ETV Bharat / sports

ಗಾಯಕ್ಕೆ ತುತ್ತಾದ ನೀರಜ್​ ಚೋಪ್ರಾ: ಒಸ್ಟ್ರಾವ ಗೋಲ್ಡನ್ ಸ್ಪೈಕ್ ಟೂರ್ನಿಯಿಂದ ಔಟ್​ - Neeraj Chopra

author img

By ANI

Published : May 26, 2024, 5:06 PM IST

ಜಾವೆಲಿನ್​ ಕ್ರೀಡಾಪಟು ನೀರಜ್​ ಚೋಪ್ರಾ ಸ್ನಾಯ ನೋವಿಗೆ ತುತ್ತಾಗಿದ್ದು, ಒಸ್ಟ್ರಾವ ಗೋಲ್ಡನ್ ಸ್ಪೈಕ್ 2024 ಟೂರ್ನಿಯಿಂದ ಹೊರಗುಳಿಯಲಿದ್ದಾರೆ.

ನೀರಜ್​ ಚೋಪ್ರಾ
ನೀರಜ್​ ಚೋಪ್ರಾ (IANS)

ಒಸ್ಟ್ರಾವ: ಒಲಿಂಪಿಕ್ ಚಿನ್ನದ ಪದಕ ವಿಜೇತ ಸ್ಟಾರ್​ ಜಾವೆಲಿನ್ ಪಟು ನೀರಜ್ ಚೋಪ್ರಾ ತರಬೇತಿಯ ವೇಳೆ ಸ್ನಾಯು ನೋವಿಗೆ ತುತ್ತಾಗಿದ್ದಾರೆ. ಇದರಿಂದಾಗಿ ಮುಂಬರುವ ಒಸ್ಟ್ರಾವ ಗೋಲ್ಡನ್ ಸ್ಪೈಕ್ 2024 ಅಥ್ಲೆಟಿಕ್ಸ್ ಮೀಟ್, ವಿಶ್ವ ಅಥ್ಲೆಟಿಕ್ಸ್ ಕಾಂಟಿನೆಂಟಲ್ ಟೂರ್ ಗೋಲ್ಡ್ ಲೇಬಲ್ ಈವೆಂಟ್‌ನಿಂದ ಹೊರಗುಳಿಯಲಿದ್ದಾರೆ. ಆದರೆ, ಮೇ 28ರಂದು ಈವೆಂಟ್​ನ ಉದ್ಘಾಟನಾ ಕಾರ್ಯಕ್ರಮದಲ್ಲಿ ನೀರಜ್ ಚೋಪ್ರಾ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದು ಕಾರ್ಯಕ್ರಮದ ಆಯೋಜಕರು ಶನಿವಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಎರಡು ವಾರಗಳ ಹಿಂದೆ ತರಬೇತಿಯ ವೇಳೆ ನೀರಜ್ ಸ್ನಾಯು ನೋವಿಗೆ ತುತ್ತಾಗಿದ್ದಾರೆ​. ಇದರಿಂದಾಗಿ ಒಸ್ಟ್ರಾವಾದ ಕ್ರೀಡಾ ಕೂಟದಲ್ಲಿ ಭಾಗವಹಿಸಲು ಸಾಧ್ಯವಾಗುವುದಿಲ್ಲ. ಆದರೆ ಅತಿಥಿಯಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದೆ. ನೀರಜ್ ಅನುಪಸ್ಥಿತಿಯಲ್ಲಿ ಜರ್ಮನಿಯ ವೆಬರ್ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ. ಯುರೋಪಿಯನ್ ಚಾಂಪಿಯನ್ ಜರ್ಮನಿಯ ಡೆಸ್ಸೌದಲ್ಲಿ ಶುಕ್ರವಾರ 88.37 ಮೀಟರ್​ ದೂರ ಎಸೆಯುವ ಮೂಲಕ ವರ್ಷದ ಮೂರನೇ ಅತ್ಯುತ್ತಮ ಪ್ರದರ್ಶನವನ್ನು ನೀಡಿದ್ದರು.

ನೀರಜ್​ ದೋಹಾ ಡೈಮಂಡ್ ಲೀಗ್‌ ಮೂಲಕ ವರ್ಷದ ಋತುವನ್ನು ಪ್ರಾರಂಭಿಸಿದ್ದರು. ಲೀಗ್​ನಲ್ಲಿ 88.36 ಮೀಟರ್‌ಗಳ ಅತ್ಯುತ್ತಮ ಎಸೆತದೊಂದಿಗೆ ಎರಡನೇ ಸ್ಥಾನ ಪಡೆದಿದ್ದರು. ನಂತರ ಈ ತಿಂಗಳ ಆರಂಭದಲ್ಲಿ, ಮೂರು ವರ್ಷಗಳ ಬಳಿಕ ಭುವನೇಶ್ವರದಲ್ಲಿ ನಡೆದ ಫೆಡರೇಶನ್ ಕಪ್ ಸೀನಿಯರ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಿದ್ದ ನೀರಜ್ 82.27 ಮೀಟರ್​ ಎಸೆಯುವ ಮೂಲಕ ಚಿನ್ನದ ಪದಕ ಗೆದ್ದಿದ್ದರು.

ಇದನ್ನೂ ಓದಿ: IPL ಫೈನಲ್‌ಗೆ ಕೆಂಪು ಮಣ್ಣಿನ ಪಿಚ್‌ ಬಳಕೆ: ಯಾವ ತಂಡಕ್ಕೆ ಲಾಭ? ಮಳೆ ಅಡ್ಡಿಪಡಿಸಿದ್ರೆ ಏನಾಗುತ್ತೆ? ಕಂಪ್ಲೀಟ್ ಡಿಟೇಲ್ಸ್‌ - IPL Final

ETV Bharat Logo

Copyright © 2024 Ushodaya Enterprises Pvt. Ltd., All Rights Reserved.