಯಾಟ್​ನಿಂದ ರನ್​ಗಳು ಬಂದರೆ ಒಂದಲ್ಲಾ ಒಂದು ದಾಖಲೆ ನಿರ್ಮಾಣ ಆಗುವುದು ಖಂಡಿತ. ಇನ್ನು ನಾಲ್ಕು ವರ್ಷಗಳ ಬಳಿಕ ಐಪಿಎಲ್​ನಲ್ಲಿ ಶತಕವನ್ನು ಗಳಿಸಿದಾಗ ಹಲವಾರು ರೆಕಾರ್ಡ್​ಗಳು ಮುರಿಯುದರಲ್ಲಿ ಅನುಮಾನವೇ ಇಲ್ಲ.

IPL Records in SRH vs RCB Match RGI Stadium Hyderabad
ವಿರಾಟ್​ ದಾಖಲೆಯ ಶತಕ

ಹೆನ್ರಿಚ್ ಕ್ಲಾಸೆನ್ ಮತ್ತು ವಿರಾಟ್ ಕೊಹ್ಲಿ ನಿನ್ನೆ ಪಂದ್ಯದಲ್ಲಿ ಶತಕ ಗಳಿಸಿದರು. ಕ್ಲಾಸೆನ್​ ಮೊದಲ ಇನ್ನಿಂಗ್ಸ್​ನಲ್ಲಿ 100 ರನ್​ ಮಾಡಿದರೆ, ಚೇಸಿಂಗ್ ಮಾಸ್ಟರ್​ ವಿರಾಟ್​ ಎರಡನೇ ಇನ್ನಿಂಗ್ಸ್​​ನಲ್ಲಿ ಶತಕ ಬರೆದರು. ಒಂದು ಪಂದ್ಯದಲ್ಲಿ ಎರಡು ಇನ್ನಿಂಗ್ಸ್​ನಲ್ಲಿ ಶತಕ ಬಂದ ಐಪಿಎಲ್​ನ ಮೊದಲ ಪಂದ್ಯ ಇದಾಗಿದೆ. ಆದರೆ, ಒಂದೇ ಇನ್ನಿಂಗ್ಸ್​ನಲ್ಲಿ ಎರಡು ಶತಕ ಬಂದ ದಾಖಲೆಗಳಿವೆ, ಇದನ್ನು ಮೊದಲು ವಿರಾಟ್​ ಮತ್ತು ಎಬಿ ಡಿವಿಲಿಯರ್ಸ್ ಮಾಡಿದ್ದರು. 2016 ರಲ್ಲಿ ಗುಜರಾತ್ ಲಯನ್ಸ್ ವಿರುದ್ಧ ಎಬಿಡಿ - ಕೊಹ್ಲಿ ಶತಕ ಮಾಡಿದ್ದರು. 2019 ರಲ್ಲಿ ಬೆಂಗಳೂರು ವಿರುದ್ಧ ಸನ್​ ರೈಸರ್ಸ್​ ಹೈದರಾಬಾದ್​ನ ಡೇವಿಡ್ ವಾರ್ನರ್ ಮತ್ತು ಜಾನಿ ಬೈರ್‌ಸ್ಟೋವ್ ಇದೇ ಮೈದಾನದಲ್ಲಿ ಶತಕ ಗಳಿಸಿದ್ದರು.

ಐಪಿಎಲ್​ ಆರನೇ ಶತಕ : ಕೊಹ್ಲಿ ಈಗ ಐಪಿಎಲ್‌ನಲ್ಲಿ 6 ಶತಕ ಸಿಡಿಸಿದ್ದಾರೆ. ಇದೀಗ ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಶತಕ ಸಿಡಿಸಿದ ಆಟಗಾರರ ಪೈಕಿ ಕ್ರಿಸ್ ಗೇಲ್ ಜೊತೆ ಜಂಟಿ ನಂಬರ್ ಒನ್ ಸ್ಥಾನದಲ್ಲಿ ಕೊಹ್ಲಿ ಇದ್ದಾರೆ. ಇದು ಎಲ್ಲಾ ಟಿ- 20 ಮಾದರಿಗಳಲ್ಲಿ ಕೊಹ್ಲಿ ಅವರ ಏಳನೇ ಶತಕವಾಗಿದೆ, ಇದು ಭಾರತೀಯರ ಅತಿ ಹೆಚ್ಚು ಶತಕವಾಗಿದೆ. ಈ ಮೂಲಕ ಕೆಎಲ್ ರಾಹುಲ್ ಮತ್ತು ರೋಹಿತ್ ಶರ್ಮಾ ಅವರ 6 ಶತಕಗಳ ದಾಖಲೆಯನ್ನು ವಿರಾಟ್​ ಬ್ರೇಕ್ ಮಾಡಿದ್ದಾರೆ.

