ETV Bharat / sports

ಟಾಸ್​ ಗೆದ್ದರೂ ಫೀಲ್ಡಿಂಗ್​ ಆಯ್ಕೆ: ಹೋಲ್ಡರ್​ ನಿರ್ಧಾರ ಸಮರ್ಥಿಸಿಕೊಂಡ ಬ್ರಾಥ್​ವೇಟ್​

author img

By

Published : Jul 25, 2020, 1:47 PM IST

ಮೊದಲ ದಿನದಾಟದಲ್ಲಿ ಇಂಗ್ಲೆಂಡ್​ 4 ವಿಕೆಟ್​ ಕಳೆದುಕೊಂಡು 258 ರನ್​ಗಳಿಸಿದೆ. ಜೋಸ್​ ಬಟ್ಲರ್​ ಹಾಗೂ ಪೋಪ್​ ಅದ್ಭುತ ಬ್ಯಾಟಿಂಗ್ ನಡೆಸಿ ಇಂಗ್ಲೆಂಡ್​ಗೆ ಆರಂಭಿಕ ಆಘಾತದಿಂದ ಚೇತರಿಸಿಕೊಳ್ಳಲು ನೆರವಾಗಿದ್ದರು.

rathwaite defends Holder's decision
ಜೇಸನ್ ಹೋಲ್ಡರ್​

ಮ್ಯಾಂಚೇಸ್ಟರ್​: ಎರಡನೇ ಟೆಸ್ಟ್​ನಲ್ಲಿ ಟಾಸ್​ ಗೆದ್ದು ಫೀಲ್ಡಿಂಗ್​ ನಿರ್ಧಾರ ತೆಗೆದುಕೊಂಡು ಕೈ ಸುಟ್ಟಿಕೊಂಡಿದ್ದ ವಿಂಡೀಸ್​ ನಾಯಕ ಹೋಲ್ಡರ್​ ಮೂರನೇ ಪಂದ್ಯದಲ್ಲೂ ಅದೇ ಟಾಸ್​ ಗೆದ್ದು ಮತ್ತೆ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದನ್ನು ಆರಂಭಿಕ ಬ್ಯಾಟ್ಸ್​ಮನ್​ ಕ್ರೈಗ್​ ಬ್ರಾತ್​ವೇಟ್​ ಸಮರ್ಥಿಸಿಕೊಂಡಿದ್ದಾರೆ.

ಮೊದಲ ದಿನದಾಟದಲ್ಲಿ ಇಂಗ್ಲೆಂಡ್​ 4 ವಿಕೆಟ್​ ಕಳೆದುಕೊಂಡು 258 ರನ್​ಗಳಿಸಿದೆ. ಜೋಸ್​ ಬಟ್ಲರ್​ ಹಾಗೂ ಪೋಪ್​ ಅದ್ಭುತ ಬ್ಯಾಟಿಂಗ್ ನಡೆಸಿ ಇಂಗ್ಲೆಂಡ್​ಗೆ ಆರಂಭಿಕ ಆಘಾತದಿಂದ ಚೇತರಿಸಿಕೊಳ್ಳಲು ನೆರವಾಗಿದ್ದರು.

" ಇದು ತುಂಬಾ ಸುಂದರವಾದ ದಿನವಾಗಿದೆ. ಮೊದಲು ಬೌಲಿಂಗ್ ಮಾಡುವುದು ನಮ್ಮ ಪೂರ್ವಯೋಜಿತವಾಗಿತ್ತು. ಏಕೆಂದರೆ ಪಿಚ್​​ನಲ್ಲಿ ತೇವಾಂಶವಿದ್ದ ಕಾರಣ ತಂಡ ಅದನ್ನು ಉಪಯೋಗಿಸಿಕೊಳ್ಳಬೇಕಿತ್ತು. ಆದರೆ ಅವರು( ಪೋಪ್​-ಬಟ್ಲರ್) ಜೊತೆಯಾಟ ನಡೆಸಿದರು. ಆದರೆ, ನಾವು ನಾಳೆ ಬೆಳಗ್ಗೆ ಆರಂಭದಿಂದಲೇ ಸ್ಕೋರ್​ ದರವನ್ನು ನಿಯಂತ್ರಿಸಿ ಅವರ ಮೇಲೆ ಒತ್ತಡ ಹೆಚ್ಚಿಸಿ ಬೇಗ ಕೆಲವು ವಿಕೆಟ್​ಗಳನ್ನು ಪಡೆಯುತ್ತೇವೆಂದು ನಾನು ಭಾವಿಸಿದ್ದೇನೆ" ಎಂದು ಬ್ರಾಥ್​ವೇಟ್​ ಹೇಳಿದ್ದಾರೆ.

