ETV Bharat / sports

ಆಫ್ರಿಕಾ ವಿರುದ್ಧದ ಟೆಸ್ಟ್​ ಸರಣಿ: ಕೊಹ್ಲಿ ನೇತೃತ್ವದ ಬಲಿಷ್ಠ ಬಳಗ ಪ್ರಕಟ, ವಿಹಾರಿ ಕಮ್​​ಬ್ಯಾಕ್​​​

author img

By

Published : Dec 8, 2021, 8:25 PM IST

ದಕ್ಷಿಣ ಆಫ್ರಿಕಾ ಪ್ರವಾಸಕ್ಕಾಗಿ ಟೀಂ ಇಂಡಿಯಾ ಟೆಸ್ಟ್​ ತಂಡ ಪ್ರಕಟಗೊಂಡಿದ್ದು, ಉಪನಾಯಕರಾಗಿ ರೋಹಿತ್ ಶರ್ಮಾ ಅವರನ್ನು ಆಯ್ಕೆ ಮಾಡಲಾಗಿದೆ. ಹೀಗಾಗಿ ಅಜಿಂಕ್ಯ ರಹಾನೆಗೆ ಉಪನಾಯಕನ ಸ್ಥಾನ ಕೈತಪ್ಪಿದೆ.

India test squad announced
India test squad announced

ನವದೆಹಲಿ: ಡಿಸೆಂಬರ್​​ 26ರಿಂದ ದಕ್ಷಿಣ ಆಫ್ರಿಕಾ ವಿರುದ್ಧ ಆರಂಭಗೊಳ್ಳಲಿರುವ ಮೂರು ಟೆಸ್ಟ್​​​ ಪಂದ್ಯಗಳ ಸರಣಿಗಾಗಿ ವಿರಾಟ್​​ ಕೊಹ್ಲಿ ನೇತೃತ್ವದ ಬಲಿಷ್ಠ 18 ಸದಸ್ಯರ ತಂಡ ಪ್ರಕಟಗೊಂಡಿದೆ. ತಂಡದಲ್ಲಿ ಕೆಲವೊಂದಿಷ್ಟು ಬದಲಾವಣೆ ಮಾಡಲಾಗಿದ್ದು, ಹನುಮ್​ ವಿಹಾರಿ ಟೆಸ್ಟ್​ ತಂಡಕ್ಕೆ ಕಮ್​​ಬ್ಯಾಕ್​ ಮಾಡಿದ್ದಾರೆ.

ನ್ಯೂಜಿಲ್ಯಾಂಡ್​​ ವಿರುದ್ಧದ ಟೆಸ್ಟ್​​​ ಪಂದ್ಯದಲ್ಲಿ ಅವಕಾಶ ಪಡೆದುಕೊಂಡಿದ್ದ ವಿಕೆಟ್​ ಕೀಪರ್​​ ಬ್ಯಾಟರ್​ ಶ್ರೀಕಾರ್​ ಭರತ್​​​ಗೆ ಕೊಕ್​​ ನೀಡಲಾಗಿದ್ದು, ತಂಡಕ್ಕೆ ವಿಕೆಟ್ ಕೀಪರ್​​ ರಿಷಭ್​ ಪಂತ್​​ ಮರಳಿದ್ದಾರೆ. ಇವರ ಜೊತೆಗೆ ಮತ್ತೋರ್ವ ವಿಕೆಟ್ ಕೀಪರ್​ ವೃದ್ಧಿಮಾನ್​​ ಸಹಾಗೆ ಇನ್ನೊಂದು ಅವಕಾಶ ನೀಡಲಾಗಿದೆ.

  • Squad: Virat Kohli (Capt),Rohit Sharma(vc), KL Rahul, Mayank Agarwal, Cheteshwar Pujara, Ajinkya Rahane, Shreyas Iyer, Hanuma Vihari, Rishabh Pant(wk), Wriddhiman Saha(wk), R Ashwin, Jayant Yadav, Ishant Sharma, Mohd. Shami, Umesh Yadav, Jasprit Bumrah, Shardul Thakur, Md. Siraj. pic.twitter.com/6xSEwn9Rxb

    — BCCI (@BCCI) December 8, 2021 " class="align-text-top noRightClick twitterSection" data=" ">

ಟೀಂ ಇಂಡಿಯಾ ಇಂತಿದೆ: ವಿರಾಟ್​​ ಕೊಹ್ಲಿ(ಕ್ಯಾಪ್ಟನ್​), ರೋಹಿತ್​ ಶರ್ಮಾ(ಉಪನಾಯಕ), ಮಯಾಂಕ್​​ ಅಗರವಾಲ್​, ಚೇತೇಶ್ವರ್​​ ಪೂಜಾರ, ಅಜಿಂಕ್ಯಾ ರಹಾನೆ, ಶ್ರೇಯಸ್​ ಅಯ್ಯರ್​, ಹನುಮ ವಿಹಾರಿ, ರಿಷಭ್​ ಪಂತ್(ವಿ.ಕೀ), ವೃದ್ಧಿಮಾನ್​ ಸಹಾ(ವಿ.ಕೀ), ಆರ್​.ಅಶ್ವಿನ್​​, ಜಯಂತ್​ ಯಾದವ್​, ಇಶಾಂತ್​ ಶರ್ಮಾ, ಮೊಹಮ್ಮದ್ ಶಮಿ, ಉಮೇಶ್ ಯಾದವ್​, ಜಸ್ಪ್ರೀತ್​ ಬುಮ್ರಾ, ಶಾರ್ದೂಲ್ ಠಾಕೂರ್​, ಮೊಹಮ್ಮದ್​ ಸಿರಾಜ್​