IPL Records in SRH vs RCB Match RGI Stadium Hyderabad
ಹೆನ್ರಿಚ್ ಕ್ಲಾಸೆನ್ ಶತಕದ ಸಂಭ್ರಮ

ದಾಖಲೆಯ ಆರಂಭಿಕ ಜೊತೆಯಾಟ: ಈ ಐಪಿಎಲ್‌ನಲ್ಲಿ ಕೊಹ್ಲಿ ಮತ್ತು ಫಾಫ್ ಡು ಪ್ಲೆಸಿಸ್ 872 ರನ್‌ಗಳ ಜೊತೆಯಾಟವಾಡಿದ್ದಾರೆ. ಇದು ಐಪಿಎಲ್‌ನ ಒಂದೇ ಆವೃತ್ತಿಯಲ್ಲಿ ಆರಂಭಿಕ ಜೋಡಿ ಗಳಿಸಿದ ಅತಿ ಹೆಚ್ಚು ರನ್ ಆಗಿದೆ. 2016ರ ಐಪಿಎಲ್‌ನಲ್ಲಿ ಕೊಹ್ಲಿ ಮತ್ತು ಡಿವಿಲಿಯರ್ಸ್ ಇದುವರೆಗೆ ಗರಿಷ್ಠ 939 ರನ್ ಗಳಿಸುವ ಮೂಲಕ ಐಪಿಎಲ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಜೋಡಿ ಎನಿಸಿಕೊಂಡಿದ್ದಾರೆ.

ಮೂರನೇ ಅತಿದೊಡ್ಡ ಯಶಸ್ವಿ ಚೇಸ್: ಈ ಪಂದ್ಯದಲ್ಲಿ ಆರ್‌ಸಿಬಿ ತಂಡ 187 ರನ್‌ಗಳ ಗುರಿಯನ್ನು ಬೆನ್ನಟ್ಟಿದ ತಕ್ಷಣ, ಇದು ಐಪಿಎಲ್ ಇತಿಹಾಸದಲ್ಲಿ ಮೂರನೇ ಅತಿದೊಡ್ಡ ಯಶಸ್ವಿ ಚೇಸ್ ಆಯಿತು. ಇದಕ್ಕೂ ಮುನ್ನ ಈ ತಂಡ 2010ರಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ 204 ಮತ್ತು 2016ರಲ್ಲಿ ರೈಸಿಂಗ್ ಪುಣೆ ಸೂಪರ್‌ಜೈಂಟ್ಸ್ ವಿರುದ್ಧ 192 ರನ್ ಚೇಸ್ ಮಾಡುವ ಮೂಲಕ ಗೆದ್ದಿತ್ತು. ಈ ಎರಡೂ ಪಂದ್ಯಗಳು ಬೆಂಗಳೂರಿನಲ್ಲಿ ನಡೆದಿತ್ತು. 185 + ರನ್ ಗುರಿ ಬೆನ್ನು ಹತ್ತಿದ 36 ಪಂದ್ಯದಲ್ಲಿ ಆರ್​ಸಿಬಿ 32 ರಲ್ಲಿ ಸೋಲು ಕಂಡಿದೆ. ಆದರೆ ನಿನ್ನೆಯ ಚೇಸ್​ ನಾಲ್ಕನೇ ಯಶಸ್ವಿ ಮ್ಯಾಚ್​ ಆಗಿದೆ.

ವಿರಾಟ್​ ಕೊಹ್ಲಿ ಶತಕದ ನೆರವಿನಿಂದ ಈ ವರ್ಷದ ಐಪಿಎಲ್​ನಲ್ಲಿ 500 ರನ್​ ಗಳಿಕೆಯ ಗಡಿ ದಾಟಿದರು. ಆರೆಂಜ್​ ಕ್ಯಾಪ್​ ರೇಸ್​ನಲ್ಲಿ ನಾಲ್ಕನೇ ಸ್ಥಾನವನ್ನು ಗಳಿಸಿದ್ದಾರೆ. ಇನ್ನು ಒಂದು ಆವೃತ್ತಿಯ ಐಪಿಎಲ್​ನಲ್ಲಿ ​ಐವರು ಭಾರತೀಯರು ಶತಕಗಳಿಸಿದಂತಾಗಿದೆ. ವೆಂಕಟೇಶ್​ ಅಯ್ಯರ್​, ಯಶಸ್ವಿ ಜೈಸ್ವಾಲ್​, ಸೂರ್ಯ ಕುಮಾರ್​ ಯಾದವ್​, ಪ್ರಭ್​​ಸಿಮ್ರಾನ್​ ಮತ್ತು ವಿರಾಟ್​ ಈ ವರ್ಷ ಶತಕ ಗಳಿಸಿದ ಭಾರತೀಯ ಬ್ಯಾಟರ್​ ಆಗಿದ್ದಾರೆ. ಮೂರನೇ ಬಾರಿಗೆ ವಿರಾಟ್​ ಐಪಿಎಲ್​ನಲ್ಲಿ ಸಿಕ್ಸ್​ ಬಾರಿಸಿ ಶತಕ ದಾಖಲಿಸಿದ್ದಾರೆ. ಇದರಿಂದ ಆಶಿಮ್​ ಆಮ್ಲಾ ಅವರ ದಾಖಲೆಯನ್ನು ಹಿಂದಿಕ್ಕಿದ್ದಾರೆ.

ಇದನ್ನೂ ಓದಿ: ಯಶಸ್ವಿ ಜೊತೆಯಾಟದ ರಹಸ್ಯ ಬಿಚ್ಚಿಟ್ಟ ವಿರಾಟ್​ - ಫಾಫ್​: ಇಂಕ್​ ಬಾಯ್ಸ್​ ಸಂದರ್ಶನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.