ಹೊಸ ಚೆಂಡಿನಲ್ಲಿ ಆರಂಭಿಕ ವಿಕೆಟ್​ಗಳು ನಿರ್ಣಾಯಕವಾಗಿರುತ್ತವೆ. ನಾವು ಬೇಗನೆ ಒಂದು ವಿಕೆಟ್​ ಪಡೆಯದೆ, ಅವರು ಉಳಿಯಲು ಬಿಟ್ಟರೆ ಕಷ್ಟವಾಗುತ್ತದೆ. ವೋಕ್ಸ್​ ಕೂಡ ಬ್ಯಾಟಿಂಗ್​ ಮಾಡಬಲ್ಲವರಾದ್ದರಿಂದ ಆರಂಭದಲ್ಲೇ ಮೂರು ವಿಕೆಟ್​ಗಳ ಪಡೆಯಬೇಕಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ನಾವು ಮೊದಲ ಸೆಸೆನ್​ನ ಪ್ರಾರಂಭಿಸಿದಾಗ ಬಹಳ ಶಿಸ್ತುಬದ್ಧರಾಗಿರಬೇಕು. ಮೇಲ್ಮೈ ಗಟ್ಟಿಯಾದ ಚೆಂಡು ಯಾವಾಗಲೂ ಒಳ್ಳೆಯದು ಆದ್ದರಿಂದ ಹೊಸ ಚೆಂಡು ನಮಗೆ ನಿರ್ಣಾಯಕವಾಗಿರುತ್ತದೆ ಎಂದು ನಾನು ಭಾವಿಸುತ್ತೇನೆ. ಒಮ್ಮೆ ನಾವು ಕೆಲವು ಟೈಟ್​ ಓವರ್‌ಗಳೊಂದಿಗೆ ಎದುರಾಳಿಗಳ ಮೇಲೆ ಒತ್ತಡ ಹೇರಿ ಬೇಗನೆ ಕೆಲವು ವಿಕೆಟ್‌ಗಳನ್ನು ಪಡೆಯಬೇಕಿದೆ ಎಂದು ಅವರು ತಿಳಿಸಿದ್ದಾರೆ.

ಮೊದಲ ದಿನ ಇಂಗ್ಲೆಂಡ್​ ತಂಡ 122 ರನ್​ಗಳಿಸುವಷ್ಟರಲ್ಲಿ ಆರಂಭಿಕ 4 ವಿಕೆಟ್​ ಕಳೆದುಕೊಂಡಿತ್ತು. ಅದರಲ್ಲಿ ತಂಡದ ಆಧಾರ ಸ್ತಂಭಗಳಾದ ಜೋ ರೂಟ್(17)​ ಹಾಗೂ ಬೆನ್​ ಸ್ಟೋಕ್ಸ್​(20) ವಿಕೆಟ್​ ಕಳೆದುಕೊಂಡಿತ್ತು. ಆದರೆ, ಈ ಸಂದರ್ಭದಲ್ಲಿ ಒಂದಾದ ಪೋಪ್​ ಹಾಗೂ ಜೋಸ್​ ಬಟ್ಲರ್​ 5ನೇ ವಿಕೆಟ್​ಗೆ ಮುರಿಯದ 136 ರನ್​ಗಳ ಜೊತೆಯಾಟ ನಡೆಸಿ ಚೇತರಿಕೆ ನೀಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.