ಬೆಳಗಾವಿ: ನೀರಿನ ಟ್ಯಾಂಕ್ನೊಳಗೆ ಬಿದ್ದು ಎರಡೂವರೆ ವರ್ಷದ ಮಗು ಸಾವನ್ನಪ್ಪಿರುವ ಘಟನೆ ಬೆಳಗಾವಿ ನಗರದ ಕಂಗ್ರಾಳ ಗಲ್ಲಿಯಲ್ಲಿ ಭಾನುವಾರ ಮಧ್ಯಾಹ್ನ ನಡೆದಿದೆ. ಸಾಯೀಶಾ ಸಂದೀಪ ಬಡವನಾಚೆ ಮೃತಪಟ್ಟ ಮಗು.
ನೀರು ತುಂಬಿದೆಯೇ ಎಂದು ನೋಡಲು ಮನೆಯವರು ಟ್ಯಾಂಕಿನ ಮುಚ್ಚಳ ತೆರೆದಿದ್ದಾರೆ. ಈ ಸಂದರ್ಭದಲ್ಲಿ ಪಕ್ಕದಲ್ಲೇ ಆಟವಾಡುತ್ತಿದ್ದ ಮಗು ಟ್ಯಾಂಕ್ನೊಳಗೆ ಬಿದ್ದಿದೆ. ಇದನ್ನು ತಕ್ಷಣಕ್ಕೆ ಮನೆಯವರು ಗಮನಿಸಿಲ್ಲ. ಮಗು ಕಾಣದೇ ಇದ್ದಾಗ ಗಾಬರಿಯಾಗಿ ಎಲ್ಲೆಡೆ ಹುಡುಕಾಡಿದ್ದಾರೆ. ಆದರೂ ಸುಳಿವು ಸಿಕ್ಕಿರಲಿಲ್ಲ.
ಸಂಜೆಯ ವೇಳೆಗೆ ಟ್ಯಾಂಕಿನಲ್ಲಿ ಮಗು ಬಿದ್ದಿದ್ದು ಗೊತ್ತಾಗಿದೆ. ಆದರೆ, ಅಷ್ಟೊತ್ತಿಗೆ ಮಗು ಮೃತಪಟ್ಟಿತ್ತು. ಖಡೇ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಮಂಗಳೂರು: ಆಟೋ ತೋಡಿಗೆ ಬಿದ್ದು ಚಾಲಕ ಸಾವು; ಪಾಲಿಕೆ ವಿರುದ್ಧ ಪ್ರಕರಣ