ETV Bharat / sports

ಹೈದರಾಬಾದ್ ಕ್ರಿಕೆಟ್​ ಅಸೋಸಿಯೇಶನ್‌ ಅಧ್ಯಕ್ಷ ಸ್ಥಾನದಿಂದ ಅಜರುದ್ದೀನ್​ ವಜಾ

author img

By

Published : Jun 17, 2021, 2:03 PM IST

Updated : Jun 17, 2021, 2:42 PM IST

ಸಂಸ್ಥೆಯ ನಿಯಮಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ಹೈದರಾಬಾದ್​ ಕ್ರಿಕೆಟ್​ ಅಸೋಸಿಯೇಶನ್‌ ಅಧ್ಯಕ್ಷ ಸ್ಥಾನದಿಂದ ಅಜರುದ್ದೀನ್​ ಅವರನ್ನು ವಜಾಗೊಳಿಸಲಾಗಿದೆ.

Azharuddin removed as president of Hyderabad Cricket Association
ಅಜರುದ್ಧೀನ್ ವಜಾ

ಹೈದರಾಬಾದ್: ಹೈದರಾಬಾದ್ ಕ್ರಿಕೆಟ್ ಅಸೋಸಿಯೇಶನ್‌ನ (ಹೆಚ್‌ಸಿಎ) ಅಪೆಕ್ಸ್ ಕೌನ್ಸಿಲ್ ಅಜರುದ್ದೀನ್ ಅವರನ್ನು ಹೆಚ್‌ಸಿಎ ಅಧ್ಯಕ್ಷ ಹುದ್ದೆಯಿಂದ ತೆಗೆದು ಹಾಕಿದೆ. ಅಜರ್ ವಿರುದ್ಧ ಬಾಕಿ ಇರುವ ಪ್ರಕರಣಗಳು ಇತ್ಯರ್ಥವಾಗುವವರೆಗೂ ಅವರನ್ನು ಹೊರಗಿಡುವುದಾಗಿ ಹೆಚ್​​ಸಿಎ ಹೇಳಿದೆ. ಸದಸ್ಯರ ದೂರುಗಳನ್ನು ಪರಿಗಣಿಸಿ ಅಜರ್​ ವಿರುದ್ಧ ಕ್ರಮಕೈಗೊಳ್ಳಲಾಗಿದೆ ಎಂದು ಅದು ತಿಳಿಸಿದೆ.

ಅಜರ್​ ಮೇಲಿರುವ ಆರೋಪ ಏನು?

ಅಜರ್ ಹೆಚ್​ಸಿಎ ನಿಯಮಗಳಿಗೆ ವಿರುದ್ಧವಾಗಿ ವರ್ತಿಸಿದ್ದಾರೆ ಎಂದು ಈ ತಿಂಗಳ ಅಪೆಕ್ಸ್ ಕೌನ್ಸಿಲ್ ಸಭೆಯಲ್ಲಿ ಶೋಕಾಸ್ ನೋಟಿಸ್​ ನೀಡಲು ನಿರ್ಧರಿಸಲಾಗಿತ್ತು ಎಂದು ಅಪೆಕ್ಸ್ ಕೌನ್ಸಿಲ್ ತಿಳಿಸಿದೆ. ಅಲ್ಲದೆ, ಕೌನ್ಸಿಲ್ ಅಜರುದ್ದೀನ್ ಅವರ ಹೆಚ್​​ಸಿಎ ಸದಸ್ಯತ್ವವನ್ನು ರದ್ದುಗೊಳಿಸಿದೆ. ಇತರ ರಾಜ್ಯ ಕ್ರಿಕೆಟ್ ಸಂಘಗಳ ಮುಂದೆ ಹೆಚ್​ಸಿಎ ಘನತೆಯನ್ನು ಕಡಿಮೆ ಮಾಡಿದ ಮತ್ತು ಸಂಸ್ಥೆಯ ನಿಯಮಗಳ ವಿರುದ್ಧ ನಿರ್ಧಾರಗಳನ್ನು ತೆಗೆದುಕೊಂಡ ಆರೋಪ ಅಜರ್ ಮೇಲಿದೆ.

ಅಜರ್​ಗೆ ಶೋಕಾಸ್ ನೋಟಿಸ್ ನೀಡಿದ ಸುಪ್ರೀಂ ಕೌನ್ಸಿಲ್, ಅವರ ಹೆಚ್‌ಸಿಎ ಸದಸ್ಯತ್ವ ರದ್ದುಗೊಳಿಸುವುದಾಗಿ ಘೋಷಿಸಿತ್ತು. ಸೆಪ್ಟೆಂಬರ್ 27 2019 ರಂದು ಅಜರುದ್ದೀನ್ ಹೆಚ್​ಸಿಎ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು.

ಹೆಚ್‌ಸಿಎಯ ಕಾರ್ಯ ಚಟುವಟಿಕೆಗಳಿಗೆ ತಡೆಯೊಡ್ಡಲು ಅಜರ್​ ಪ್ರಯತ್ನಿಸಿದ್ದಾರೆ. ಹೈದರಾಬಾದ್​ನ ದಿಲ್​ಸುಖ್ ನಗರ ಕೆನರಾ ಬ್ಯಾಂಕ್​​ ಶಾಖೆಯಲ್ಲಿದ್ದ ಸಂಸ್ಥೆಯ ಖಾತೆಯ ವಹಿವಾಟುಗಳನ್ನು ಉದ್ದೇಶಪೂರ್ವಕವಾಗಿ ನಿಲ್ಲಿಸಿದ್ದಾರೆ. ಈ ಮೂಲಕ ಅಪೆಕ್ಸ್ ಕೌನ್ಸಿಲ್​ನ ಹಣಕಾಸಿನ ವಹಿವಾಟುಗಳಿಗೆ ತಡೆಯೊಡ್ಡಲು ಪ್ರಯತ್ನಿಸಿದ್ದಾರೆ.

ಅಜರ್​ ದುಬೈನ ಖಾಸಗಿ ಕ್ರಿಕೆಟ್​ ಕ್ಲಬ್​ನ ಮುಖ್ಯಸ್ಥರಾಗಿದ್ದು, ಈ ಕ್ಲಬ್ ಟಿ20 ಯಲ್ಲಿ ಪಂದ್ಯಾವಳಿಯಲ್ಲಿ ಭಾಗವಹಿಸಿತ್ತು. ಆದರೆ, ಇದು ಬಿಸಿಸಿಐನಿಂದ ಮಾನ್ಯತೆ ಪಡೆದಿಲ್ಲ ಎಂಬ ಆರೋಪವನ್ನು ಹೆಚ್​​ಸಿಎ ಅಜರ್ ವಿರುದ್ಧ ಮಾಡಿದೆ.

ಇದನ್ನೂ ಓದಿ : ಕರ್ನಾಟಕದ ಮಾಜಿ ಕ್ರಿಕೆಟಿಗ ಬಿ.ವಿಜಯಕೃಷ್ಣ ನಿಧನ... ಸಿಎಂ ಬಿಎಸ್​ವೈ ಸಂತಾಪ

Last Updated :Jun 17, 2021, 2:42 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.