ETV Bharat / sports

ಮ್ಯಾಕ್ಸ್​ವೆಲ್​ ಸ್ಫೋಟಕ ಬ್ಯಾಟಿಂಗ್​... ರಾಯಲ್ಸ್​ ವಿರುದ್ಧ ಗೆದ್ದ ವಿರಾಟ್​ ಪಡೆ

author img

By

Published : Sep 29, 2021, 9:36 PM IST

Updated : Sep 29, 2021, 11:02 PM IST

ಇಂಡಿಯನ್​ ಪ್ರೀಮಿಯರ್ ಲೀಗ್​ನ ಇಂದಿನ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್​ ವಿರುದ್ಧ ಆರ್​ಸಿಬಿ ಭರ್ಜರಿ ಗೆಲುವು ದಾಖಲು ಮಾಡಿದ್ದು, ಫ್ಲೇ-ಆಫ್​ಗೆ ಮತ್ತಷ್ಟು ಹತ್ತಿರವಾಗಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು vs ರಾಜಸ್ಥಾನ್ ರಾಯಲ್ಸ್
ರಾಯಲ್ ಚಾಲೆಂಜರ್ಸ್ ಬೆಂಗಳೂರು vs ರಾಜಸ್ಥಾನ್ ರಾಯಲ್ಸ್

ದುಬೈ: ಎವಿನ್ ಲೂಯಿಸ್​ ಅವರ ಅಬ್ಬರದ ಅರ್ಧಶತಕದ ಹೊರೆತಾಗಿಯೂ ರಾಜಸ್ಥಾನ್​ ರಾಯಲ್ಸ್ ದಿಢೀರ್​ ಕುಸಿತ ಕಂಡ ರಾಜಸ್ಥಾನ್​ ರಾಯಲ್ಸ್​ ಆರ್​ಸಿಬಿಗೆ ಕೇವಲ 150ರನ್​ಗಳ ಸಾಧಾರಣ ಟಾರ್ಗೆಟ್ ನೀಡಿದೆ.

150 ರನ್​ಗಳ ಸವಾಲಿನ ಮೊತ್ತ ಬೆನ್ನತ್ತಿದ ಆರ್​ಸಿಬಿಗೆ ನಾಯಕ ವಿರಾಟ್​ ಕೊಹ್ಲಿ ಹಾಗೂ ದೇವದತ್​ ಪಡಿಕ್ಕಲ್​ ಉತ್ತಮ ಆರಂಭವೊದಗಿಸಿದರು. ಈ ಜೋಡಿ 5.2 ಓವರ್​ಗಳಲ್ಲಿ 48ರನ್​ಗಳ ಜೊತೆಯಾಟ ನೀಡಿದರು. 22ರನ್​ಗಳಿಸಿದ್ದ ವೇಳೆ ಪಡಿಕ್ಕಲ್​ ವಿಕೆಟ್​ ಒಪ್ಪಿಸಿದರು. ಇದರ ಬೆನ್ನಲ್ಲೇ 25ರನ್​ಗಳಿಕೆ ಮಾಡಿದ್ದ ವಿರಾಟ್​ ಕೊಹ್ಲಿ ಕೂಡ ರನೌಟ್​ ಬಲೆಗೆ ಬಿದ್ದರು.

ಭರತ್​ ಮ್ಯಾಕ್ಸ್​ವೆಲ್​ ಆಸರೆ

ಆರಂಭಿಕ ವಿಕೆಟ್​ ಪತನಗೊಳ್ಳುತ್ತಿದ್ದಂತೆ ತಂಡಕ್ಕೆ ಭರತ್​-ಮ್ಯಾಕ್ಸ್​ವೆಲ್​ ಉತ್ತಮ ಆಸರೆಯಾದರು. ಈ ಜೋಡಿ 50ರನ್​ಗಳ ಜೊತೆಯಾಟವಾಡಿದ್ದು, ಬ್ಯಾಟಿಂಗ್ ಮುಂದುವರೆಸಿದ್ದಾರೆ. ಭರತ್​ 42ರನ್​ ಗಳಿಕೆ ಮಾಡಿದ್ದು ಮ್ಯಾಕ್ಸ್​ವೆಲ್​ 26ರನ್​ಗಳಿಸಿ ಬ್ಯಾಟ್ ಮಾಡ್ತಿದ್ದಾರೆ. ಸದ್ಯ ತಂಡದ ಗೆಲುವಿಗೆ 27ರನ್​ಗಳ ಅವಶ್ಯಕತೆ ಇದೆ.

ರಾಜಸ್ಥಾನ ರಾಯಲ್ಸ್ ಬ್ಯಾಟಿಂಗ್​

ಟಾಸ್​ ಸೋತು ದುಬೈ ಅಂತಾತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ಬ್ಯಾಟಿಂಗ್ ಆರಂಭಿಸಿದ ರಾಯಲ್ಸ್​ ಮೊದಲ ವಿಕೆಟ್​ಗೆ 77 ರನ್​ಗಳ ಜೊತೆಯಾಟ ನೀಡಿ ಭರ್ಜರಿ ಆರಂಭ ಒದಗಿಸಿತು. ಯಶಸ್ವಿ ಜೈಸ್ವಾಲ್​ ಕೇವಲ 22 ಎಸೆತಗಳಲ್ಲಿ 3 ಬೌಂಡರಿ ಮತ್ತು 2 ಸಿಕ್ಸರ್​ಗಳ ನೆರವಿನಿಂದ 31 ರನ್​ಗಳಿಸಿ ಡೇನಿಯಲ್​ ಕ್ರಿಶ್ಚಿಯನ್​ಗೆ ವಿಕೆಟ್​ ಒಪ್ಪಿಸಿದರು.

