ETV Bharat / sports

ಡಬ್ಲ್ಯೂಟಿಸಿ: ವಿಶೇಷ ದಾಖಲೆ ಬರೆದ ಅಜಿಂಕ್ಯ ರಹಾನೆ

author img

By

Published : Feb 13, 2021, 10:59 PM IST

Ajinkya Rahane
ಅಜಿಂಕ್ಯ ರಹಾನೆ

ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ-ಇಂಗ್ಲೆಂಡ್ ಎರಡನೇ ಟೆಸ್ಟ್‌ನಲ್ಲಿ ರಹಾನೆ ವಿಶೇಷ ದಾಖಲೆ ಬರೆದರು.

ಚೆನ್ನೈ: ವಿಶ್ವ ಟೆಸ್ಟ್​ ಚಾಂಪಿಯನ್​​ಶಿಪ್​​ನಲ್ಲಿ (ಡಬ್ಲ್ಯೂಟಿಸಿ) 1000 ರನ್​ ಬಾರಿಸಿರುವ ಭಾರತದ ಟೆಸ್ಟ್​​ ತಂಡದ ಉಪನಾಯಕ ಅಜಿಂಕ್ಯ ರಹಾನೆ, ಏಷ್ಯಾದ ಮೊದಲ ಬ್ಯಾಟ್ಸ್‌ಮನ್‌ ಆಗಿ ಹೊರಹೊಮ್ಮಿದ್ದಾರೆ.

ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ-ಇಂಗ್ಲೆಂಡ್ ಎರಡನೇ ಟೆಸ್ಟ್‌ನಲ್ಲಿ ರಹಾನೆ ವಿಶೇಷ ದಾಖಲೆ ಬರೆದರು. 5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ ಬಂದಿದ್ದ ರಹಾನೆ, 31 ರನ್​ ಗಳಿಸಿದ್ದಾಗ ಈ ಸಾಧನೆ ಮಾಡಿದರು.

ಹೆಚ್ಚು ರನ್​ ಸ್ಕೋರರ್​ ಪಟ್ಟಿಯಲ್ಲಿ ರಹಾನೆ ಐದನೇ ಸ್ಥಾನದಲ್ಲಿದ್ದಾರೆ. ಆಸ್ಟ್ರೇಲಿಯಾದ ಮಾರ್ನಸ್​ ಲಬುಶೇನ್​ 1675 ರನ್​ ಬಾರಿಸಿ ಅಗ್ರ ಸ್ಥಾನದಲ್ಲಿದ್ದಾರೆ. ಎರಡನೇ ಸ್ಥಾನದಲ್ಲಿ ಜೋ ರೂಟ್ (1550 ರನ್​), 3ನೇ ಸ್ಥಾನದಲ್ಲಿ ಸ್ಟೀವ್​ ಸ್ಮಿತ್​ (1341), ನಾಲ್ಕನೇ ಸ್ಥಾನದಲ್ಲಿ ಬೆನ್​ಸ್ಟೋಕ್ಸ್​​ (1220) ನಂತರದ ಸ್ಥಾನದಲ್ಲಿ ರಹಾನೆ (1051) ಇದ್ದಾರೆ.

ಸದ್ಯ ನಡೆಯುತ್ತಿರುವ ಭಾರತ-ಇಂಗ್ಲೆಂಡ್ ನಾಲ್ಕು ಪಂದ್ಯಗಳ ಟೆಸ್ಟ್‌ ಸರಣಿಯು ಫೈನಲ್‌ ಸ್ಪರ್ಧಿಯನ್ನು ನಿರ್ಧರಿಸಲಿದೆ. ನ್ಯೂಜಿಲೆಂಡ್ ಈಗಾಗಲೇ ಫೈನಲ್‌ ಪ್ರವೇಶಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.