ETV Bharat / sports

IPL Final: ದಶಕಗಳ ಬಳಿಕ ಚಾಂಪಿಯನ್​ ಪಟ್ಟಕೇರಿದ​ ಕೆಕೆಆರ್​​ ​ - KKR won the IPL trophy

author img

By ETV Bharat Karnataka Team

Published : May 26, 2024, 10:35 PM IST

Updated : May 26, 2024, 11:06 PM IST

17ನೇ ಆವೃತ್ತಿಯ ಐಪಿಎಲ್​ನ ಫೈನಲ್​ ಪಂದ್ಯದಲ್ಲಿ ಸನ್​ ರೈಸರ್ಸ್​ ಹೈದರಾಬಾದ್​ ತಂಡವನ್ನು ಮಣಿಸಿ ಕೋಲ್ಕತ್ತಾ ನೈಟ್​ ರೈಡರ್ಸ್​ ಚಾಂಪಿಯನ್​ ಆಗಿ ಹೊರಹೊಮ್ಮಿದೆ.

ಐಪಿಎಲ್​ ಟ್ರೋಫಿ ಗೆದ್ದ ಕೋಲ್ಕತ್ತಾ ನೈಟ್​ ರೈಡರ್ಸ್​
ಐಪಿಎಲ್​ ಟ್ರೋಫಿ ಗೆದ್ದ ಕೋಲ್ಕತ್ತಾ ನೈಟ್​ ರೈಡರ್ಸ್​ (IANS)

ಚೆನ್ನೈ: ಐಪಿಎಲ್​ 17ನೇ ಆವೃತ್ತಿಯ ಚಾಂಪಿಯನ್​ ಆಗಿ ಕೋಲ್ಕತ್ತಾ ನೈಟ್​ ರೈಡರ್ಸ್​ ಹೊರಹೊಮ್ಮಿದೆ. ಎಂಎ ಚಿದಾಂಬರಂ ಮೈದಾನದಲ್ಲಿ ನಡೆದ ಫೈನಲ್​ ಪಂದ್ಯದಲ್ಲಿ ಸನ್​ ರೈಸರ್ಸ್​ ಹೈದರಾಬಾದ್​ ವಿರುದ್ಧ 8 ವಿಕೆಟ್​ಗಳ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ 10 ವರ್ಷಗಳ ಬಳಿಕ ಮೂರನೇ ಬಾರಿಗೆ ಚಾಂಪಿಯನ್​ ಪಟ್ಟಕ್ಕೇರಿತು.

ಹೈದರಾಬಾದ್ ​ನೀಡಿದ್ದ 114 ರನ್​ಗಳ ಸಾಮಾನ್ಯ ಗುರಿಯನ್ನು ಬೆನ್ನಟ್ಟಿದ ಐಯ್ಯರ್​ ಪಡೆ, ಕೇವಲ 10.3 ಓವರ್‌ಗಳಲ್ಲಿ 2 ವಿಕೆಟ್ ಕಳೆದುಕೊಂಡು ಪಂದ್ಯ ಹಾಗೂ ಪ್ರಶಸ್ತಿ ಗೆದ್ದುಕೊಂಡಿತು. ತಂಡದ ಪರ ವೆಂಕಟೇಶ್ ಅಯ್ಯರ್ 26 ಎಸೆತಗಳಲ್ಲಿ ಅಜೇಯ 52 ರನ್ ಗಳಿಸಿದರು. ರಹಮಾನುಲ್ಲಾ ಗುರ್ಬಾಜ್ 32 ಎಸೆತಗಳಲ್ಲಿ 39 ರನ್ ಕಲೆಹಾಕಿದರು. ಹೈದರಾಬಾದ್ ಪರ ಪ್ಯಾಟ್ ಕಮಿನ್ಸ್ ಮತ್ತು ಶಹಬಾಜ್ ಅಹ್ಮದ್ ತಲಾ ಒಂದು ವಿಕೆಟ್ ಪಡೆದರು.

ಎಸ್​ಆರ್​ಹೆಚ್​ ಬ್ಯಾಟಿಂಗ್​ ವೈಫಲ್ಯ: ಪಂದ್ಯದಲ್ಲಿ ಟಾಸ್ ಗೆದ್ದ ಮೊದಲು ಬ್ಯಾಟ್​ ಮಾಡಿದ್ದ ಹೈದರಾಬಾದ್ ಅತ್ಯಂತ ಕಳಪೆ ಬ್ಯಾಟಿಂಗ್​ನಿಂದಾಗಿ 18.3 ಓವರ್‌ಗಳಲ್ಲಿ 113 ರನ್​ಗಳಿಗೆ ಸರ್ವಪತನ ಕಂಡಿತು. ಇದರೊಂದಿಗೆ ಹೈದರಾಬಾದ್ ತಂಡವು ಐಪಿಎಲ್ ಇತಿಹಾಸದಲ್ಲಿ ಫೈನಲ್ ಪಂದ್ಯದಲ್ಲಿ ಅತಿ ಕಡಿಮೆ ಸ್ಕೋರ್ ಗಳಿಸಿದ ತಂಡವಾಗಿ ಕೆಟ್ಟ ದಾಖಲೆ ಬರೆಯಿತು. ಅಲ್ಲದೇ ಸಿಎಸ್​ಕೆ ದಾಖಲೆಯನ್ನು ಮುರಿಯಿತು. ಈ ಹಿಂದೆ ಚೆನ್ನೈ 2013ರ ಫೈನಲ್‌ನಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ 9 ವಿಕೆಟ್‌ಗೆ 125 ರನ್ ಗಳಿಸಿತ್ತು.

ಕೆಕೆಆರ್​ಗೆ 3ನೇ ಪ್ರಶಸ್ತಿ: ಕೆಕೆಆರ್ ಈ ಹಿಂದೆ 2012 ಮತ್ತು 2014ರ ಐಪಿಎಲ್ ಟೂರ್ನಿಯಲ್ಲಿ ಗೌತಮ್ ಗಂಭೀರ್ ನಾಯಕತ್ವದಲ್ಲಿ ಎರಡೂ ಬಾರಿ ಪ್ರಶಸ್ತಿಯನ್ನು ಗೆದ್ದಿತ್ತು. ಇದಾದ ಬಳಿಕ 2021ರ ಋತುವಿನಲ್ಲಿ, ಅವರು ಇಯಾನ್​ ಮಾರ್ಗನ್ ನಾಯಕತ್ವದಲ್ಲಿ ಫೈನಲ್ ತಲುಪಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ದ ಸೋಲನುಭವಿಸಿದ್ದರು. ಇದು ಕೆಕೆಆರ್ ತಂಡದ ನಾಲ್ಕನೇ ಫೈನಲ್ ಆಗಿದ್ದು, ಈ ಮೂಲಕ ಕೋಲ್ಕತ್ತಾ ಮೂರನೇ ಪ್ರಶಸ್ತಿ ಗೆದ್ದುಕೊಂಡಿದೆ.

ಇದನ್ನೂ ಓದಿ: ಗಾಯಕ್ಕೆ ತುತ್ತಾದ ನೀರಜ್​ ಚೋಪ್ರಾ: ಒಸ್ಟ್ರಾವ ಗೋಲ್ಡನ್ ಸ್ಪೈಕ್ ಟೂರ್ನಿಯಿಂದ ಔಟ್​ - Neeraj Chopra

Last Updated : May 26, 2024, 11:06 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.