India test squad announced
ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್​ ಸರಣಿಗೆ ಟೀಂ ಇಂಡಿಯಾ ಪ್ರಕಟ

ಮೀಸಲು ಆಟಗಾರರು: ನವದೀಪ್ ಸೈನಿ, ಸೌರಭ್​ ಕುಮಾರ್​, ದೀಪಕ್​ ಚಹರ್​, ಅರ್ಜನ್​​ ನಾಗಸ್ವಾಲ್​​

ಕೋಚ್​ಗೆ ಮೊದಲ ವಿದೇಶಿ ಪ್ರವಾಸ: ರಾಹುಲ್ ದ್ರಾವಿಡ್ ಕೋಚ್ ಆದ ನಂತರ ಟೀಂ ಇಂಡಿಯಾದ ಮೊದಲ ವಿದೇಶಿ ಪ್ರವಾಸ ಇದಾಗಿದ್ದು, ಕಳಪೆ ಫಾರ್ಮ್​ ಹೊರತಾಗಿ ಕೂಡ ಟೀಂ ಇಂಡಿಯಾ ಇಶಾಂತ್​​ ಶರ್ಮಾಗೆ ಅವಕಾಶ ನೀಡಿದೆ. ಇನ್ನು ತಂಡದ ಉಪನಾಯಕನಾಗಿದ್ದ ರಹಾನೆ ಬ್ಯಾಟ್​ನಿಂದ ರನ್​ ಹರಿದು ಬರುತ್ತಿಲ್ಲ. ಇದರ ಹೊರತಾಗಿ ಕೂಡ ಚಾನ್ಸ್ ನೀಡಲಾಗಿದ್ದು, ಆಡುವ 11ರ ಬಳಗದಲ್ಲಿ ಕಾಣಿಸಿಕೊಳ್ಳುವುದು ಡೌಟ್​​ ಎನ್ನಲಾಗಿದೆ. ದಕ್ಷಿಣ ಆಫ್ರಿಕಾ ಪ್ರವಾಸಕ್ಕಾಗಿ ಟೀಂ ಇಂಡಿಯಾ ಕೇವಲ ಇಬ್ಬರು ಸ್ಪಿನ್ನರ್​​ಗಳೊಂದಿಗೆ ತೆರಳುತ್ತಿದ್ದು, ಇದರಲ್ಲಿ ಆರ್​.ಅಶ್ವಿನ್​​ ಮತ್ತು ಜಯಂತ್ ಯಾದವ್​ ಇದ್ದಾರೆ.

ಪ್ರಮುಖ ಪ್ಲೇಯರ್ಸ್​​​​​ ಕಮ್​ಬ್ಯಾಕ್​: ನ್ಯೂಜಿಲ್ಯಾಂಡ್​ ವಿರುದ್ಧದ ಟೆಸ್ಟ್​​ ಸರಣಿಯಿಂದ ವಿಶ್ರಾಂತಿ ಪಡೆದುಕೊಂಡಿದ್ದ ಕೆ.ಎಲ್​ ರಾಹುಲ್​, ರಿಷಭ್​ ಪಂತ್​, ಜಸ್ಪ್ರಿತ್ ಬುಮ್ರಾ ಹಾಗೂ ಮೊಹಮ್ಮದ್ ಶಮಿ ತಂಡಕ್ಕೆ ಮರಳಿದ್ದು, ಈ ಹಿಂದೆ ಆಸ್ಟ್ರೇಲಿಯಾ ವಿರುದ್ಧದ ಸಿಡ್ನಿ ಟೆಸ್ಟ್​​ ಪಂದ್ಯದಲ್ಲಿ ಟೀಂ ಇಂಡಿಯಾ ಪರ ಉತ್ತಮ ಪ್ರದರ್ಶನ ನೀಡಿದ್ದ ಹನುಮ್​​ ವಿಹಾರಿ ತಂಡಕ್ಕೆ ಕಮ್​​ಬ್ಯಾಕ್​ ಮಾಡಿದ್ದಾರೆ.

ಇನ್ನು ಗಾಯಗೊಂಡಿರುವ ಶುಬ್ಮನ್​ ಗಿಲ್​​, ರವೀಂದ್ರ ಜಡೇಜಾ, ಅಕ್ಸರ್​ ಪಟೇಲ್​ಗೆ ತಂಡದಿಂದ ಕೈಬಿಡಲಾಗಿದ್ದು, ವಿಕೆಟ್​ ಕೀಪರ್​ ಭರತ್​ಗೆ ಕೊಕ್ ನೂಡಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.