ಜೊತೆಗಾರ ಔಟಾದರು ತನ್ನ ಆರ್ಭಟ ಮುಂದುವರಿಸಿದ ಲೂಯಿಸ್ ಕೇವಲ 31 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಲೂಯಿಸ್​ ಆರ್​ಸಿಬಿ ಪರ ಪದಾರ್ಪಣೆ ಮಾಡಿದ್ದ ಜಾರ್ಜ್​ ಗಾರ್ಟನ್​ಗೆ ವಿಕೆಟ್​ ಒಪ್ಪಿಸುವ ಮುನ್ನ 37 ಎಸೆತಗಳಲ್ಲಿ 5 ಬೌಂಡರಿ ಮತ್ತು 3 ಸಿಕ್ಸರ್​ಗಳ ನೆರವಿನಿಂದ 58 ರನ್​ಗಳಿಸಿದರು.

ಲೂಯಿಸ್ ಔಟಾಗುತ್ತಿದ್ದಂತೆ ಪೆವಿಲಿಯನ್ ಪರೇಡ್ ನಡೆಸಿದ ರಾಯಲ್ಸ್​

ಇವರ ವಿಕೆಟ್​ ಬೀಳುತ್ತಿದ್ದಂತೆ ರಾಯಲ್ಸ್​ ಪತನ ಆರಂಭವಾಯಿತು. ಲೂಯಿಸ್ ನಂತರ ಬಂದ ಲಾಮ್ರೋರ್​ ಕೇವಲ 3 ರನ್​ಗಳಿಸಿ ಚಹಾಲ್​ಗೆ ವಿಕೆಟ್​ ಒಪ್ಪಿಸಿದರು. ಇನ್ನು ಕಳೆದ ಎರಡು ಪಂದ್ಯಗಳಲ್ಲಿ ಅರ್ಧಶತಕ ಸಿಡಿಸಿ ಮಿಂಚಿದ್ದ ನಾಯಕ ಸಾಮ್ಸನ್​ 15 ಎಸೆತಗಳಲ್ಲಿ 19 ರನ್​ಗಳಿಸಿ ಶಹ್ಬಾಜ್ ಅಹ್ಮದ್​ ಓವರ್​ನಲ್ಲಿ ಪಡಿಕ್ಕಲ್​ಗೆ ಕ್ಯಾಚ್​ ನೀಡಿ ಔಟಾದರು.

ರಾಯಲ್ ಚಾಲೆಂಜರ್ಸ್ ಬೆಂಗಳೂರು vs ರಾಜಸ್ಥಾನ್ ರಾಯಲ್ಸ್
ರಾಯಲ್ ಚಾಲೆಂಜರ್ಸ್ ಬೆಂಗಳೂರು vs ರಾಜಸ್ಥಾನ್ ರಾಯಲ್ಸ್

ತೆವಾಟಿಯಾ ಕೂಡ ಅದೇ ಓವರ್​ನ ಕೊನೆಯ ಎಸೆತದಲ್ಲಿ ಪಡಿಕ್ಕಲ್​ಗೆ ಕ್ಯಾಚ್​ ನೀಡಿ ಔಟಾದರು. ಭರವಸೆಯ ಬ್ಯಾಟರ್​ ಲವಿಂಗ್​ಸ್ಟೋನ್​ ಆಟವನ್ನು ಚಹಾಲ್ ಕೇವಲ 6ರನ್​ಗಳಿಗೆ ಅಂತ್ಯಗೊಳಿಸಿದರು. ಪರಾಗ್​ 14 ಸಕಾರಿಯಾ 2, ಕ್ರಿಸ್​ ಮೋರಿಸ್​ 14 ರನ್​ಗಳಿಗೆ ವಿಕೆಟ್ ಒಪ್ಪಿಸಿದರು.

ಆರ್​ಸಿಬಿ ಪರ ಹರ್ಷಲ್ ಪಟೇಲ್ 34ಕ್ಕೆ 3, ಯುಜ್ವೇಂದ್ರ ಚಹಲ್​ 18ಕ್ಕೆ 2, ಶಹ್ಬಾಜ್ ಅಹ್ಮದ್​ 10ಕ್ಕೆ 2 ಕ್ರಿಶ್ಚಿಯನ್ 21ಕ್ಕೆ1 ಮತ್ತು ಗಾರ್ಟನ್ 30ಕ್ಕೆ1 ವಿಕೆಟ್​ ಪಡೆದು ರಾಜಸ್ಥಾನ್ ತಂಡದ ಬೃಹತ್ ಮೊತ್ತದ ಕನಸನ್ನು ನುಚ್ಚುನೂರು ಮಾಡಿದರು

Last Updated :Sep 29, 2021, 11:02 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.